ವಿಜಯ ದರ್ಪಣ ನ್ಯೂಸ್….
ಸೊರಕಾಯಲಹಳ್ಳಿ ಎಂಪಿಸಿಎಸ್ ವಾರ್ಷಿಕ ಸಾಮಾನ್ಯ ಸಭೆ

ಶಿಡ್ಲಘಟ್ಟ : ಆಡಳಿತ ಮಂಡಳಿ, ಸಿಬ್ಬಂದಿ ಹಾಲಿನ ಉತ್ಪಾದನಾ ಗುಣಮಟ್ಟ ಕಾಯ್ದುಕೊಂಡು ಹೋಗಬೇಕು ಒಕ್ಕೂಟದಿಂದ ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯ ಒದಗಿಸಿಕೊಡಲು ಬದ್ಧರಾಗಿದ್ದೇವೆ ಎಂದು ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಸೊರಕಾಯಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಏಳಿಗೆಗಾಗಿ ಸಂಘದ ಆಡಳಿತ ಮಂಡಳಿ ಜತೆಗೆ ಗ್ರಾಮದ ಹಾಲು ಉತ್ಪಾದಕರು ಗುಣಮಟ್ಟದ ಹಾಲು ಡೇರಿಗೆ ಪೂರೈಕೆ ಮಾಡಬೇಕು ,ಸಂಘ ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಘವು ಲಾಭದಲ್ಲಿ ನಡೆಯಲು ಸಹಕರಿಸಿದ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಚಿಮುಲ್ ನಿರ್ದೇಶಕ ಹುಜಗೂರು ರಾಮಣ್ಣ ಮಾತನಾಡಿ, ಸಂಘವು ಇಂದು 2 ರಿಂದ 3 ಲಕ್ಷ ರೂ.ಗಳ ಉಳಿತಾಯ ಮಾಡುವ ಮೂಲಕ ಅಚ್ಚುಕಟ್ಟಾಗಿ ನಿರ್ವಹಿಸಲ್ಪಡುತ್ತಿದೆ ಈ ಸಂಸ್ಥೆಯ ಬೆಳೆವಣಿಗೆಗೆ ಮುಖ್ಯ ಕಾರಣ ಹಾಲು ಉತ್ಪಾದಕರು ಎಂದರು.
ಶಿಬಿರ ಘಟಕದ ಇ ಓ ಎನ್ ಸತ್ಯನಾರಾಯಣ ಮಾತನಾಡಿ, ಸಂಘದ ಪ್ರಮುಖ ಆದಾಯದ ಮೂಲಗಳಾದ ಹಾಲಿನ ವ್ಯಾಪಾರ, ಜಾನುವಾರುಗಳ ಫೀಡ್ಸ್ ಮಾರಾಟ ಹಾಗೂ ಖರೀದಿ ಪ್ರಕ್ರಿಯೆಗಳ ವಿವರ ನೀಡಿದರು. ಸಂಘವು ಪ್ರಸ್ತುತ 1.33 ಲಕ್ಷ ರೂ.ನಿವ್ವಳ ಲಾಭಗಳಿಸಿದೆ ಎಂದರು.
ಸಂಘದ ಪಾರದರ್ಶಕ ಆಡಳಿತ ಮತ್ತು ರೈತರ ಸಹಕಾರವೇ ಈ ಆರ್ಥಿಕ ಬೆಳವಣಿಗೆಗೆ ಕಾರಣ ಪ್ರಸ್ತುತ ಸಾಲಿನಲ್ಲಿ ಸಂಘ ನಡೆಸಿರುವ ಸಮಗ್ರ ವ್ಯವಹಾರ ಹಾಗೂ ಆರ್ಥಿಕ ಪ್ರಗತಿಯ ವಿವರಗಳನ್ನು ಸಭೆಯ ಮುಂದೆ ಅವರು ಮಂಡಿಸಿದರು.
