--Ads--

” ಶ್ರೀ ಪೂಜಮ್ಮ ದೇವಿಯ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಕರಪತ್ರ ಬಿಡುಗಡೆ “

On: September 27, 2026 9:22 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

” ಶ್ರೀ ಪೂಜಮ್ಮ ದೇವಿಯ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಕರಪತ್ರ ಬಿಡುಗಡೆ “

ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ಶ್ರೀ ಕ್ಷೇತ್ರ ಕೆಂಬಳಿಗಾನಹಳ್ಳಿಯ ಶ್ರೀ ಪೂಜಮ್ಮ ದೇವಿ ದೇವಾಲಯದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಾಗೂ ಕರಗ ಮಹೋತ್ಸವದ ಕರಪತ್ರ ಬಿಡುಗಡೆಯನ್ನು ದೇವಾಲಯದ ಧರ್ಮದರ್ಶಿಗಳಾದ ಶ್ರೀ ಮುರಳಿ ಸ್ವಾಮಿಗಳು ಬಿಡುಗಡೆ ಮಾಡಿ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ದೇವಾಲಯವು ತಾಲೂಕಿನಲ್ಲಿ ತನ್ನದೇ ಆದ ಪ್ರಸಿದ್ಧತೆಯನ್ನು ಹೊಂದಿದ್ದು ಪ್ರತಿ ಅಮಾವಾಸ್ಯೆ ಹುಣ್ಣಿಮೆ ದಿನದಂದು ವರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಬರುತ್ತದೆ. ದೇವಾಲಯವು ಸ್ಥಾಪನೆಗೊಂಡು ನಾಲ್ಕು ವರ್ಷಗಳಾಗಿದ್ದು ನಾಲ್ಕು ವರ್ಷಗಳಿಂದ ನಿರಂತರವಾಗಿ ವಾರ್ಷಿಕೋತ್ಸವ ಹಾಗೂ ಕರಗ ಮಹೋತ್ಸವ ಪಲ್ಲಕ್ಕಿ ಉತ್ಸವ ನಡೆಯುತ್ತಾ ಬಂದಿದೆ.

ಅದೇ ರೀತಿ ಈ ವರ್ಷವೂ ನಾಲ್ಕು ದಿನಗಳ ಕಾಲ ನಡೆಯುವ ಪೂಜಾ ಕಾರ್ಯಕ್ರಮಗಳು ನಾನಾ ಬಗೆಯ ಹೋಮ ಅವನಾದಿಗಳಿಂದ ಪ್ರಾರಂಭಗೊಂಡು ದೇವಾಲಯಕ್ಕೆ ಬಸಪ್ಪನ ಆಗಮನದೊಂದಿಗೆ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ.

ದಿನಾಂಕ 1.10.2026ನೇ ಗುರುವಾರದಂದು ಪ್ರಾರಂಭಗೊಂಡು 4.10.2026 ನೇ ಭಾನುವಾರದಂದು ಮುಕ್ತಾಯಗೊಳ್ಳಲಿದೆ. ದಿನಾಂಕ 3.10.2026 ನೇ ಭಾನುವಾರ ರಾತ್ರಿ 12 ಗಂಟೆಗೆ ಹೂವಿನ ಕರಗ ಮಹೋತ್ಸವವು ಏರ್ಪಡಿಸಿದ್ದು 9 ದೇವರ ಪಲ್ಲಕ್ಕಿ ಉತ್ಸವವು ಹಾಗೂ ಮನೋರಂಜನೆ ಕಾರ್ಯಕ್ರಮವು ಏರ್ಪಡಿಸಲಾಗಿದೆ.

ಭಾನುವಾರದಂದು ದೇವಿಗೆ ದೀಪೋತ್ಸವ ಮಾಡುವುದರ ಮೂಲಕ ಬಲಿದಾನ ಮಾಡಿ ಸಾವಿರಾರು ಜನಕ್ಕೆ ಅನ್ನದಾಸೋಹ ವ್ಯವಸ್ಥೆಯೂ ಸಹ ಏರ್ಪಡಿಸಿದೆ ಎಂದು ದೇವಾಲಯದ ಧರ್ಮದರ್ಶಿಗಳಾದ ಮುರುಳಿ ಸ್ವಾಮಿಗಳು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ತಾಲೂಕಿನ ಹಾಗೂ ರಾಜ್ಯದ ಎಲ್ಲ ಭಕ್ತ ಸಮೂಹ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.

WhatsApp

Join Now

Telegram

Join Now

Instagram

Join Now