--Ads--

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಬರಪೀಡಿತ ತಾಲ್ಲೂಕು ಘೋಷಿಸಿ ಎಂದು ತಹಶಿಲ್ದಾರ್ ಗೆ ಮನವಿ

On: July 23, 2026 4:18 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಬರಪೀಡಿತ ತಾಲ್ಲೂಕು ಘೋಷಿಸಿ ಎಂದು ತಹಶಿಲ್ದಾರ್ ಗೆ ಮನವಿ

ಶಿಡ್ಲಘಟ್ಟ : ಬರಗಾಲ ಪೀಡಿತವೆಂದು ತಾಲ್ಲೂಕನ್ನು ಘೋಷಿಸಿ, ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸಾಮೂಹಿಕ ಬಣದ ಸದಸ್ಯರು ತಹಸೀಲ್ದಾ‌ರ್ ಗಗನಸಿಂಧು ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಈ ವರ್ಷ ಜು.21ರ ವೇಳೆಗೆ ಸಾಮಾನ್ಯವಾಗಿ ಶೇ.60 ಮುಂಗಾರು ಬಿತ್ತನೆ ಪೂರ್ಣಗೊಳ್ಳಬೇಕಾಗಿತ್ತು ಆದರೆ ಮಳೆಯ ಕೊರತೆಯಿಂದ ಇದುವರೆಗೆ ಶೇ.10 ಬಿತ್ತನೆಯೂ ಆಗಿಲ್ಲ ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು,ಶಿಡ್ಲಘಟ್ಟ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಫಸಲು ವಿಮಾ ಯೋಜನೆಯಲ್ಲಿ ವಿಮಾ ಕಂಪೆನಿಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯುವಂತೆ ಹಾಗೂ ಯೋಜನೆಯಲ್ಲಿರುವ ಸಮಸ್ಯೆಗಳನ್ನು ಸರಿಪಡಿಸಬೇಕು, ಹಾಲಿನ ಖರೀದಿ ದರವನ್ನು ಹೆಚ್ಚಿಸಿ ರೈತರಿಗೆ ನೆರವಾಗಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಾಮೂಹಿಕ ಬಣದ ರಾಜ್ಯ ಉಪಾಧ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಪ್ರತೀಶ್‌ ,ಎಚ್.ಎನ್.ಕದಿರೇಗೌಡ, ಸುಭ್ರಮಣಿ, ಆಂಜಿನಪ್ಪ,ನವೀನ್ ಕುಮಾರ್, ಮುನೇಗೌಡ, ನವೀನ್ ಬಸವಪಟ್ಟಣ ಆಂಜಿನಪ್ಪ, ಯಣ್ಣಂಗೂರು ಈರಪ್ಪ, ಪ್ರಭುಗೌಡ,ಭೀಮಣ್ಣ, ನರಸಿಂಹಮೂರ್ತಿ,ರಾಮದಾಸ್, ಆಂಜಿನಪ್ಪ ಮುಂತಾದವರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now