- ವಿಜಯ ದರ್ಪಣ ನ್ಯೂಸ್…
ಪ್ರಸ್ತುತ ಸಮಾಜದಲ್ಲಿ ಮಾನವೀಯತೆಗೆ ಬೆಲೆಯಿಲ್ಲ- ಡಾ.ಸಿಪಿಕೆ ವಿಷಾದ

ತಾಂಡವಪುರ ಏಪ್ರಿಲ್ 25 ಪ್ರಸ್ತುತ ಸಮಾಜದಲ್ಲಿ ಮಾನವೀಯತೆಗೆ ಬೆಲೆಯಿಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಸಿ.ಪಿ. ಕೃಷ್ಣಕುಮಾರ್ ವಿಷಾದ ವ್ಯಕ್ತಪಡಿಸಿದರು,
ವಿಶ್ವೇಶ್ವರ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಹಿರಿಯ ವಕೀಲ ಎಚ್‌ವಿಎಸ್ ಮೂರ್ತಿ ಅವರ 80ನೇ ವರ್ಷದ ಅಭಿನಂದನಾ ಸಮಾರಂಭದಲ್ಲಿ ‘ಎಚ್‌ವಿಎಸ್ ಮೂರ್ತಿ ಬದುಕು ಹೋರಾಟದ ಅವಕಲೋಕನ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಇದಲ್ಲದೇ ಪ್ರಸ್ತುತ .ಪುಸ್ತಕ ,ಸತ್ಯಾಗ್ರಹಗಳಿಗೆ ಬೆಲೆ ಇಲ್ಲದಂತಾಗಿದೆ ಎಂದರು.
ಎಚ್‌ವಿಎಸ್ ಮೂರ್ತಿ ಅವರು. ಜ್ಞಾನವೃದ್ಧರು ಹಾಗೂ ತಪೋವೃದ್ಧರೂ ಹೌದು.. ಅವರ ನಡೆ- ನುಡಿಯನ್ನು ಸಂಕೇತಿಸುವ ಕೃತಿ ಇದು.. ಅವರು ಬದುಕು- ಹೋರಾಟದ ಬಗ್ಗೆ ಕೇಳದವರು ವಿರಳ. ಅಪರೂಪದ ಆತ್ಮೀಯ ಎನಿಸಬಹುದಾದ ಗ್ರಂಥ ಇದಾಗಿದ್ದು, ಅವರು ಬರೆದಿಲ್ಲ. ಆದರೆ ಲಿಪಿಕಾರರ ಮೂಲಕ ಅದನ್ನು ದಾಟಿಸಿದ್ದಾರೆ ಎಂದರು ಈ ಕೃತಿಯಲ್ಲಿ ಹಿರಿಕಿರಿಯರು ತಿಳಿದುಕೊಳ್ಳಬಹುದಾದ ಸಾಕಷ್ಟು ವಿಷಯಗಳಿವೆ ಸಂದೇಶ ಮತ್ತು ಸೂಕ್ತಿಗಳು ತುಂಬಿ ತುಳುಕುತ್ತಿವೆ.. ಮೂರ್ತಿ ಅವರು ಕೃಷಿ ಅಪಾರ ಜ್ಞಾನವುಳ್ಳವರು ಮತ್ತು ಶಾರದಾ ನಿಕೇತನದ ಸಂಸ್ಥಾಪಕರಲ್ಲಿ ಒಬ್ಬರು. ಇದೊಂದು ರೀತಿಯಲ್ಲಿ ಆತ್ಮಕತೆ ಇದ್ದಹಾಗೆ..ಕೃಷಿಯ ಮೌಲಿಕತೆಯನ್ನು ಕೃತಿಯಲ್ಲಿ ಹೇಳಿದ್ದಾರೆ ಎಂದು ಹೇಳಿದರು.
ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವಜಯಾನಂದಜಿ ಸಾನ್ನಿಧ್ಯ ವಹಿಸಿದ್ದರು. ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್, ಕಾರ್ಯದರ್ಶಿ ಎ.ಜಿ. ಸುಧೀರ್, ರಾಜ್ಯ ಪರಿಷತ್ ಸದಸ್ಯ ಚಂದ್ರಮೌಳಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಶಾರದವಿಲಾಸ ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷ ಎಸ್. ನಾರಾಯಣ ರಾವ್, ನಂಜನಗೂಡಿನ ಸಮಾಜ ಸೇವಕ ಯು.ಎನ್. ಪದ್ಮನಾಭರಾವ್, ಎಂಕೆಬಿಎಸ್ ಅಧ್ಯಕ್ಷ ವಿಶ್ವನಾಥಯ್ಯ, ನಗರ ಜೆಡಿಎಸ್ ಅಧ್ಯಕ್ಷ ಎಸ್‌ಬಿಎಂ ಮಂಜು, ಪ್ರಕಾಶಕ ಶ್ರೀಧರ್ ಮುಖ್ಯಅತಿಥಿಗಳಾಗಿದ್ದರು. ನಗರಪಾಲಿಕೆ ಮಾಜಿ ಸದಸ್ಯ ಎಂ. ಸುನಿಲ್ ಸ್ವಾಗತಿಸಿದರು. ಕನ್ನಡ ಚಳವಳಿಗಾರ ಬಿ.ಎ. ಶಿವಶಂಕರ್ ನಿರೂಪಿಸಿದರು. ಎಚ್.ಎಸ್. ವೀಣಾ ಮೂರ್ತಿ ಪ್ರಾಸ್ತಾವಿಕ ಭಾಷಣ ಮಾಡಿದರು. ಎಚ್.ಎಸ್. ವಿದ್ಯಾ ಮೂರ್ತಿ, ಡಾ.ಎಚ್.ಎಸ್. ವಾಣಿ ಮೂರ್ತಿ, ಶ್ರೀನಿಧಿ ಜೋಷಿ, ಎಂಕೆಎಸ್ ಈಶ್ವರ್, ಎಂ.ಎಸ್. ರವೀಂದ್ರ, ಎಚ್.ವಿ.ರವಿಕಾಂತ್, ಸಿ.ಗುರುಸ್ವಾಮಿ, ಶೈಲೇಂದ್ರ ಮೊದಲಾದವರು ಇದ್ದರು.










