--Ads--

ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಫಿಲಂ ಸಿಟಿ ಅಭಿವೃದ್ಧಿ ಕಾಮಗಾರಿ ಮಾಡಲು ಬಿಡುವುದಿಲ್ಲ : ಹೊಸಕೋಟೆ ಬಸವರಾಜು

On: June 9, 2025 9:08 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

 ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಫಿಲಂ ಸಿಟಿ ಅಭಿವೃದ್ಧಿ ಕಾಮಗಾರಿ ಮಾಡಲು ಬಿಡುವುದಿಲ್ಲ : ಹೊಸಕೋಟೆ ಬಸವರಾಜು

ತಾಂಡವಪುರ ಜೂನ್  ಮೈಸೂರು ಜಿಲ್ಲೆ,: ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹಿಮವು ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರವು ಫಿಲಂ ಸಿಟಿ ನಿರ್ಮಾಣ ಮಾಡಲು ಈ ಭಾಗದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶ ಅಭಿವೃದ್ಧಿಗಳಿಂದ ಪಡೆದುಕೊಂಡಿದ್ದು ,ಈ ಭಾಗಕ್ಕೆ ಸೇರುವ ಇಮ್ಮಾವು ಅಡಕನಹಳ್ಳಿ ಹುಳಿಮಾವು ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಐವತ್ತು ಅರವತ್ತು ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಉಳುಮೆ ಮಾಡಿಕೊಂಡು ಬರುತ್ತಿದ್ದು ಅವರಿಗೆ ಯಾವುದೇ ರೀತಿಯ ಪರಿಹಾರವನ್ನ ನೀಡಿಲ್ಲ .

ಈ ಬಗ್ಗೆ ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಸರ್ಕಾರವು ಒಂದು ವಾರದ ಒಳಗೆ ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಫಿಲಂ ಸಿಟಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲು ಬಿಡುವುದಿಲ್ಲ ಎಂದು ರಾಜ್ಯ ರೈತ ಸಂಘದ ಮುಖಂಡ ಹೊಸಕೋಟೆ ಬಸವರಾಜ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಅಳತೆ ಬಿಟ್ಟು ಹಿಡಿದ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೊಸಕೋಟೆ ಬಸವರಾಜ್ ಅವರು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ದಂಡಾಧಿಕಾರಿಗಳ ಜೊತೆ ಮಾತನಾಡಿದ ರೈತರ ಮುಖಂಡ ಬಸವರಾಜು ಕಾರ್ಮಿಕ ಮುಖಂಡ ಉಗ್ರ ನರಸಿಂಹಗೌಡ ಅವರು ಐವತ್ತು ಅರವತ್ತು ವರ್ಷಗಳಿಂದ ಈ ಭಾಗದ ರೈತರು ಉಳುಮೆ ಮಾಡಿಕೊಂಡು ಬಂದಿರುತ್ತಾರೆ ಅವರಿಗೆ ಯಾವುದೇ ರೀತಿಯ ಪರಿಹಾರವನ್ನು ಆಗಲಿ ಅಥವಾ ಉದ್ಯೋಗ ಅವಕಾಶವಾಗಲಿ ನೀಡಿಲ್ಲ ಅವರು ಹುಳಿ ಮಾಡುತ್ತಿರುವ ಭೂಮಿಯನ್ನು ಕೈಗಾರಿಕಾ ಪ್ರದೇಶದವರು ವಸಪಡಿಸಿಕೊಂಡು ಆ ಭೂಮಿಯನ್ನು ಫಿಲಂ ಸಿಟಿ ಅಭಿವೃದ್ಧಿಗೆ ನೀಡಲಾಗಿದ್ದು ಆಗಲೇ ಫಿಲಂ ಸಿಟಿಯ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭ ಆಗಿದೆ.

ಆದರೆ ರೈತರಿಗೆ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ ಆದರಿಂದ ನಾವು ರೈತರ ಪರವಾಗಿ ಹೋರಾಟವನ್ನು ಮಾಡುತ್ತಿದ್ದೇವೆ ಅವರಿಗೆ ನ್ಯಾಯಯುತವಾದ ಭೂ ಪರಿಹಾರ ಮತ್ತು ಉದ್ಯೋಗ ನೀಡಲೇಬೇಕು ಇಲ್ಲವಾದರೆ ನಾವು ಫಿಲಂ ಸಿಟಿ ಅಭಿವೃದ್ಧಿ ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ .

