--Ads--

ಜಿಲ್ಲೆಯಲ್ಲಿ ದಾಳಿಂಬೆ ಬೆಳೆ ನಷ್ಟ: 42 ಸಾವಿರ ಮಂದಿಗೆ ವಿಮಾ ಹಣ ಪಾವತಿ

On: May 24, 2026 4:53 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಜಿಲ್ಲೆಯಲ್ಲಿ ದಾಳಿಂಬೆ ಬೆಳೆ ನಷ್ಟ: 42 ಸಾವಿರ ಮಂದಿಗೆ ವಿಮಾ ಹಣ ಪಾವತಿ

ತುಮಕೂರು, ಮೇ 24- ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಡಿ (RwBcls)ಅಡಿಕೆ,ಮಾವು, ಪಪ್ಪಾಯಿ, ದಾಳಿಂಬೆ ಬೆಳೆಗಳಿಗೆ ವಿಮಾ ಸೌಲಭ್ಯವಿದ್ದು, ಕಳೆದ ಮೂರು ವರ್ಷದಲ್ಲಿ ಜಿಲ್ಲೆಯಲ್ಲಿ 41832 ಅರ್ಜಿ ನೊಂದಾಯಿಸಲ್ಪಟ್ಟಿದ್ದು 42.230 (ಸರ್ವೆ ನಂಬರ್ ಪ್ರಕಾರ) ಪ್ರಕರಣಗಳಿಗೆ 74,80,70 ಲಕ್ಷ ರೂ ವಿಮಾ ಹಣ ಪಾವತಿಸಲಾಗಿದೆ.

ಈ ವರ್ಷ ಸಿರಾ ತಾಲ್ಲೂಕಿನಲ್ಲಿ ವಿವಿಧ ಕಾರಣಗಳಿಂದ ಹಾನಿಯಾದ ದಾಳಿಂಬೆ ಬೆಳೆ ನಷ್ಟಕ್ಕೆ ಇಲಾಖೆ ಅಧಿಕಾರಿಗಳು ಸರ್ವೆ ಮಾಡಿ ನಷ್ಟದ ಅಂದಾಜು ತಯಾರಿಸಿ ಸರ್ಕಾರಕ್ಕೆ ಪರಿಹಾರ ನೀಡಲು ಪತ್ರ ಬರೆಯಲಾಗಿದೆ. ಜತೆಗೆ ఎమా కంపనిందలూ పరివార ದೊರಕಲಿದೆ.

ರಾಜ್ಯ ವಲಯ ಯೋಜನೆಯಡಿ 10,327 ಫಲಾನುಭವಿಗಳಿಗೆ ಮೂರು ವರ್ಷದಲ್ಲಿ 7005.96 ಹೆಕ್ಟೇರ್ ಪ್ರದೇಶಕ್ಕೆ 1185.16 ಲಕ್ಷ ರೂ ಸಹಾಯಧನ ನೀಡಿದೆ. ಜಿಲ್ಲಾ ವಲಯ ಯೋಜನೆಗಳಡಿ 579 ಫಲಾನುಭವಿಗಳಿಗೆ 3027.80 ಹೆಕ್ಟರ್ ಪ್ರದೇಶಕ್ಕೆ 359.8 ಲಕ್ಷ ರೂ ಸಹಾಯಧನ ನೀಡಲಾಗಿದೆ.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿವಿಧ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣೆ / ಪುನಶ್ವೇತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು 15711.48 ಹೆಕ್ಟೇರ್ ಪ್ರದೇಶಕ್ಕೆ 9132 ರೈತ ಫಲಾನುಭವಿಗಳಿಗೆ 1436,379 ដ D 4966.83 ບ ರೂ. ಸಹಾಯ ಧನ ನೀಡಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ವೈಯುಕ್ತಿಕ ನೀರು ಸಂಗ್ರಹಣ ಘಟಕ, ಫಾರಂ ಗೇಟ್, ಈರುಳ್ಳಿ ಶೇಖರಣ ಘಟಕ, ತೆಂಗು ಶೇಖರಣ ಘಟಕ, ತೋಟಗಾರಿಕೆಯಲ್ಲಿ ಗುಣಮಟ್ಟದ ಉತ್ಪಾದನೆಗಾಗಿ ವಿಶೇಷ ಉತ್ತೇಜನ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಕಳೆದ ಮೂರುವರ್ಷದಲ್ಲಿ 1515 ರೈತರಿಗೆ 2421.98 ಹೆಕ್ಟೇ‌ರ್ ಪ್ರದೇಶಕ್ಕೆ 632.04 ಲಕ್ಷ ರೂ ಸಹಾಯಧನ ವಿತರಿಸಲಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಶಾರದಮ್ಮ ಬಿ.ಸಿ.ತಿಳಿಸಿದ್ದಾರೆ.

