ಮಿರೇ ಅಸೆಟ್ ಶೇರ್ ಖಾನ್ ನಿಂದ ತನ್ನ ಹೊಸದಾಗಿ ಪ್ರಾರಂಭಿಸಿದ ಪ್ರೀಮಿಯರ್ ವೆಲ್ತ್ ಪಾರ್ಟ್ನರ್ ವಿಭಾಗಕ್ಕೆ ಅಧಿಕೃತ ಪಾಲುದಾರರಾಗಿ ಎ.ಎಸ್.ಕೆ. ಪ್ರೈವೇಟ್ ವೆಲ್ತ್ ಸೇರ್ಪಡೆ

ವಿಜಯ ದರ್ಪಣ ನ್ಯೂಸ್….. ಮಿರೇ ಅಸೆಟ್ ಶೇರ್ ಖಾನ್ ನಿಂದ ತನ್ನ ಹೊಸದಾಗಿ ಪ್ರಾರಂಭಿಸಿದ ಪ್ರೀಮಿಯರ್ ವೆಲ್ತ್ ಪಾರ್ಟ್ನರ್ ವಿಭಾಗಕ್ಕೆ ಅಧಿಕೃತ ಪಾಲುದಾರರಾಗಿ ಎ.ಎಸ್.ಕೆ. ಪ್ರೈವೇಟ್ ವೆಲ್ತ್ ಸೇರ್ಪಡೆ ರಾಷ್ಟ್ರೀಯ, 23 ಸೆಪ್ಟೆಂಬರ್, 2026: ಮಿರೇ ಅಸೆಟ್ ಶೇರ್‌ಖಾನ್ ಸಂಸ್ಥೆಯು ಎ.ಎಸ್‌.ಕೆ ಪ್ರೈವೇಟ್ ವೆಲ್ತ್ ಜೊತೆಗೆ ಪ್ರಮುಖ ಕಾರ್ಯತಂತ್ರೀಯ ಸಹಭಾಗಿತ್ವವನ್ನು ಪ್ರಕಟಿಸಿದೆ. ವಿಶೇಷ ಜ್ಞಾನ ಮತ್ತು ಶ್ರೇಷ್ಠಮಟ್ಟದ ಅನುಷ್ಠಾನದ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಮೌಲ್ಯವನ್ನು ತಲುಪಿಸಲು ಬದ್ಧವಾಗಿರುವ ಎರಡು ಪ್ರಮುಖ ಸಂಸ್ಥೆಗಳು ಒಂದಾಗುತ್ತಿರುವುದಕ್ಕೆ ಈ ಸಹಭಾಗಿತ್ವವು ನಾಂದಿ … Read more

ಅರ್ಜುನ ವಿನಾಯಕ ಗೆಳೆಯರ ಬಳಗದ ವಿಜೃಂಭಣೆಯ ಗಣೇಶೋತ್ಸವ: ಸಡಗರದಿಂದ ಮೂರ್ತಿ ವಿಸರ್ಜನೆ

ವಿಜಯ ದರ್ಪಣ ನ್ಯೂಸ್…. ಅರ್ಜುನ ವಿನಾಯಕ ಗೆಳೆಯರ ಬಳಗದ ವಿಜೃಂಭಣೆಯ ಗಣೇಶೋತ್ಸವ: ಸಡಗರದಿಂದ ಮೂರ್ತಿ ವಿಸರ್ಜನೆ ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿ ವ್ಯಾಪ್ತಿಯ ತಾವರೆಕೆರೆ ಗ್ರಾಮದಲ್ಲಿ ಅರ್ಜುನ ವಿನಾಯಕ ಗೆಳೆಯರ ಬಳಗದ ವತಿಯಿಂದ ಮೂರನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸುಮಾರು 11 ದಿನಗಳ ಕಾಲ ನಿರಂತರವಾಗಿ ಗಣೇಶನಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಪ್ರತಿದಿನ ಸಂಜೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರು ಹಾಗೂ ಗ್ರಾಮಸ್ಥರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. … Read more

ಮುತ್ಸಂದ್ರ ಸಹಕಾರ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವ : ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ 

ವಿಜಯ ದರ್ಪಣ ನ್ಯೂಸ್…… ಮುತ್ಸಂದ್ರ ಸಹಕಾರ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವ : ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ    ತಾವರೆಕೆರೆ : ಹೊಸಕೋಟೆ ತಾಲ್ಲೂಕಿನ ಮುತ್ಸಂದ್ರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ಸಂಘದ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ಜರುಗಿತು. ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಂ.ಸಿ.ಬಿ. … Read more

ನಾರಾಯಣ ಗುರುಗಳು ಮತ್ತು ಅಂಬೇಡ್ಕರ್ ರವರು  ಮನುಕುಲಕ್ಕೆ ಅದ್ಭುತ ಆಲೋಚನೆಗಳನ್ನು ಕೊಟ್ಟ ಧೀಮಂತರು 

