--Ads--

ಮೈಸೂರಿನಲ್ಲಿ ಪಬ್‌ ನಲ್ಲಿ ಅಗ್ನಿ ಅವಘಡ: ಇಬ್ಬರೂ ಬೆಂಕಿಗಾಹುತಿ

On: June 15, 2026 3:35 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…

ಮೈಸೂರಿನಲ್ಲಿ ಪಬ್‌ ನಲ್ಲಿ ಅಗ್ನಿ ಅವಘಡ: ಇಬ್ಬರೂ ಬೆಂಕಿಗಾಹುತಿ

ತಾಂಡವಪುರ ಜೂನ್ 15 ಆಕಸ್ಮಿಕವಾಗಿ ವಿದ್ಯುತ್‌ ಅವಘಡ ಸಂಭವಿಸಿದ ಪರಿಣಾಮವಾಗಿ ಇಬ್ಬರೂ ಬೆಂಕಿಗಾಹುತಿ ಆಗಿ ಆರು ಮಂದಿ ಆಸ್ಪತ್ರೆಗೆ ದಾಖಲಾಗಿರುವ ದಾರುಣ ಘಟನೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮೈಸೂರಿನ ದಟ್ಟಗಳ್ಳಿಯ “ಫಾಕ್ಸ್ ಡೆನ್” ಬಾರ್ ಅಂಡ್ ರೆಸ್ಟೋರೆಂಟ್ ಹೋಟೆಲ್ ನ ಪಬ್‌ ನಲ್ಲಿ ನಡೆದಿದೆ.
ಚೆಫ್‌ ಮಣಿಪುರದ ಸಾಹಿನ್(26), ನೇಪಾಳದ ಪ್ರಕಾಶ್‌(24) ಬೆಂಕಿಗೆ ಆಹುತಿಯಾದ ದುರ್ದೈವಿಗಳಾಗಿದ್ದಾರೆ. ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಗಂಭೀರವಾಗಿ ಗಾಯಗೊಂಡಿದ್ದ 7 ಮಂದಿಯನ್ನು ರಕ್ಷಿಸಿ ಸ್ಥಳೀಯ ಅಪೋಲೊ ಹಾಗೂ ಸುಯೋಗ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಘಟನೆ ಹಿನ್ನಲೆ: ಮಧ್ಯಾಹ್ನ 3ಗಂಟೆ ಸುಮಾರಿಗೆ ಹೋಟೆಲ್‌ ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಎರಡನೇ ಮಹಡಿಯಲ್ಲಿ ಶಾಕ್‌ ಸರ್ಕ್ಯೂಟ್‌ ಸಂಭವಿಸಿದೆ. ಸಂಭವಿಸಿದ ರಭಸದಿಂದ ಇಡೀ ಹೋಟೆಲ್‌ ಮೇಲ್ಚಾವಣಿ ಸಂಪೂರ್ಣವಾಗಿ ಹೊತ್ತಿ ಉರಿಯಲಾರಂಭಿಸಿದೆ. ಈ ವೇಳೆ ವಿದ್ಯುತ್‌ ತಗುಲಿದ್ದ ಇಬ್ಬರೂ ಸ್ಥಳದಲ್ಲೇ ಬೆಂಕಿಯಲ್ಲಿ ನಂದಿ ಹೋಗಿದ್ದಾರೆ.

ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕುವೆಂಪುನಗರ ಪೊಲೀಸ್‌ ಠಾಣೆ ಹಾಗೂ ಸರಸ್ವತಿ ಪುರಂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಗೆ ಆಹುತಿ ಆಗಿದ್ದವರನ್ನು ರಕ್ಷಿಸಿ ಬೇರೆ ಮಾರ್ಗದಲ್ಲಿ ಕೆಳಗಿಳಿಸಿ ರಕ್ಷಿಸಿದ್ದಾರೆ. ಸದ್ಯ ಎರಡನೇ ಮಹಡಿ ಹಾಗೂ ಮೂರನೇ ಮಹಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಯ ಕ್ಷಿಪ್ರಕಾರ್ಯಾಚರಣೆಯಿಂದ ಬೆಂಕಿಯನ್ನು ನಿಯಂತ್ರಿಸಿ ಜನರನ್ನು ಹೊರಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಹಕರಾದ ಮಂಡ್ಯ ಪಟ್ಟಣದ ಸೋನಾ(೨೫), ಬೆಂಗಳೂರಿನ ರಮೇಶ್‌, ರೆಸ್ಟೋರೆಂಟ್‌ನ ಸಿಬ್ಬಂದಿಗಳಾದ ಪ್ರಜ್ವಲ್‌(೨೬), ಅವಿನಾಶ್‌(೨೨), ಯೋಗ(೨೪) ಹಾಗೂ ವ್ಯವಸ್ಥಾಪಕ ಮಹದೇವ ಪ್ರಸಾದ್‌ ಆಸ್ಪತ್ರೆಗೆ ದಾಖಲಾದವರಾಗಿದ್ದಾರೆ.
ವಿಚಾರ ತಿಳಿದು ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ, ನಗರಪೊಲೀಸ್‌ ಉಪಆಯುಕ್ತರಾದ ಸುಂದರ್ ರಾಜ್‌, ಹರ್ಷ ಪ್ರಿಯಂವದ ಇನ್ನಿತರರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ಅರಿಯುವ ಕೆಲಸ ಮಾಡಿದರು.
ಆಫ್ರಿಕ್‌ ಮಾದರಿ ತಂದ ಅಪತ್ತು
ನಗರದ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿರುವ ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್ ವಾಣಿಜ್ಯ ಕಟ್ಟಡದ ಮೂರನೇ ಅಂತಸ್ತಿನ ಮೇಲ್ಚಾವಣಿಯಲ್ಲಿ ಕಳೆದ ವರ್ಷ ಆರಂಭವಾಗಿದ್ದ ಆಫ್ರಿಕಾ ಶೈಲಿಯಲ್ಲಿ ಅಂದರೆ ಹುಲ್ಲು ಮತ್ತು ಗೋಣಿ ಚೀಲದಿಂದ ಹಳ್ಳಿ ಗುಡಿಸಲು ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಜತೆಗೆ ಅಲಂಕಾರಕ್ಕಾಗಿ ವಿದ್ಯುತ್‌ ಬಲ್ಬಗಳನ್ನು ಹೆಚ್ಚಾಗಿ ಅಳವಡಿಸಲಾಗಿತ್ತು. ಶಾಕ್‌ ಸರ್ಕೂಟ್‌ ಬೆಂಕಿ ತಗುಲಿ ಇದು ಬೆಂಕಿ ಮತ್ತಷ್ಟು ವ್ಯಾಪಿಸಲು ಕಾರಣವಾಯಿತು ಎನ್ನಲಾಗಿದೆ. ಬೆಂಕಿ ನೋಡ ನೋಡುತ್ತಿದ್ದಂತೆ ಮೇಲ್ಛಾವಣಿಯಲ್ಲಿ‌ ಧಗಧಗಸಿದೆ. ಅಂದಾಜಿ ಪ್ರಕಾರ ಸುಮಾರು 25ಕ್ಕೂ ಗ್ರಾಹಕರು ಮತ್ತು ಸುಮಾರು 10ಕ್ಕೂ ಹೆಚ್ಚು ಹೋಟೆಲ್ ಸಿಬ್ಬಂದಿ ಬೆಂಕಿಗೆ ಸಿಲುಕಿ ಹೊರ ಹೋಗಲು ಪ್ರಯತ್ನಿಸಿದ್ದಾರೆ. ಹೊರಹೋಗಲು ಒಂದೇ ಒಂದು ಭಾಗದಲ್ಲಿ ಹೋಗಬೇಕಾಗಿರುವುದರಿಂದ ಕೆಲವರಿಗೆ ಬೆಂಕಿ ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ. ಅಡುಗೆ ಮನೆಯಲ್ಲಿ ಸಿಲುಕಿಕೊಂಡವರು ಹೊರ ಬರಲಾಗದೇ ಅವಘಡಕ್ಕೆ ತುತ್ತಾಗಿದ್ದಾರೆನ್ನಲಾಗಿದೆ.