ತೆಂಗು, ಅಡಿಕೆ ಬೆಳೆಗಳಿಗೆ ಹನಿ ನೀರಾವರಿ ಮುಖಾಂತರ ನೀರನ್ನು ಉಣಿಸುವುದರಿಂದ ಬೇಸಿಗೆ ಕಾಲದಲ್ಲಿ ಮರ ಒಣಗುವುದಿಲ್ಲ. ಬುಡದ ಸುತ್ತ ಗುಣಿ ಮಾಡಿ ಸಾವಯವ ಹೊದಿಕೆ (ಮಲ್ವಿಂಗ್) ಕೊಟ್ಟಿಗೆಗೊಬ್ಬರದ ಜತೆ ಪ್ರತಿ ಮರಕ್ಕೆ 50 ಗ್ರಾಂ ಬೋರಾಕ್ಸ್, 20 ಗ್ರಾಂ ಜಿಂಕ್ ಸಲ್ವೇಟ್ ಹಾಗೂ ಹಸಿರೆಲೆ ಗೊಬ್ಬರಗಳಾದ ಡಯಾಂಚ ಅಥವಾ ಸಣಬನ್ನು ಮರದ ಬುಡದ ಸುತ್ತ ಹಾಕುವುದರಿಂದ ದೀರ್ಘಕಾಲ ನೀರಿನ ಅಂಶವನ್ನು ಹಿಡಿದಿಟ್ಟು ಕೊಳ್ಳುವುದಲ್ಲದೆ ಮಣ್ಣಿನ ಫಲವತ್ತತೆ ಕೂಡ ಹೆಚ್ಚುತ್ತದೆ. ಇದರಿಂದ ಹರಳು ಉದುರುವುದು ಹಾಗೂ ಕೀಟ ರೋಗ ಬಾಧೆಗಳನ್ನು ನಿಯಂತ್ರಿಸಬಹುದು ಎಂದರು.

ಅಡಿಕೆ ಬೆಳೆಗಾರರುಬಿಸಿಲುಹೆಚ್ಚಾಗಿರುವುದರಿಂದ ಕಾಂಡದ ಸುತ್ತ ಸುಣ್ಣದ ನೀರನ್ನು ಲೇಪನ ಮಾಡುವುದರಿಂದ ಸೂರ್ಯನ ಕಿರಣಗಳು ನೇರವಾಗಿ ಕಾಂಡಕ್ಕೆ ಬೀಳುವುದರಿಂದ ಕಾಂಡ ಸೀಳುವುದು ಮತ್ತು ಗಿಡ ಒಣಗುವುದನ್ನು ತಡೆಗಟ್ಟುತ್ತದೆ. ಅಲ್ಲದೆ ಸದೃಢವಾದ ಕಾಂಡದ ಜತೆಗೆ ಉತ್ತಮ ಗಿಡ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ತರಕಾರಿ ಬೀಜಗಳನ್ನು ಅಥವಾ ಸಸಿಗಳನ್ನು ಬೇಸಿಗೆ ಹಂಗಾಮಿನಲ್ಲಿ ನಾಟಿ ಮಾಡುವ ಮುಂಚೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ನಂತರ ನಾಟಿ ಮಾಡಿದಲ್ಲಿ ಉತ್ತಮ ಬೆಳೆ ಮತ್ತು ಇಳುವರಿಯನ್ನು ಪಡೆಯಬಹುದಾಗಿದೆ. ಮಾವು, ಬಾಳೆ, ಸಪೋಟ ದಾಳಿಂಬೆ ಪಪ್ಪಾಯಿ ಮತ್ತಿತರ ಹಣ್ಣಿನ ಬೆಳೆಗಳಿಗೂ ಹನಿ ನೀರಾವರಿ ಮುಖೇನನೀರು ಉಣಿಸುವುದುಒಳ್ಳೆಯದು ಎಂದು ವಿವರಿಸಿದರು.

ಜಿಲ್ಲೆಯ ರೈತರು ಯಾವುದೇತೋಟಗಾರಿಕೆ ಬೆಳೆಗಳನ್ನು ನಾಟಿ ಮಾಡುವ ಅಥವಾ ಬೀಜ ಬಿತ್ತುವ ಮುನ್ನ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಹಾಗೂ ಸಂಬಂಧಪಟ್ಟ ಸಿಬ್ಬಂದಿ ವರ್ಗದವರನ್ನು ಭೇಟಿ ಮಾಡಿ ತಮ್ಮ ಜಮೀನಿನಲ್ಲಿ ಹಣ್ಣು ತರಕಾರಿ ಹೂ ಯಾವ ಬೆಳೆ ಬೆಳೆಯ ಬಹುದೆಂಬುದರ ಬಗ್ಗೆ ಸಲಹೆ ಮಾರ್ಗದರ್ಶನ ಪಡೆದು ಮುಂದುವರೆಯುವುದು ಸೂಕ್ತ, ಒಟ್ಟಾರೆ ರೈತರು ಏಕ ಬೆಳೆ ಯುವುದರ ಬದಲು ಹನಿನೀರಾವರಿ ಪದ್ಧತಿ ಅನುಸರಿಸಿಕೊಂಡು ಸಮರ್ಪಕ ನಾಟಿ ಗೊಬ್ಬರಗಳ ಬಳಕೆ ಮಾಡಿಕೊಂಡುಬಹುಬೆಳೆಗಳನ್ನು ಬೆಳೆದರೆ ರೈತರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ಸಿಗುವು   ದುಃಖ ಚಿತ್ತ  ರೈತರು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳುವುದರ ಜತೆಗೆ ಉತ್ತಮ ಲಾಭ ಪಡೆಯಬಹುದು.

ತುಮಕೂರು ಜಿಲ್ಲಾ ಕಚೇರಿಯಲ್ಲೂ ಸಹ ಜಿಲ್ಲೆಯ ಹತ್ತು ತಾಲ್ಲೂಕಿನ ರೈತರು ಬಂದು ಸಂಬಂಧಪಟ್ಟ ಅಧಿಕಾರಿಗಳ ಬಳಿ ತಮಗೆ ಅಗತ್ಯವಿರುವ ವಿಷಯಗಳ ಬಗ್ಗೆ ಹಾಗೂ ಇಲಾಖೆಯಿಂದ ಸಿಗುವ ಸಹಾಯ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಸಲಹೆ ಮಾರ್ಗದರ್ಶನ ಪಡೆಯಬಹುದಾಗಿದೆ.

WhatsApp

Join Now

Telegram

Join Now

Instagram

Join Now