ನೀವು ಹೇಳಿದ ಹಾಗೆ ಇದೊಂದು ವಾರದ ಒಳಗೆ ಈ ಬಗ್ಗೆ ಕ್ರಮ ಕೈಗೊಳ್ಳಿ ಅಲ್ಲಿಯವರೆಗೆ ಕಾಮಗಾರಿ ನಡೆಯಲಿ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ತಾಲ್ಲೂಕು ದಂಡಾಧಿಕಾರಿಗಳಾದ ಶಿವಕುಮಾರ್ ಅವರು ಮಾತನಾಡಿ ನಿಮ್ಮ ಎಲ್ಲಾ ಈ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಅವರು ಇನ್ನೊಂದು ವಾರದೊಳಗೆ ಸಭೆ ಕರೆದು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ ಎಂದು ರೈತ ಸಂಘದ ಮುಖಂಡರಿಗೆ ವಿವರಿಸಿದ್ದರು.

ಪ್ರತಿಭಟನೆ ನಡೆಯುವ ಸ್ಥಳದಲ್ಲಿ ತಾಲ್ಲೂಕು ದಂಡಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಬಿಗಿ ಬಂದವಸ್ಟನ್ನು ಏರ್ಪಡಿಸಿದ್ದರು ಈ ಪ್ರತಿಭಟನೆಯಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸಿದ್ದಪ್ಪ ಹೆಜ್ಜೆಗೆ ಪ್ರಕಾಶ್ ಹಾಗೂ ನಿಮ್ಮ ಉಳುಮಾವು ಹರಕನಹಳ್ಳಿ ಗ್ರಾಮದ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಡಾ. ಯತೀಂದ್ರ ಸಿದ್ದರಾಮಯ್ಯ ಶಾಸಕ ಕೆ ವೆಂಕಟೇಶ್ ರವರಿಂದ ಭೂಮಿ ಪೂಜೆ

ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 5 ತಾಲ್ಲೂಕುಗಳು ತೀವ್ರ ಬರಪೀಡಿತ ; ಸಮಸ್ಯೆಯಾಗದಂತೆ ಪರಿಸ್ಥಿತಿ ನಿಭಾಯಿಸಿ ಡಿಸಿಎಂ ಡಾ.ಜಿ. ಪರಮೇಶ್ವರ್ 

ಜಿಲ್ಲೆಯ ನಂಜನಗೂಡು ತಾಲೂಕುಗಳ ಬರಪೀಡಿತ ಪ್ರದೇಶಗಳಿಗೆ ಉಪಮುಖ್ಯಮಂತ್ರಿ ಡಾ .ಜಿ. ಪರಮೇಶ್ವರ್  ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ

ವರುಣ ವಿಧಾನಸಭಾ ಕ್ಷೇತ್ರ ನಂಜನಗೂಡು ವಿಧಾನಸಭಾ ಕ್ಷೇತ್ರದ  ಕಾರ್ಯಕರ್ತರಿಂದ ಶ್ರೀಕಂಠೇಶ್ವರ ಸ್ವಾಮೀಗೆ ಪೂಜಿ ಸಲ್ಲಿಸಿ ಸಿಹಿ ವಿತರಿಸಿ ಸಂಸದ ಸುನಿಲ್ ಬೋಸ್ ಹುಟ್ಟುಹಬ್ಬ ಆಚರಣೆ

ನಗರಲೆ ಹಾಲು ಉತ್ಪಾದಕರ ಸಂಘದ 2025 -26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯಸಭೆ

ಹಿರಿಯ ಕಾಂಗ್ರೆಸ್ ಮುಖಂಡ ಎಲ್ಐಸಿ ಪ್ರತಿನಿಧಿ ಬಿ ಎಂ ನಾಗರಾಜ್ ದಣಿ ಇನ್ನಿಲ್ಲ