ವಿಜಯ ದರ್ಪಣ ನ್ಯೂಸ್….
ನಾರಾಯಣ್ ಮುಂದಿನ ದಿನಗಳಲ್ಲಿ ಶಾಸಕರಾಗಲಿ : ಎಂಎಲ್ ಸಿ ತಿಮ್ಮಯ್ಯ

ತಾಂಡವಪುರ ಏಪ್ರಿಲ್ : ಪೌರ ಕಾರ್ಮಿಕರ ಸಮಸ್ಯೆ ಹಾಗೂ ಸವಲತ್ತುಗಳನ್ನು ಪಡೆಯಲು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿರುವ ನಾರಾಯಣ ಅವರಿಗೆ ಮುಂದಿನ ದಿನಗಳಲ್ಲಿ ಶಾಸಕ, ಮಂತ್ರಿಗಳಾಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ಮೈಸೂರಿನ ರಂಗಚಾರ್ಲು ಭವನದಲ್ಲಿ ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಂಘವತಿಯಿಂದ ಡಾ.ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿ ಪುರಸ್ಕೃತ ನಾರಾಯಣ್ ಅವರಿಗೆ ಅಭಿನಂದನ ಸಮಾರಂಭದಲ್ಲಿ ಮಾತನಾಡಿದ ಅವರು ನಾರಾಯಣ್ ಶ್ರಮ, ಸಾಧನೆ, ಹುಟ್ಟಿನಿಂದ ಹೋರಾಟ ಮಾಡುವ ವ್ಯಕ್ತಿ. ಸಾಧನೆ ಮಾಡಲು ಸಮಾಜಮುಖಿ, ನಿಸ್ವಾರ್ಥ ಮನೋಭಾವ ಹೊಂದಿದ್ದ ವ್ಯಕ್ತಿಯಿಂದ ಸಾಧ್ಯ. ಇಂತಹ ಎಲ್ಲಾ ಗುಣಗಳನ್ನು ಇವರಿಗಿದೆ. ಪೌರ ಕಾರ್ಮಿಕ ಎಂದರೆ ಕಸ ಹೊಡೆಯುವ ವ್ಯಕ್ತಿ ಮಾತ್ರ ಅಲ್ಲ. ಎಲ್ಲಾ ಅಧಿಕಾರಿಗಳು ಸಹ ಪೌರ ಕಾರ್ಮಿಕರೇ, ಇಂದು ಪೌರಕಾರ್ಮಿಕ ವೃತ್ತಿ ಒಂದು ಜಾತಿಗೆ ಮಾತ್ರ ಸೀಮಿತವಾಗಿದೆ. ತಮ್ಮ ಆರೋಗ್ಯವನ್ನೂ ಗಣನೆಗೆ ತೆಗೆದುಕೊಳ್ಳದೇ, ಸಮಾಜದ ಎಲ್ಲಾ ಜನರ ಆರೋಗ್ಯ ಕಾಪಾಡುವುದು ಪೌರಕಾರ್ಮಿಕರು. ಪೌರ ಕಾರ್ಮಿಕರ ಮಕ್ಕಳಿಗೆ ಉದಯಗಿರಿ ಯಲ್ಲಿ ರೆಸಿಡೆನ್ಸಿಯಲ್ ಶಾಲೆ ತೆರೆಯಲಾಗಿದೆ. ಬಾಬು ಜಗಜೀವನ್ ಪ್ರತಿಮೆ ಆಗಲು ಇವರೇ ಕಾರಣವೆಂದರು.
