--Ads--

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲು ಒತ್ತಾಯ

On: October 10, 2026 4:08 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲು ಶ್ರೀಧರ್ ನೆಲ್ಲಿತ್ತಾಯ ಒತ್ತಾಯ

ಕನ್ನಡ ರಾಜ್ಯೋತ್ಸವ ಕೊಡಗಿನಲ್ಲಿ ಆಚರಿಸುವ ಸಂದರ್ಭದಲ್ಲಿ ಜಿಲ್ಲಾಡಳಿತ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಿ ಸನ್ಮಾನಿಸಬೇಕಾಗಿದೆ. 2013ರ ತನಕ ಈ ಪದ್ಧತಿ ಜಾರಿಯಲ್ಲಿತ್ತು, ನಂತರ ಕೇವಲ ಸರ್ಕಾರದ ಉದ್ಯೋಗಸ್ಥರು, ಸರ್ಕಾರಿ ಸೌಮ್ಯದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದವರಿಗೆ ಮಾತ್ರ ಸನ್ಮಾನ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುತ್ತಿರುವಾಗ ಕೊಡಗಿನಲ್ಲಿ ಮಾತ್ರ ಯಾಕಿಲ್ಲ?..

ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೇಶವಕಮತ್ ರವರು ಈ ವಿಚಾರವಾಗಿ ಪ್ರಸ್ತಾಪಿಸಿದರು. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಈ ಬಾರಿ, ಕಲೆ ಸಾಹಿತ್ಯ ಸಂಸ್ಕೃತಿ, ಮಾಧ್ಯಮ ಕ್ಷೇತ್ರ ಒಳಗೊಂಡಂತೆ ವಿವಿಧ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರನ್ನು ಗುರುತಿಸಿ ಸನ್ಮಾನಿಸಬೇಕಾಗಿದೆ.

ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಇಬ್ಬರು ಶಾಸಕರು ಕೂಡ ಈ ಬಗ್ಗೆ ಗಮನ ಹರಿಸಬೇಕಾಗಿದೆ. ವಿವಿಧ ಕ್ಷೇತ್ರದಲ್ಲಿ ಅರ್ಹತೆ ಇರುವವರನ್ನು ಗುರುತಿಸಲು, ಕೆಲವು ರಾಜಕೀಯ ಒತ್ತಡಗಳು ಬಂದ ಕಾರಣ ಅಂದಿನ ಜಿಲ್ಲಾಧಿಕಾರಿಗಳು ಇದನ್ನು ನಿಲುಗಡೆಗೊಳಿಸಿದ್ದರು ಎಂದು ಹೇಳಲಾಗಿದೆ. ಇದರಿಂದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಯಿಂದ ವಂಚಿತರಾಗಿದ್ದರು. ಕನ್ನಡ ನಾಡು ನುಡಿ ಇಲ್ಲಿನ ಸಂಸ್ಕೃತಿಯ ಉಳಿವಿಗಾಗಿ ಅಪಾರ ಸೇವೆ ಸಲ್ಲಿಸಿದವರನ್ನು ಈ ಬಾರಿ ಗುರುತಿಸುವಂತಾಗಬೇಕು.

ಹಿಂದೆ ನಾನು ಸೇರಿದಂತೆ ಹಲವರು ಈ ಪ್ರಶಸ್ತಿಗೆ ಭಾಜನರಾಗಿದ್ದೇವೆ. ನಮ್ಮನ್ನೆಲ್ಲ ಹೊರತುಪಡಿಸಿ, ಮರು ಸನ್ಮಾನ ಆಗದಂತೆ ನೋಡಿಕೊಂಡು ಜಿಲ್ಲಾಡಳಿತ ಪಟ್ಟಿ ತಯಾರಿಸುವುದು ಸೂಕ್ತವಾಗಿದೆ. ಜಿಲ್ಲಾಡಳಿತ ಮತ್ತೊಮ್ಮೆ ಹಿಂದಿನ ಪದ್ಧತಿಯನ್ನು ಜಾರಿಗೆ ಗೊಳಿಸುವುದು ಅನಿವಾರ್ಯ ಕೂಡ ಆಗಿದೆ.
ನಮ್ಮ ಜನಪ್ರತಿನಿಧಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿಕೊಳ್ಳುತ್ತೇವೆ.

ಶ್ರೀಧರ್ ನೆಲ್ಲಿತ್ತಾಯ

WhatsApp

Join Now

Telegram

Join Now

Instagram

Join Now