ವಿಜಯ ದರ್ಪಣ ನ್ಯೂಸ್…….
ಸುಂದರನಗರದಲ್ಲಿ ಮಳೆಗೆ 4 ಮನೆಗಳ ಮೇಲ್ಛಾವಣಿ ಹಾನಿ: ರಸ್ತೆಗೆ ಅಡ್ಡಲಾಗಿ ಬಿದ್ದ ಮರ

ಕುಶಾಲನಗರ, ಅಕ್ಟೋಬರ್ .1:
ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರದಲ್ಲಿ ಭಾರೀ ಮಳೆಗೆ 4 ಮನೆಗಳ ಮೇಲ್ಛಾವಣಿ ಹಾನಿಯಾದ ಘಟನೆ ನಡೆದಿದೆ.
ಸುಂದರನಗರದ ಆನಂದ್, ತುಳಸಿ, ಶಿವರಾಜ್, ಯೋಗೇಶ್, ಯೋಗಾವತಿ, ಮಂಗಳಮ್ಮ ಅವರ ಮನೆಗಳ ಮೇಲ್ಛಾವಣಿ ಹಾನಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಲಾಗಿದ್ದು, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಘಟನಾ ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ ಮಾಜಿ ಸದಸ್ಯ ಕೆ.ಬಿ.ಶಂಶುದ್ದೀನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ ಕೂಡಲೇ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಅವರು, “ಭಾರೀ ಮಳೆಗೆ ಎಲ್ಲೆಡೆ ಅವಾಂತರ ಸೃಷ್ಟಿಯಾಗಿದೆ. ಸುಂದರನಗರದಲ್ಲಿ ನಾಲ್ಕು ಮನೆಗಳ ಮೇಲ್ಛಾವಣಿಗಳು ಹಾನಿಯಾಗಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿತ್ತು. ಇದನ್ನು ತೆರವುಗೊಳಿಸಲಾಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ. ಕೂಡಲೇ ಸರ್ಕಾರ ತ್ವರಿತಗತಿಯಲ್ಲಿ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಆನಂದ್, ಅಭಿಷೇಕ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.