ಮಲಹೊರುವ ಪದ್ದತಿಯನ್ನು ತೆಗೆದುಹಾಕಲು ಕಾನೂನು ಬಂದಿದ್ದು ದೇವರಾಜ ಅರಸು, ಬಸವಲಿಂಗಪ್ಪ ಕಾಲದಲ್ಲಿ ಆಗಿದೆ. ನಾರಾಯಣ್ ಮೇಯರ್ ಆಗಲು ಸಿದ್ದರಾಮಯ್ಯ ಕಾರಣ. ಸಿದ್ದರಾಮಯ್ಯ ನಿಸ್ವಾರ್ಥ ಮನೋಭಾವ ಹೊಂದಿರುವ ರಾಜಕಾರಣಿ. ಕರ್ನಾಟಕದಲ್ಲಿ ಮಾತ್ರ ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಬದಲಾಗಿ ಖಾಯಂ ಆಗಿದ್ದು, ಅದಕ್ಕೂ ಸಿದ್ದರಾಮಯ್ಯರೇ ಕಾರಣರಾಗಿದ್ದಾರೆ. ಈ ವರ್ಷದ ಬಾಬು ಜಗಜೀವನ್ ರಾಮ್ ಪ್ರಶಸ್ತಿ ಸೂಕ್ತ ವ್ಯಕ್ತಿಗೆ ದೊರಕಿವೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಪೌರಕಾರ್ಮಿಕ ೪೦ ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ನಾರಾಯಣ್ ಅವರಿಗೆ ಪಕ್ಷಾತೀತವಾಗಿ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಬೇಕು. ಅವರಿಗೆ ಪ್ರಶಸ್ತಿ ನೀಡುವ ಮೂಲಕ ಅವರ ಸೇವೆ ಹಾಗೂ ಸಮಾಜಕ್ಕೆ ಕೊಡುವ ಗೌರವವಾಗಿದೆ.
ಜಿಲ್ಲೆಯ ಪೌರ ಕಾರ್ಮಿಕ ವಿಚಾರದಲ್ಲಿ ನಾರಾಯಣ್ ಅವರೇ ಅಂತಿಮ. ಮಹಾನಗರ ಪಾಲಿಕೆ ಪೌರಕಾರ್ಮಿಕರಿಗೆ ರಜೆ ನೀಡಿ ಈ ಕಾರ್ಯಕ್ರಮಕ್ಕೆ ಅಧಿಕಾರಿಗಳು ಭಾಗವಹಿಸಿ ಅವರಿಗೆ ಗೌರವ ನೀಡಬೇಕಿತ್ತು. ಜಿಲ್ಲಾ ಕಾಂಗ್ರೆಸ್ ಪೌರ ಕಾರ್ಮಿಕರ ಘಟಕ ಆರ್ಟಿಸ್ಟ್ ನಾಗರಾಜ್ ರನ್ನು ಅಧ್ಯಕ್ಷರನ್ನಾಗಿ ಮಾಡಲಾಗುವುದು.
ಏ.14ರಂದು ಡಾ.ಬಿ.ಅರ್.ಅಂಬೇಡ್ಕರ್ ಜಯಂತಿಯಂದು ನಾರಾಯಣಗೆ ಅಭಿನಂದನೆ ಸಲ್ಲಿಸಲಾಗುವುದು. ಅವರ ಹೋರಾಟದ ಜೊತೆಯಲ್ಲಿ ಕಾಂಗ್ರೆಸ್ ಪಕ್ಷ ಇರುತ್ತದೆ ಎಂದು ಹೇಳಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ನಮ್ಮೂರಿನ ನಮ್ಮನಾಯಕರಾದ ತುಳಿತಕ್ಕೆ ಒಳಗಾದವರಿಗಾಗಿ 45 ವರ್ಷದಿಂದ ಹೋರಾಟ ಮಾಡಿರುವ ನಾರಾಯಣ್ ಅವರಿಗೆ ಅಂಬೇಡ್ಕರ್ ಪ್ರಶಸ್ತಿ ಲಭಿಸಿರುವುದು ಸಂತಸದ ವಿಚಾರ. ಅಂದಿನಿಂದ ಇಂದಿನವರೆಗೂ ನಾರಾಯಣ್ ಅವರ ಹೋರಾಟ ಸ್ಥಿತ ಪ್ರಜ್ಞೆಯಿಂದ ನಡೆಸಿದ ಹೋರಾಟದ ಫಲವಾಗಿ ಸಮುದಾಯದಲ್ಲಿ ಇಂದು ಒಂದಷ್ಟು ಏಳಿಗೆ ಕಂಡಿದೆ. ಹೋರಾಟದಲ್ಲಿ ಎಲ್ಲಿಯೂ ವಿರಮಿಸಿದ ನಾಯಕರಾಗಿದ್ದಾರೆ.
ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ 2 ತಾಸು ನಡೆಸಿದ ಅಭಿಯಾನದಲ್ಲಿ ಪೌರ ಬಂಧುಗಳ ಸಹಕಾರ ಸ್ಮರಣೀಯ. ಸಾಕಷ್ಟು ಟೀಕೆಗಳನ್ನು ಮೀರಿ ಪೌರಕಾರ್ಮಿಕರ ಪರವಾಗಿ ಹೋರಾಟ ನಡೆಸಿದ್ದಾರೆ.
ಇಂತಹವರು ವಿಧಾನ ಪರಿಷತ್, ವಿಧಾನಸಭೆಗೆ ಬರಬೇಕಿದೆ. ಗ್ಯಾರಂಟಿ ಹೊರೆಯ ನಡುವೆಯೂ ಪೌರಕಾರ್ಮಿಕರ ಕಾಯಂಗೆ ಒತ್ತಾಯ ಮಾಡಿದ ಇಂತಹ ನಾಯಕರು ಸಮಾಜಕ್ಕೆ ಬೇಕಿದೆ ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಮೇಯರ್ ಬೈರಪ್ಪ, ಅನಂತು, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾಕ್ಟರ್ ಬಿ ಜೆ ವಿಜಯ್ ಕುಮಾರ್ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಅಹಿಂದ ಜವರಪ್ಪ, ಬೆಂಗಳೂರು ಪೌರಕಾರ್ಮಿರ ಸಂಘದ ಅಧ್ಯಕ್ಷ ಶ್ರೀನಿವಾಸ, ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲರು ಆದ ಎಂಸಿ ಹುಂಡಿ ಶಿವಪ್ರಸಾದ್ ಮಾಹಿತಿ ಹಕ್ಕು ಇಲಾಖೆ ಡಾ.ಹರೀಶ್, ಕಾಂಗ್ರೆಸ್ ನಗರ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಜಿಲ್ಲಾ ಉಪಾಧ್ಯಕ್ಷ ಶಿವ ಪ್ರಸಾದ್ ಹಾಗೂ ಇನ್ನು ಮುಂತಾದ ಮುಖಂಡರುಗಳು ಹಾಜರಿದ್ದರು
ಪಿಯುಸಿಯಲ್ಲಿ ರೈತನ ಮಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ

ತಾಂಡವಪುರಏಪ್ರಿಲ್10 ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವಮರಳೂರು ಗೊದ್ದನಪುರ ಗ್ರಾಮ ಪಂಚಾಯತಿ ಸದಸ್ಯರಾದ ಹಾಗೂ ಮಹದೇಶ್ವರ ಫರ್ಟಿಲೈಜರ್ಸ್ ಮಾಲೀಕ ಹಾಗೂ ರೈತ ಮಾಲೆಗೌಡರಮಗಳಾದ ಜಿಎಂ ರೇಖಾ ರವರು ನಂಜನಗೂಡಿನ ಯುನಿಟಿ ಕಾಲೇಜ್ ನಲ್ಲಿ ಪಿ ಯು ಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 568 ಅಂಕಗಳನ್ನು ಪಡೆದು ಶೇಕಡ 95ರಷ್ಟು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ.
ಮಗಳು ಉತ್ತಮ ಶ್ರೇಣಿಯಲ್ಲಿ ಪಾಸಾಗಿರುವುದನ್ನು ತಿಳಿದುಕೊಂಡ ಕುಟುಂಬ ವರ್ಗದವರು ಮಗಳನ್ನು ಅಪ್ಪಿಕೊಂಡು ಸಂತಸ ಹಚ್ಚಿಕೊಂಡರು











