ಬೈಕೆರೆ ನಾಗೇಶ್ ನಾಡಿನ ಅಪರೂಪದ ಅಧಿಕಾರಿ.
ವಿಜಯ ದರ್ಪಣ ನ್ಯೂಸ್ ಸಜ್ಜನ ಸಹೃದಯಿ ಬೈಕೆರೆ ನಾಗೇಶ್ (72) ಇಷ್ಟು ಬೇಗ ನಮ್ಮನ್ನು ಅಗಲುವರು ಎಂದು ನಿರೀಕ್ಷಿಸಿರಲಿಲ್ಲ. ಸಕಲೇಶಪುರ ತಾಲ್ಲೂಕು ಕುಗ್ರಾಮ ಬೈಕೆರೆಯಿಂದ ದೆಹಲಿ ತನಕ ನಾಗೇಶ್ ಪಯಣಿಸಿದ ಹಾದಿ ನೋಡಿದರೆ ಎಂಥವರಿಗೂ ನಿಬ್ಬೆರಗಾಗುವಂತಾದ್ದು. ಯಾರ ವೈರತ್ವವನ್ನು ಕಟ್ಟಿಕೊಳ್ಳದ ಮುಗುಳ್ನಗೆ ಸ್ನೇಹತ್ವದಲ್ಲಿಯೇ ತನ್ನವರನ್ನಾಗಿಸಿಕೊಂಡು ಎಲ್ಲರೊಳಗೂ ಸರಳ ವ್ಯಕ್ತಿತ್ವದ ಛಾಪು ಮೂಡಿಸುತ್ತಿದ್ದ ನಾಗೇಶ್ ನಾಡಿನ ಅಪರೂಪದ ಕ್ರಿಯಾಶೀಲ ಅಧಿಕಾರಿ. ಜಾಫರ್ ಷರೀಫ್ ಬಳಿ ಆಪ್ತ ಕಾರ್ಯದರ್ಶಿಯಾಗಿ ದೆಹಲಿಯತ್ತ ಮುಖ ಮಾಡಿದವರು ಮತ್ತೆ ರಾಜ್ಯ ಸೇವೆಗೆ ಹಿಂತಿರುಗಲಿಲ್ಲ. ದೆಹಲಿಯನ್ನು…