--Ads--

ಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ,  ಕುರಿಗಳು ಸಾವು 

On: May 21, 2025 7:23 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ,  ಕುರಿಗಳು ಸಾವು

ಶಿಡ್ಲಘಟ್ಟ : ತಾಲ್ಲೂಕಿನ ಕುತ್ತಾಂಡಹಳ್ಳಿ ಗ್ರಾಮದಲ್ಲಿ ಕುರಿಗಳ ಹಿಂಡಿನ ಮೇಲೆ ಭಾನುವಾರ ತಡರಾತ್ರಿ ಹತ್ತಾರು ಬೀದಿ ನಾಯಿಗಳ ಗುಂಪು ದಾಳಿ ನಡೆಸಿ ಕುರಿಗಳ ಕತ್ತುಗಳನ್ನು ಕಚ್ಚಿ ಹಲ್ಲೆ ನಡೆಸಿದ ಪರಿಣಾಮ ಸುಮಾರು ೫ ಕುರಿಗಳು ಸಾವನ್ನಪ್ಪಿದ್ದು, ೪ ಕುರಿಗಳು ಗಂಭೀರ ಗಾಯಗೊಂಡಿವೆ.

ಕುತ್ತಾಂಡಹಳ್ಳಿ ಗ್ರಾಮದ ಮುನಿವೆಂಕಟರಾಯಪ್ಪ ಎಂಬುವರಿಗೆ ಸೇರಿದ ಕುರಿಗಳು ಕುರಿ ದೊಡ್ಡಿಯಲ್ಲಿದ್ದಾಗ, ದೊಡ್ಡಿಗೆ ನುಗ್ಗಿದ ಬೀದಿ ನಾಯಿಗಳು ಕುರಿಗಳ ಮೇಲೆ ದಾಳಿ ನಡೆಸಿವೆ. ಅನೇಕ ಕುರಿಗಳ ಹೊಟ್ಟೆ, ಕತ್ತುಗಳನ್ನು ಕಚ್ಚಿ ಸಾಯಿಸಿವೆ. ಸುಮಾರು ೦೯ ಕುರಿಗಳಲ್ಲಿ ೦೪ ಕುರಿಗಳು ಗಾಯಗೊಂಡಿದ್ದು ೦೫ ಕುರಿಗಳು ಸಾವನ್ನಪ್ಪಿವೆ.
ಸ್ಥಳಕ್ಕೆ ಪಶು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

WhatsApp

Join Now

Telegram

Join Now

Instagram

Join Now