ಈ ಸಂದರ್ಭದಲ್ಲಿ ಸೊರಕಾಯಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಸುರೇಶ್, ಉಪಾಧ್ಯಕ್ಷ ಮಹಬೂಬ್ ಪಾಷಾ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಟಿ.ಎಲ್.ಅಂಬರೀಶ್, ಶಿಡ್ಲಘಟ್ಟ ಶಿಬಿರ ಘಟಕದ ಉಪವ್ಯವಸ್ಥಾಪಕ ಬಿ.ಆರ್. ರವಿಕಿರಣ್, ಗ್ರಾಪಂ ಮಾಜಿ ಅಧ್ಯಕ್ಷ ಆರ್.ನಂಜಪ್ಪ, ಮಾಜಿ ಸದಸ್ಯೆ ಮದ್ದೂರಮ್ಮ ಮುನಿರಾಜು, ಸಂಘದ ನಿರ್ದೇಶಕರಾದ ಎಸ್.ವಿಕೃಷ್ಣಪ್ಪ,ಸುಧಾಕರ, ನರಸಿಂಹಯ್ಯ, ಕೃಷ್ಣಪ್ಪ, ಬಲರಾಮ, ರಾಮಕೃಷ್ಣಪ್ಪ, ಸುಗುಣಮ್ಮ, ಪಿಳ್ಳಮ್ಮ, ಲೆಕ್ಕಪರಿಶೋಧಕ ಎಸ್.ಎಂ.ದಾಸ್, ಮುಖ್ಯ ಎಸ್.ಎಂ.ರವಿಚಂದ್ರ, ಕಾರ್ಯನಿರ್ವಾಹಕ ನಾಗಚಂದ್ರ.ವಿ, ಹಾಲು ಪರೀಕ್ಷಕ ಮುನಿರಾಜು ಇನ್ನೀತರರು ಹಾಜರಿದ್ದರು.
,₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಆ. 25 :
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ವತಿಯಿಂದ 2026-27 ನೇ ಸಾಲಿಗೆ ಸ್ವಾವಲಂಬಿ ಸಾರಥಿ ಯೋಜನೆ, ವಿದೇಶ ವ್ಯಾಸಂಗ ಸಾಲ ಯೋಜನೆ, ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹ ಯೋಜನೆ, ಸಾಂತ್ವಾನ ಯೋಜನೆ, ವ್ಯಾಪಾರ/ಉದ್ಯಮಿಗಳಿಗೆ ನೇರಸಾಲ(Directioan), ಗಂಗಾ ಕಲ್ಯಾಣ ಯೋಜನೆ ಸೇರಿ ಎಲ್ಲಾ ಯೋಜನೆಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್ಲೈನ್ ಮೂಲಕ ಅರ್ಜಿಗಳ ಆಹ್ವಾನಿಸಲಾಗಿದೆ.
ಈ ಯೋಜನೆಗಳಿಗೆ ಸಾಲ ಪಡೆಯಲು ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ್, ಬೌದ್ಧರು, ಸಿಖ್, ಪಾರ್ಸಿ ಸಮುದಾಯದವರು kmdconline.karnataka.gov.in ವೆಬ್ಸೈಟ್ ಮೂಲಕ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.
ಸೆಪ್ಟೆಂಬರ್ 17 ಅರ್ಜಿ ಸಲ್ಲಿಸಲು ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕು, ಹೊಸ ಬಸ್ ನಿಲ್ದಾಣ ಹಿಂಭಾಗ, ಯಲಹಂಕ ಬೀದಿ, D.N. ಮಂಜುನಾಥ ಕಾಂಪ್ಲೆಕ್ಸ್, ನಂ: 19-14-143, 1 ನೇ ಮಹಡಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), ಜಿಲ್ಲಾ ವ್ಯವಸ್ಥಾಪಕರು ಹಾಗೂ ದೂರವಾಣಿ ಸಂಖ್ಯೆ: 080-27681786, ಸಹಾಯವಾಣಿ ಸಂಖ್ಯೆ: 8277799990 ಅನ್ನು ಸಂಪರ್ಕಿಸಬಹುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







