ವಿಜಯ ದರ್ಪಣ ನ್ಯೂಸ್……
ಬಸವೇಶ್ವರ ವಾಣಿಜ್ಯ, ಕಲಾ, ಮತ್ತು ವಿಜ್ಞಾನ ಮಹಾವಿದ್ಯಾಲಯ ಕಾಲೇಜಿನಲ್ಲಿ ‘ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ’ ಆಚರಣೆ

ಬೆಂಗಳೂರು: 24 ಸೆಪ್ಟೆಂಬರ್ 2026 ರಂದು
ಸ್ಥಳೀಯ ರಾಜಾಜಿನಗರದ 2ನೇ ಬ್ಲಾಕ್ನಲ್ಲಿರುವ ಎಸ್.ಜೆ.ಬಿ.ಎಸ್.ಎಸ್. (ನಿ.) ಬಸವೇಶ್ವರ ವಾಣಿಜ್ಯ, ಕಲೆ ಮತ್ತು ವಿಜ್ಞಾನ ಕಾಲೇಜಿನ ಐಕ್ಯೂಎಸಿ (IQAC) ಉಪಕ್ರಮದಡಿ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ವತಿಯಿಂದ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ “ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ”ಯನ್ನು (NSS Day Celebration) ಅತ್ಯಂತ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿತ್ತು.
“ಸಮಾಜ ಸೇವೆ, ಉತ್ತಮ ನಾಳೆಯತ್ತ ಹೆಜ್ಜೆ” (Service to Society, Steps to a Better Tomorrow) ಎಂಬ ಆಶಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಡಾ. ಕರಿಯಣ್ಣ ನಿಷಾದ ಆಗಮಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಾ. ಕರಿಯಣ್ಣ ನಿಷಾದ ಅವರು, “ಎನ್ಎಸ್ಎಸ್ನ ಮೂಲ ಧ್ಯೇಯವಾದ ‘ನಮಗಲ್ಲ, ನಿಮಗಾಗಿ’ (Not Me But You), ಚಳುವಳಿಯಾಗಿತ್ತು ಎಂಬ ತತ್ವವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜನಾರ್ಧನ ಕೆಸರು ಗದ್ದೆ-‘ಮಸಣದಲ್ಲಿ ಹೂವು’ ,ಹಾಡನ್ನ ಹಾಡಿ ಭೂಮಿತಾಯಿ ಮುಂದೆ ಎಲ್ಲರೂ ಒಂದೇ-ಎಲ್ಲವೂ ಸಮಯದಲ್ಲಿ ವಿಶಿಷ್ಟ ,ಮೂಡ್ಯತೆ, ಮಹಿಳೆಯರನ್ನ ಎರಡನೇ ದರ್ಜೆಗೆ ಹೋಲಿಸಲಾಗುತ್ತಿದೆ, ಬಾಲ್ಯ ವಿವಾಹ, ಸ್ವಚ್ಛ, ಆರೋಗ್ಯಕರ ಮತ್ತು ಸದೃಢ ಭಾರತವನ್ನು ನಿರ್ಮಿಸುವಲ್ಲಿ ಹಳ್ಳಿಗಳಲ್ಲಿ ಶಿಕ್ಷಣವನ್ನ ಹೇಗೆ ತಿಳಿಸಿಕೊಡಬೇಕು, ಹಾಗೂ ಗೊಲ್ಲಹಳ್ಳಿ ಶಿವಪ್ರಸಾದ್- ರವರ “ನೀರಿಗಾಗಿ ನಿಮಿಷ”,, ಇತ್ಯಾದಿ ಅಂಶಗಳಿಗೆ ಸಂಬಂಧಪಟ್ಟ ಬೆಳಕು ನೀಡುವ ಮಾರ್ಗವಾಗಿ ಇಂದಿನ ಯುವಜನತೆಯ ಪಾತ್ರ ಬಹುಮುಖ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಸಮಾಜಮುಖಿ ಚಿಂತನೆ ಹಾಗೂ ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅನುಪಸ್ಥಿತಿ ಯಲ್ಲಿ ಶ್ರೀ ಎಸ್. ಎಸ್. ದೊಡ್ಡನವರ ವಹಿಸಿದ್ದರು. ಉಪಾಧ್ಯಕ್ಷ ಶ್ರೀ ಬಸವರಾಜ್ ಸಿ. ಬಿರಾದಾರ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಭರತ್ ವಿ. ಅವರು ಉಪಸ್ಥಿತರಿದ್ದು, ನಡತೆ ಸಮಾಜಕ್ಕಾಗಿ ಕೊಡುಗೆಯನ್ನು ವಿದ್ಯಾರ್ಥಿಗಳ ಸಾಮಾಜಿಕ ಬದ್ಧತೆ ಇರಬೇಕು ಮತ್ತು ಸೇವಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರು.
