--Ads--

ಪ್ರಾಮಾಣಿಕ ಸೇವೆಯಿಂದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ : ಡಾಲ್ಫಿನ್ ಎ.ನಾಗರಾಜ್

On: September 10, 2026 5:03 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಪ್ರಾಮಾಣಿಕ ಸೇವೆಯಿಂದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ : ಡಾಲ್ಫಿನ್ ಎ.ನಾಗರಾಜ್

ಶಿಡ್ಲಘಟ್ಟ : ಹಿಂದಿನ ಆಡಳಿತ ಮಂಡಳಿಗಳು ಸಂಘಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದು ಸಿಬ್ಬಂದಿಯ
ಪ್ರಾಮಾಣಿಕ ಸೇವೆಯಿಂದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಂಘವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಡಾಲ್ಫಿನ್ ಎ.ನಾಗರಾಜ್ ತಿಳಿಸಿದರು.

ತಾಲ್ಲೂಕಿನ ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆವರಣದಲ್ಲಿ ಅಧ್ಯಕ್ಷ ಬಿ.ಪಿ.ಹೇಮಂತ್ ಕುಮಾ‌ರ್ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಡಿಸಿಸಿ ಬ್ಯಾಂಕ್ ನ ಹಿಂದಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡರ ಅವಧಿಯಲ್ಲಿ ಮಹಿಳಾ ಸಂಘಗಳಿಗೆ ಬಡ್ಡಿ ಕಟ್ಟಬೇಡಿ ಎಂದು ಸೂಚಿಸಿದ್ದರಿಂದ ಬ್ಯಾಂಕ್ ಗೆ ಸುಮಾರು 100 ಕೋಟಿ ರೂ.ಗಳು ನಷ್ಟವಾಗಿದೆ, ಈಗ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಸಕ ಕೊತ್ತೂರು ಮಂಜುನಾಥ್ ಅವರು ಶುದ್ಧಹಸ್ತರಾಗಿದ್ದು, ಎರಡು ಜಿಲ್ಲೆಗಳ ಬ್ಯಾಂಕ್ ಗಳಿಗೆ ಶಕ್ತಿ ತುಂಬಲಿದ್ದಾರೆ ಮಳ್ಳೂರು ಸಂಘಕ್ಕೆ 10 ಕೋಟಿ ರೂ.ಗಳ ಸಾಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಳ್ಳೂರು ಸಂಘವು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದು 2025-26ನೇ ಸಾಲಿನಲ್ಲಿ 10.07 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಪ್ರಶಂಸಿದರು.

ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ.ಹೇಮಂತ್ ಕುಮಾರ್ ಮಾತನಾಡಿ, ಸಂಘದ ವ್ಯಾಪ್ತಿಯಲ್ಲಿ 142 ಮಹಿಳಾ ಸ್ವಸಹಾಯ ಸಂಘಗಳಿದ್ದು, ಎಲ್ಲ ಸಂಘಗಳೂ ಸಾಲ ಮರುಪಾವತಿ ಮಾಡಿವೆ ,
ಸಂಘದಲ್ಲಿ 1,382 ಸದಸ್ಯರಿದ್ದು, 555 ಮಂದಿಗೆ 9.62 ಕೋಟಿ ರೂ.ಗಳ ಕೆಸಿಸಿ ಸಾಲ ನೀಡಲಾಗಿದೆ ಎಂದರು.

ರಸಗೊಬ್ಬರ ಮಾರಾಟದಿಂದ 80 ಲಕ್ಷ ರೂ.ಗಳ ವಹಿವಾಟು ನಡೆದಿದೆ ಷೇರುದಾರರ 1.12 ಕೋಟಿ ರೂ.ಗಳ ಠೇವಣಿಯನ್ನು ಡಿಸಿಸಿ ಬ್ಯಾಂಕ್‌ ನಲ್ಲಿ ಇರಿಸಲಾಗಿದೆ’ ಎಂದು ವಿವರಿಸಿದರು.

ಸಿಇಒ ಎಂ.ಎಸ್‌.ಮಂಜುನಾಥ್ ವಾರ್ಷಿಕ ವರದಿ ಮಂಡಿಸಿದರು ,ಸಂಘದ ಚುನಾವಣೆಗೆ ಉಳಿತಾಯದ ಹಣ ಬಳಸದೆ, ಸ್ಪರ್ಧಿಸುವ ಅಭ್ಯರ್ಥಿಗಳೇ ಚುನಾವಣಾ ವೆಚ್ಚ ಭರಿಸಬೇಕು ಎಂದು ಷೇರುದಾರರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್.ಅಣ್ಣಪ್ಪ,ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಎಸ್.ಆನಂದ್‌, ನಿರ್ದೇಶಕರಾದ ಎಂ.ಆರ್.ಮುನಿಕೃಷ್ಣಪ್ಪ,ಕೆ.ಮುನಿರಾಜು, ಬಿ.ಎಂ.ವೆಂಕಟರೆಡ್ಡಿ,ಆರ್.ನಿಶಾಂತ್, ಎಂ.ಎನ್.ಶ್ರೀನಿವಾಸಮೂರ್ತಿ,ಎ.ಬಿ.ನಾಗರಾಜ್‌,
ಟಿ.ಎಸ್.ಶಶಿಕಲಾ ಸಿ.ಎಂ.ರತ್ನಮ್ಮ, ಪ್ರತಿನಿಧಿ ಬಿ.ಮಿಲನಶ್ರೀ, ಮುಖಂಡರಾದ ನಾರಾಯಣಸ್ವಾಮಿ, ಕದಿರಪ್ಪ ಹಾಗೂ ಸಿಬ್ಬಂದಿವರ್ಗ ಹಾಜರಿದ್ದರು.

WhatsApp

Join Now

Telegram

Join Now

Instagram

Join Now