ವಿಜಯ ದರ್ಪಣ ನ್ಯೂಸ್…..
ಪಿತೃಪಕ್ಷದ ಪ್ರಯುಕ್ತ “ಗರುಡ ಪುರಾಣ” ಪ್ರವ
ಬೆಂಗಳೂರು ನಗರದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಪಿತೃ ಪಕ್ಷದ ಪ್ರಯುಕ್ತ “ಗರುಡ ಪುರಾಣ” ಧಾರ್ಮಿಕ ಪ್ರವಚನ

ಸುಧೀಂದ್ರನಗರ : ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 10ರ ವರೆಗೆ ಪ್ರತಿದಿನ ಸಂಜೆ 7-00ಕ್ಕೆ ಮ||ಶಾ||ಸಂ|| ಶ್ರೀ ಚಿಮ್ಮಲಗಿ ಆಚಾರ್ಯರಿಂದ “ಗರುಡ ಪುರಾಣ” ಪ್ರವಚನ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಸುಧೀಂದ್ರನಗರ, ಬೆಂಗಳೂರು
ಸುಬ್ರಹ್ಮಣ್ಯನಗರ : ಸೋಸಲೆ ಶ್ರೀ ವ್ಯಾಸರಾಜ ಮಠದ ವತಿಯಿಂದ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3ರ ವರೆಗೆ ಪ್ರತಿದಿನ ಸಂಜೆ 6-00ಕ್ಕೆ ಮ||ಶಾ||ಸಂ|| ಶ್ರೀ ಧನಂಜಯಾಚಾರ್ಯರಿಂದ “ಗರುಡ ಪುರಾಣ” ಪ್ರವಚನ. ಸ್ಥಳ : ಶ್ರೀ ವ್ಯಾಸರಾಜ ಮಠ (ಸೋಸಲೆ), 5ನೇ ಮುಖ್ಯರಸ್ತೆ, ಸುಬ್ರಹ್ಮಣ್ಯನಗರ, ರಾಜಾಜಿನಗರ 2ನೇ ಹಂತ, ಬೆಂಗಳೂರು
ಮಲ್ಲೇಶ್ವರಂ : ಶ್ರೀಮನ್ಮಾಧ್ವ ಸಂಘದ ವತಿಯಿಂದ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 10ರ ವರೆಗೆ ಪ್ರತಿದಿನ ಸಂಜೆ 6-45ಕ್ಕೆ ಮ||ಶಾ||ಸಂ|| ಶ್ರೀ ಚಂದ್ರಶೇಖರ ಆಚಾರ್ಯರಿಂದ “ಗರುಡ ಪುರಾಣ” ಪ್ರವಚನ. ಸ್ಥಳ : ಮಾಧ್ವ ಸಂಘ, 8ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು.
ವಿಜಯನಗರ : ವಿಜಯ ಮಧ್ವ ಸಂಘದ ವತಿಯಿಂದ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ ಮ||ಶಾ||ಸಂ|| ಶ್ರೀ ಸಮೀರಾಚಾರ್ಯರಿಂದ “ಗರುಡ ಪುರಾಣ” ಪ್ರವಚನ. ಸ್ಥಳ : ವಿಜಯ ಮಧ್ವ ಸಂಘ, 37/2, ಗಂಗಾಧರ ಬಡಾವಣೆ, ವಿಜಯನಗರ, ಬೆಂಗಳೂರು.
ಪ್ರಕಾಶನಗರ : ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 3ರ ವರೆಗೆ ಪ್ರತಿದಿನ ಸಂಜೆ 7-00ಕ್ಕೆ ಮ||ಶಾ||ಸಂ||ಶ್ರೀ ಹರಿ ಆಚಾರ್ಯರಿಂದ “ಗರುಡ ಪುರಾಣ” ಪ್ರವಚನ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, ಪ್ರಕಾಶನಗರ, ಬೆಂಗಳೂರು.
ಊಂಜಲ್ ಸಂಗೀತ ಕಾರ್ಯಕ್ರಮ

ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಯ್ಯಾಲಿಕಾವಲಿನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 26, ಶನಿವಾರ ಸಂಜೆ 6-00ಕ್ಕೆ ವಿದುಷಿ ಶ್ರೀಮತಿ ಸಂಧ್ಯಾ ಶ್ರೀನಾಥ್ ಇವರಿಂದ ಊಂಜಲ್ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ವಿದ್ವಾನ್ ಶ್ರೀ ಎಂ.ಎಸ್. ಗೋವಿಂದಸ್ವಾಮಿ ಹಾಗೂ ಮೃದಂಗ ವಾದನದಲ್ಲಿ ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಸಹಕರಿಸಿದ್ದಾರೆ ಎಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











