--Ads--

DCC ಬ್ಯಾಂಕ್ ಆರ್ಥಿಕವಾಗಿ ಸುಸ್ಥಿರವಾಗಿದೆ : ನಿರ್ದೇಶಕ ನಾಗರಾಜ್

On: September 26, 2026 4:29 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

DCC ಬ್ಯಾಂಕ್ ಆರ್ಥಿಕವಾಗಿ ಸುಸ್ಥಿರವಾಗಿದೆ : ನಿರ್ದೇಶಕ ನಾಗರಾಜ್

ಶಿಡ್ಲಘಟ್ಟ : ತಾಂತ್ರಿಕ ಕಾರಣಗಳಿಂದಾಗಿ ಈ ಹಿಂದೆ DCC ಬ್ಯಾಂಕ್ ಗೆ ಆಡಳಿತ ಮಂಡಳಿ ಇರಲಿಲ್ಲ ಇದೀಗ ಎಲ್ಲ ಸಮಸ್ಯೆಗಳು ಬಗೆಹರಿದಿದ್ದು, ಆಡಳಿತ ಮಂಡಳಿ ರಚನೆಯಾಗಿದೆ ಇತ್ತೀಚೆಗೆ ಮೊದಲ ಸಭೆ ನಡೆದಿದ್ದು ರೈತರು ಮತ್ತು ಸ್ತ್ರೀಶಕ್ತಿ ಸಂಘಗಳ ಪರವಾಗಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು
ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾಲ್ಪಿನ್ ನಾಗರಾಜ್ ತಿಳಿಸಿದರು.

ನಗರದ ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ DCC ಬ್ಯಾಂಕ್ ನಿಂದ ಸ್ತ್ರೀಶಕ್ತಿ ಸಂಘಗಳು ಪಡೆದಿರುವ ಸಾಲ ಹಾಗೂ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂಬ ವದಂತಿ ಹರಡಿತ್ತು ಇದರಿಂದ ಕೆಲವು ಸಂಘಗಳ ಸದಸ್ಯರು ಸಾಲ ಮತ್ತು ಬಡ್ಡಿ ಪಾವತಿಸಿರಲಿಲ್ಲ ಪರಿಣಾಮ ಬ್ಯಾಂಕ್ ಆರ್ಥಿಕ ಸಂಕಷ್ಟ ಎದುರಿಸಿದ್ದು ನಿಜ ಆದರೆ ಅದನ್ನು ಮೆಟ್ಟಿ ನಿಂತು ಇದೀಗ ಬ್ಯಾಂಕ್‌ ಸದೃಢವಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಆರ್ಥಿಕವಾಗಿ ಸುಸ್ಥಿರವಾಗಿದ್ದು, ಗ್ರಾಹಕರು ಯಾವುದೇ ಅನುಮಾನವಿಲ್ಲದೆ ಬ್ಯಾಂಕ್ ನಲ್ಲಿ ಠೇವಣಿ ಇಟ್ಟು ವ್ಯವಹರಿಸಬಹುದು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ಸಹಕಾರ ಸಂಘಗಳು ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸುತ್ತಿವೆ ,ಸಭೆಯಲ್ಲಿ ಸಂಘದ ಆಡಳಿತ ಸ್ಥಿತಿ, ಹಣಕಾಸು ವ್ಯವಹಾರ, ಲಾಭ-ನಷ್ಟ ಹಾಗೂ ವಿವಿಧ ಯೋಜನೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಹಸಿರು ಸೇನೆ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಬರದಿಂದ ರೈತರು
ಸಂಕಷ್ಟದಲ್ಲಿದ್ದು DCC ಬ್ಯಾಂಕ್‌ ಸೇರಿದಂತೆ ಸಹಕಾರ ಬ್ಯಾಂಕ್ ಗಳು ರೈತರು ಮತ್ತು ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಿ, ಅವರ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ 2025-26ನೇ ಸಾಲಿನ ವಾರ್ಷಿಕ ಬಜೆಟ್‌ ಮಂಡಿಸಿ ಅನುಮೋದನೆ ಪಡೆಯಲಾಯಿತು , ಲಾಭ-ನಷ್ಟದ ವರದಿಯನ್ನೂ ಮಂಡಿಸಲಾಯಿತು

ಈ ಸಂದರ್ಭದಲ್ಲಿ ಟೌನ್ ಎಸ್.ಎಪ್.ಸಿ.ಎಸ್. ಅದ್ಯಕ್ಷ ರಾಮಚಂದ್ರಪ್ಪ,ಉಪಾಧ್ಯಕ್ಷೆ ಎಂ.ಶೋಭಾರಾಣಿ,
DCC ಬ್ಯಾಂಕ್ ವ್ಯವಸ್ಥಾಪಕ ಆನಂದ್ , ನಿರ್ದೇಶಕರಾದ
ಬಿ.ನಾರಾಯಣಸ್ವಾಮಿ, ನರಸಿಂಹಮೂರ್ತಿ,
ಪಿಎನ್.ಪ್ರಶಾಂತ್,ಕೆ.ವೆಂಕಟೇಶಪ್ಪ, ಎನ್.ನರಸಿಂಹಯ್ಯ, ನಾರಾಯಣಪ್ಪ ಪ್ರಭಾವತಿ, ನಳಿನಾಶಶಿಧ‌ರ್, ಕಾರ್ಯನಿರ್ವಾಹಕ ಅಧಿಕಾರಿ ಕೆ.ದೇವಿಕಾ ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now