ವಿಜಯ ದರ್ಪಣ ನ್ಯೂಸ್……
ನಾನಾ ಪಾಟೇಕರ್ ಅಜರಾಮರ ಕಲಾಯಾನ

ನಟನೆಯ ನಭದಲಿ ನಕ್ಷತ್ರವೊಂದು
ನಿಶ್ಶಬ್ದವಾಗಿ ಇಂದು ಮರೆಯಾಯಿತು
ಕಲೆಯ ಕದನದಲಿ ಕೀರ್ತಿಯ ಪಡೆದ
ಕಲಾವಿದನ ಪಯಣವು ಮುಗಿಯಿತು.
ರಂಗದ ಬೆಳಕಲಿ ಬೆಳೆದ ಪ್ರತಿಭೆ
ತೆರೆಯ ಬೆಳಕಲಿ ಮೆರೆದ ಕಲಾವಿದ
ಪಾತ್ರದೊಳಗಿಳಿದು ಭಾವವ ತೋರಿ
ಜನಮನ ಗೆದ್ದರು ನೈಜ ಕಲಾವಿದ
ನುಡಿಯಲಿ ಗಾಂಭೀರ್ಯ ನೋಟದಲಿ ಭಾವ ನಟನೆಯಲಿ ತುಂಬಿತ್ತು ಜೀವ
ನಗುತಲಿ ನಗುವನು ಅಳುತಲಿ ನೋವನು
ತೋರಿದ ಕಲೆಗೆ ಇರಲಿಲ್ಲ ಸಾಟಿ
ಕೋಪದ ಕಿಡಿಯನು ಕಣ್ಣಲಿ ಹೊತ್ತು
ಕರುಣೆಯ ಹನಿಯನು ಹೃದಯದಿ ತುಂಬಿ
ಬದುಕಿನ ಬಣ್ಣವ ಪಾತ್ರದಿ ಬೆರೆಸಿ
ಪರದೆಯ ಮೇಲೆ* *ಮೂಡಿಸಿದರು ಜೀವಂತ ಚಿತ್ರ
ಪ್ರಶಸ್ತಿ ಬಂದರೂ, ಕೀರ್ತಿ ಬಂದರೂ
ಜನರ ಪ್ರೀತಿಯೇ ದೊಡ್ಡ ಗೌರವ
ಕಾಲವು ಕಳೆದರೂ ಕಲೆ ಉಳಿಯುವುದು
ಹೆಸರು ಮಾತ್ರವಲ್ಲ ಉಳಿಯುವುದು ಭಾವ.
ತೆರೆಯ ದೀಪವು ಆರಿದರೂ ಇಂದು
ನೆನಪಿನ ದೀಪವು ಆರದು ಎಂದೂ
ದೇಹವು ದೂರದ ದಾರಿಯ ಹಿಡಿದರೂ
ಕಲೆಯ ಹೆಜ್ಜೆಯು ಮಾಸದು ಎಂದೂ
ಪಾತ್ರಗಳು ಮಾತನಾಡುವ ತನಕ
ಪದಗಳು ಮೊಳಗುವ ತನಕ
ಕಲೆಯ ಹಾದಿಯಲಿ ನಡೆವ ಮನಗಳಿಗೆ
ಈ ಮಹಾನ್ ನಟನು ನೆನಪಾಗುವನು
ನಟನೆಯ ಲೋಕದ ಹಿರಿಯ ಕಲಾವಿದನಿಗೆ
ಕನ್ನಡ ಮನದಲಿ ಶತ ನಮನ
ಕಲೆಯ ಸೇವೆಯನು ಸಲ್ಲಿಸಿ ಹೋದ
ಅಮರ ಕಲಾವಿದನಿಗೆ ಭಾವ ನಮನ.
ನಾನಾ ಪಾಟೇಕರ್ ಅವರಿಗೆ
ಭಾವಪೂರ್ಣ ಶ್ರದ್ಧಾಂಜಲಿ
ಕಲೆಯ ದೀಪ ಸದಾ ಬೆಳಗಲಿ
ಅವರ ಆತ್ಮಕ್ಕೆ ಶಾಂತಿ ಸಿಗಲಿ
✍🏽 ಎಂಎಂ ದಾವೂದ್