ಎನ್.ಎಸ್.ಎಸ್ ಯೋಜನಾಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕು. ಪಲ್ಲವಿ ಎ. ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಮಾರಂಭದ ಸಹ-ಸಂಚಾಲಕರಾಗಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ನಿಕಟ ಪೂರ್ವ ಎನ್.ಎಸ್.ಎಸ್ ಅಧಿಕಾರಿ ಶ್ರೀ ಗಿರೀಶ ವೈ. ಮತ್ತು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕು. ಜಯಶ್ರೀ ಕೆ. ಕಾರ್ಯನಿರ್ವಹಿಸಿದರು.
ಬಸವೇಶ್ವರ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರ ಹಾಗೂ ಮಹಾಮನೆ ಕನ್ನಡ ಸಂಘದ ಸಂಚಾಲಕರು, ಮಾಜಿ ಪ್ರಭಾರ ಪ್ರಾಂಶುಪಾಲ
ಶ್ರೀ ಗಿರೀಶ ಪಿ ಹೆಚ್, ಹಾಗೂ ಗಣಕಯಂತ್ರ ವಿಭಾಗದ ಶ್ರೀಮತಿ ಮೇಘಶ್ರೀ ಕತ್ತಿ, ಭೌತಶಾಸ್ತ್ರ ವಿಭಾಗದ ಶ್ರೀಮತಿ ಮಾಧುರಿ, ಐ ಕ್ಯೂ .ಎ.ಸಿ ಹಾಗೂ ಗಣಿತಶಾಸ್ತ್ರ ವಿಭಾಗದ ಕು. ಅರ್ಪಿತ, ಇಂಗ್ಲಿಷ್ ವಿಭಾಗದ ಶ್ರೀಮತಿ ಅಂಬಿಕಾ ಸಿ ರೆಡ್ಡಿ, ಹಾಗೂ ಶ್ರೀಮತಿ ತೇನ್ ಮೋಳಿ, ಕು.ಗಾನಶ್ರೀ, ಮತ್ತು ಹಿರಿಯ ಪ್ರಾಧ್ಯಾಪಕರಾದ ಶ್ರೀಮತಿ ವಸಂತ ಕುಮಾರಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಾಂಸ್ಕೃತಿಕ ವಿಭಾಗ ಮುಖ್ಯಸ್ಥರು ಆದ ಶ್ರೀಮತಿ ಜ್ಯೋತಿ ರವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಯೋಜಕರಾದ ಅನುಷಾ (ತೃತೀಯ ಬಿ.ಕಾಂ), ಕುಸುಮ (ತೃತೀಯ ಬಿ.ಎ) ಹಾಗೂ ಚರಣ್ (ದ್ವಿತೀಯ ಬಿ.ಎಸ್ಸಿ) ಅವರು ಕಾರ್ಯಕ್ರಮದ ನಿರ್ವಹಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಬಿ.ಕಾಂ ವಿದ್ಯಾರ್ಥಿನಿ ಕು.ಅನುಷಾ ನಿರೂಪಣೆ ನೆರವೇರಿಸಿದರು.
ಸ್ವಾಗತವನ್ನು ಬಿ.ಎ ವಿದ್ಯಾರ್ಥಿನಿ ಕು. ಅರ್ಪಿತ ನೆರವೇರಿಸಿದರು, ವಂದನಾರ್ಪಣೆಯನ್ನು ಬಿ.ಸಿ.ಎ ವಿದ್ಯಾರ್ಥಿನಿ ಪೂರ್ಣಿಮಾ ನಡೆಸಿಕೊಟ್ಟರು .
ಕಾಲೇಜಿನ ಇತರ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ- ಮತ್ತು ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
“ಕಾಯಕವೇ ಕೈಲಾಸ”.