ನನ್ನ ಕ್ಷೇತ್ರದ ಹೋಟೆಲ್ ನಲ್ಲಿ ನಡೆದಿದೆ ವಿಚಾರ ತಿಳಿದು ಪರಿಶೀಲನೆ ಮಾಡಲು ಬಂದಿದ್ದೇನೆ. ಇಂತಹ ಅವಘಡ ಯಾರು ನಿರೀಕ್ಷಿಸಿರಲಿಲ್ಲ. ಈಗ ಸಾವನ್ನಪ್ಪಿರುವ ಇಬ್ಬರು ನಮ್ಮ ರಾಜ್ಯದವರಲ್ಲ ಹೊರ ರಾಜ್ಯದ ಯುವಕರು ಎಂದು ತಿಳಿದುಬಂದಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಅವರ ಬಗ್ಗೆ ಮಾಹಿತಿ ಕಲೆ ಹಾಕಿ ಅಂತ್ಯ ಸಂಸ್ಕಾರ ಎಲ್ಲಿ ಮಾಡೋದು ಅವರ ತವರಿಗೆ ಕಳಿಸಿಕೊಡುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸೂಚನೆ ನೀಡಿದ್ದೇನೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ.
– ಜಿ.ಟಿ.ದೇವೇಗೌಡ, ಶಾಸಕ
ನಮಗೆ ಮಧ್ಯಾಹ್ನ 3.15 ರ ಸಮಯದಲ್ಲಿ ಸರಸ್ವತಿ ಪುರಂ ಅಗ್ನಿಶಾಮಕ ಕೇಂದ್ರಕ್ಕೆ ಫೋನ್ ಕರೆ ಬಂತು. ತಕ್ಷಣ ನಾವು ಕಾರ್ಯೋನ್ಮುಖರಾಗಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಬೆಂಕಿ ನಂದಿಸಿ ಸುಮಾರು 15 ಕ್ಕೂ ಹೆಚ್ಚು ಜನರನ್ನ ರಕ್ಷಣೆ ಮಾಡಿದ್ದೇವೆ. ಅಡುಗೆ ವಿಭಾಗದಲ್ಲಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಉಳಿದಂತೆ 7 ಜನ ಗಾಯಾಳುಗಳ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಸೂಕ್ತ ಫೈರ್ ಎಕ್ಸಿಟ್ ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿದೆ. ಮೇಲ್ಚಾವಣಿಯಲ್ಲಿ ಮರ, ಹುಲ್ಲು, ಗೋಣಿ ಚೀಲ ಇದ್ದುದ್ದರಿಂದ ಬೆಂಕಿ ಹೆಚ್ಚು ವ್ಯಾಪಿಸಿದೆ.
-ರಂಗನಾಥ್, ಅಗ್ನಿಶಾಮಕ ದಳದ ವಿಭಾಗೀಯ ಅಧಿಕಾರಿ.
ಮಧ್ಯಾಹ್ನ 3.15ಕ್ಕೆ ಘಟನೆ ನಡೆದಿದೆ. ನಾನು ಕೂಡ ಇಲ್ಲಿ ಕೆಲಸ ಮಾಡುತ್ತಿದ್ದೇನೆ ನಮ್ಮ ಹುಡುಗ ಒಬ್ಬ ಕಿರುಚಿಕೊಂಡು ಓಡಿ ಬಂದ ಗ್ರಾಹಕರು ಸುಮಾರು 20 ಜನ ಇದ್ದರು. ಕಿಚನ್ ಅಲ್ಲಿ 6 ಮಂದಿ ಇದ್ದರು. ನಮ್ಮ ಓನರ್ ಸೇರಿ ಇನ್ನೊಂದು 5 ಜನ ಹಾಲ್ ನಲ್ಲಿ ಇದ್ದರು. ಹೋಟೆಲ್ ಪೂರ್ತಿ ಹುಲ್ಲು, ಗೋಣಿ ತಾಟು, ವುಡನ್ ವಸ್ತುಗಳಿಂದ ಮಾಡಿರೋದು ಹೀಗಾಗಿ ಬೆಂಕಿ ಬೇಗ ಸುತ್ತುವರೆದಿದೆ ಕಿಚನ್ ನಲ್ಲಿದ್ದ ಶಾಹಿನ್ ಹಾಗೂ ಪ್ರಕಾಶ್ ಹೊರಗಡೆ ಬರಲು ಸಾಧ್ಯವಾಗಿಲ್ಲ. ಮಿಕ್ಕವರು ಎಲ್ಲಾ ಕೆಳಗಿಳಿದು ಬಂದರು ಕೆಲವರನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದರು.
-ಅವಿನಾಶ್,ಹೋಟೆಲ್ ಸಿಬ್ಬಂದಿ.

WhatsApp

Join Now

Telegram

Join Now

Instagram

Join Now