--Ads--

ಮೂವರಿಗೆ ಅಂಗಾಂಗ ದಾನ ಮಾಡಿ ಸಾವಿನಲ್ಲು ಸಾರ್ಥಕತೆ ಮೆರೆದ ಪುಣ್ಯಾತ್ಮ ಗಿರೀಗೌಡ

On: June 13, 2026 4:29 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…

ಮೂವರಿಗೆ ಅಂಗಾಂಗ ದಾನ ಮಾಡಿ ಸಾವಿನಲ್ಲು ಸಾರ್ಥಕತೆ ಮೆರೆದ ಪುಣ್ಯಾತ್ಮ ಗಿರೀಗೌಡ

ತಾಂಡವಪುರ ಜೂನ್ 13 ಅಪಘಾತದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ 32 ವರ್ಷದ ವ್ಯಕ್ತಿಯೊಬ್ಬನ ಅಂಗಾಂಗಳ ದಾನದ ಮೂಲಕ ಇತರೆ ಮೂವರು ಮಂದಿಗೆ ಜೀವದಾನ ಮಾಡಿ ಸಾರ್ಥಕತೆ ಮಾಡಿರುವ ಘಟನೆ ಮೈಸೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.

32 ವರ್ಷ ವಯಸ್ಸಿನ ಕೆ.ಎಂ.ದೊಡ್ಡಿ ಕ್ಯಾತಘಟ್ಟ ಗ್ರಾಮದ ಗಿರೀಗೌಡ(ರಂಜಿತ್) ಎಂಬುವವರೇ ತಮ್ಮ ಸಾವಿನ ಬಳಿಕವೂ ಮೂವರಿಗೆ ಜೀವಕ್ಕೆ ನೆರವಾದವರಾಗಿದ್ದಾರೆ. ಜೂ.11ರಂದು ಭಾರತೀನಗರದ ಮದ್ದೂರು ಮಳವಳ್ಳಿ ರಸ್ತೆ ಸಮಯದಲ್ಲಿ ಆಲಭುಜನಹಳ್ಳಿ ಕಡೆ ತಿರುವಿನ ವೇಳೆ ದ್ವಿಚಕ್ರವಾಹನ ಅಪಘಾತ ಸಂಭವಿಸಿದೆ. ಬಳಿಕ ಅವರನ್ನು ಅಂದೇ ರಾತ್ರಿ ಮೈಸೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೆದುಳು ನಿಷ್ಕ್ರಿಯಗೊಂಡಿದೆ.
ಕೊನೆಗೆ ಅಂಗಾಂಗ ದಾನದ ವಿಚಾರವನ್ನು ಪತ್ನಿಸ್ಪಂದನ ಅವರಕ್ಕೆ ವೈದ್ಯರು ತಂದಿದ್ದಾರೆ.
ಅವರ ಸ್ವಯಂ ಅನುಮತಿ ಮೇರೆಗೆ ಯಕೃತ್‌, ಎರಡು ಮೂತ್ರಪಿಂಡವನ್ನು ಅವಶ್ಯಕತೆ ಇರುವವರಿಗೆ ವರ್ಗಾಯಿಸುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದು ಇತರರಿಗೆ ಪ್ರೇರಣೆಯಾಗಿದ್ದಾರೆ.
ಮೃತರ ಕುಟುಂಬಸ್ಥರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮೃತರು ಸಿವಿಕ್ಷ, ರಿತ್ವಿಕ್, ಗೌತಮಿ ಎಂಬ ಮೂವರು ಮಕ್ಕಳನ್ನು ಹಾಗೂ ತಾಯಿ ಚಿಕ್ಕತಾಯಮ್ಮರನ್ನು ಅಗಲಿದ್ದಾರೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಮೈಸೂರಿನ ಪೌರಕಾರ್ಮಿಕ ಬೇಡಿಕೆಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿದೆ. ವಿಧಾನ ಪರಿಷತ್ ಸದಸ್ಯ ಕೆ ಶಿವಕುಮಾರ್

ಪಕ್ಷ ಸಂಘಟನೆಗೆ ಸಹಕಾರ ನೀಡಿ: ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಬಿ ಬಸವಣ್ಣ

ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಬಿ ಜೆ ವಿಜಯ್ ಕುಮಾರ್ ರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು ಪಕ್ಷದ ವರಿಷ್ಠರಲ್ಲಿ ಮನವಿ 

GFF 2026ರಲ್ಲಿ ಹಣಕಾಸು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು DFS ಕಾರ್ಯದರ್ಶಿಯವರು ನವೀನ ಉಪಕ್ರಮಗಳನ್ನು ಅನಾವರಣ

ಕಾಲೇಜಿನ ಅಭಿವೃದ್ಧಿ ಕಾರ್ಯಗಳು ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಸಮಗ್ರ ಸಮಾಲೋಚನೆ ಸಭೆ ನಡೆಸಿದ ಶಾಸಕ ದರ್ಶನ್ ಧ್ರುವನಾರಾಯಣ್ 

ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.), ಕರ್ನಾಟಕ ವತಿಯಿಂದ  ರಾಷ್ಟ್ರಕವಿ ಕುವೆಂಪು ಪ್ರಶಸ್ತಿಗೆ ಆನಂದ್ ಸಿ. ತಿರುಮಲ  ಆಯ್ಕೆ