ವಿಜಯ ದರ್ಪಣ ನ್ಯೂಸ್….
ತಾಂಡವಪುರ ಗ್ರಾಮದ ಶ್ರೀ ಬಸವೇಶ್ವರ ಯುವಕರ ಸಂಘದ ವತಿಯಿಂದ ಅದ್ದೂರಿ ಗಣೇಶೋತ್ಸವ ಕಪಿಲ ನದಿಯಲ್ಲಿ ವಿಸರ್ಜನೆ

ತಾಂಡವಪುರ ಸೆಪ್ಟೆಂಬರ್ 25 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸುರುವ ತಾಂಡವಪುರ ಗ್ರಾಮದ ಶ್ರೀ ಬಸವೇಶ್ವರ ಯುವಕರ ಸಂಘದ ವತಿಯಿಂದ ಅದ್ದೂರಿಯಾಗಿ ಗೌರಿ ಗಣೇಶ ಹಬ್ಬವನ್ನು ಆಚರಿಸಿ ಕಪಿಲ ನದಿಯಲ್ಲಿ ವಿಸರ್ಜನೆ ಮಾಡಿದರು
ಗ್ರಾಮದ ಮಠದಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಕಳೆದು ಒಂದು ವಾರಗಳಿಂದ ಪ್ರತಿದಿನ ವಿಶೇಷ ಪೂಜೆ ಅಭಿಷೇಕ ಮಾಡುವ ಮೂಲಕ ಭಕ್ತಿ ಭಾವದಿಂದ ಗೌರಿ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿದರು
ಗಣೇಶ್ ಮೂರ್ತಿಯನ್ನು ಟ್ರಾಕ್ಟರ್ ನಲ್ಲಿ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪಟಾಕಿ ಸಿಡಿಸಿ ಭಕ್ತಿ ಭಾವದಿಂದ ಪೂಜಿ ಸಲ್ಲಿಸಿ ಅದ್ದೂರಿಯಾಗಿ ಗಣೇಶ ಉತ್ಸವವನ್ನು ಆಚರಿಸಲಾಯಿತು
ಗಣೇಶನ ಮೆರವಣಿಗೆ ಎಂದರೆ ಭಯ ಭೀತಿಯಿಂದ ಆಚರಿಸುವ ವಾತಾವರಣ ನಿರ್ಮಾಣವಾಗಿದೆ ಆದರೆ ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮಸ್ಥರು ಭಕ್ತಿ ಭಾವದಿಂದ ಶಾಂತಿಯುತವಾಗಿ ಸ್ನೇಹ ಸೌವಾದ ಹಿತವಾಗಿ ಗ್ರಾಮಸ್ಥರು ಗಣೇಶನ ಹಬ್ಬವನ್ನು ಹಾಗೂ ಮೆರವಣಿಗೆಯನ್ನು ಆಚರಿಸುತ್ತಿರುವುದು ವಿಶೇಷವಾಗಿತ್ತು
ಮುನ್ನೆಚರಿಕೆ ಕ್ರಮವಾಗಿ ನಂಜನಗೂಡು ಗ್ರಾಮಾಂತರ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದರು
ಈ ಸಂದರ್ಭದಲ್ಲಿ ಗ್ರಾಮದ ಗೌಡಿಕೆ ಶಿವಣ್ಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಮಹಾದೇವ ಮಧು ಪಾಟೀಲ್ ಹಾಗೂ ಶ್ರೀ ಬಸವೇಶ್ವರ ಯುವಕರ ಸಂಘದ ಪದಾಧಿಕಾರಿಗಳು ಗ್ರಾಮದ ಮುಖಂಡರುಗಳು ಹಾಜರಿದ್ದರು