ವಿಜಯ ದರ್ಪಣ ನ್ಯೂಸ್…… ನಾರಾಯಣ ಗುರುಗಳು ಮತ್ತು ಅಂಬೇಡ್ಕರ್ ರವರು  ಮನುಕುಲಕ್ಕೆ ಅದ್ಭುತ ಆಲೋಚನೆಗಳನ್ನು ಕೊಟ್ಟ ಧೀಮಂತರು    ನಾರಾಯಣ ಗುರುಗಳು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಒಂದೇ ಆಲೋಚನೆಯಲ್ಲಿ ಬದುಕಿದವರು ಅವರಿಬ್ಬರ ಕಾಲಘಟ್ಟ ಸ್ವಲ್ಪಮಟ್ಟಿನ ವ್ಯತ್ಯಾಸವಿದ್ದರೂ ಮನುಕುಲಕ್ಕೆ ಅದ್ಭುತ ಆಲೋಚನೆಗಳನ್ನು ಕೊಟ್ಟ ಧೀಮಂತ ವ್ಯಕ್ತಿಗಳು ಇವರು ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ. ಎಸ್. ದ್ವಾರಕಾನಾಥ್ ನುಡಿದರು. ಮಾಸ್ತಿ ಗ್ರಾಮದ ಕೆಪಿಎಸ್ ಶಾಲೆಯ ಆವರಣದಲ್ಲಿ ಶ್ರೀ ನಾರಾಯಣ ಗುರು ಸೇವಾ … Read more

ಜಂಗಮಕೋಟೆ ಹೋಬಳಿ ಹೊಸಪೇಟೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸೆಪ್ಟೆಂಬರ್-26 ಶನಿವಾರ “ಪ್ರಜಾ ಸೇವೆ ಆಂದೋಲನ”

ವಿಜಯ ದರ್ಪಣ ನ್ಯೂಸ್…. ಜಂಗಮಕೋಟೆ ಹೋಬಳಿ ಹೊಸಪೇಟೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸೆಪ್ಟೆಂಬರ್-26 ಶನಿವಾರ “ಪ್ರಜಾ ಸೇವೆ ಆಂದೋಲನ” ಶಿಡ್ಲಘಟ್ಟ : ಪ್ರಜಾ ಸೇವೆ ಆಂದೋಲನ”ದ ಅಂಗವಾಗಿ ಶನಿವಾರ ಸೆ.26 ಜಂಗಮಕೋಟೆ ಹೋಬಳಿ ಹೊಸಪೇಟೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಸಾರ್ವಜನಿಕರು ತಮ್ಮ ಅಹವಾಲುಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ತಹಶೀಲ್ದಾ‌ರ್ ಗಗನಸಿಂಧು ಮನವಿ ಮಾಡಿದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಶನಿವಾರ ನಡೆದ ಕಾರ್ಯಕ್ರಮದಲ್ಲಿ 210 … Read more

ಚಿರಂಜೀವಿ ಚಾರಿಟೆಬಲ್ ಟ್ರಸ್ಟ್ ನಿಂದ ಶಿಡ್ಲಘಟ್ಟ ನಾರಾಯಣಸ್ವಾಮಿ ಗೆ “ಸಮಾಜ ಸೇವೆಯ ಗುರುತಿಸುವಿಕೆ”ಯ ಪ್ರಶಂಸಾ ಪತ್ರ

ವಿಜಯ ದರ್ಪಣ ನ್ಯೂಸ್…. ಚಿರಂಜೀವಿ ಚಾರಿಟೆಬಲ್ ಟ್ರಸ್ಟ್ ನಿಂದ ಶಿಡ್ಲಘಟ್ಟ ನಾರಾಯಣಸ್ವಾಮಿ ಗೆ “ಸಮಾಜ ಸೇವೆಯ ಗುರುತಿಸುವಿಕೆ”ಯ ಪ್ರಶಂಸಾ ಪತ್ರ ಶಿಡ್ಲಘಟ್ಟ : ಚಿರಂಜೀವಿ ಚಾರಿಟೆಬಲ್ ಟ್ರಸ್ಟ್ ನೀಡಿರುವ “ಸಮಾಜ ಸೇವೆಯ ಗುರುತಿಸುವಿಕೆ”ಯ ಪ್ರಶಂಸಾ ಪತ್ರ ದಲ್ಲಿ, ಸಮಾಜಕ್ಕೆ ಸಲ್ಲಿಸಿರುವ ಸಮರ್ಪಿತ ಸೇವೆ ಹಾಗೂ ಅರ್ಥಪೂರ್ಣ ಕೊಡುಗೆಯನ್ನು ಗುರುತಿಸಿ ಶಿಡ್ಲಘಟ್ಟದ ನಾರಾಯಣಸ್ವಾಮಿ ಅವರನ್ನು ಅಭಿನಂದಿಸಲಾಗಿದೆ. ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬದ ಅಂಗವಾಗಿ ಪ್ರತಿವರ್ಷ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ … Read more

ಕೊಡಗಿನ ಪ್ರತಿಯೊಂದು ಊರಿನ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಪರಿಶ್ರಮವಿದೆ!

ವಿಜಯ ದರ್ಪಣ ನ್ಯೂಸ್…. ಪೌರಕಾರ್ಮಿಕರ ದಿನಾಚರಣೆ ಸ್ವಚ್ಛತೆಯ ಸೈನಿಕರಿಗೆ ಅಭಿನಂದನೆಗಳು ಕೊಡಗಿನ ಪ್ರತಿಯೊಂದು ಊರಿನ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಪರಿಶ್ರಮವಿದೆ! ಕೊಡಗು: ಒಂದು ನಗರ ಸುಂದರವಾಗಿ ಕಾಣಬೇಕಾದರೆ ಕೇವಲ ಉತ್ತಮ ರಸ್ತೆಗಳು ಕಟ್ಟಡಗಳು ಮತ್ತು ಉದ್ಯಾನವನಗಳು ಸಾಕಾಗುವುದಿಲ್ಲ ಅದರ ಸ್ವಚ್ಛತೆಯನ್ನು ಕಾಪಾಡುವ ಪರಿಶ್ರಮದ ಕೈಗಳು ಬೇಕು ಆ ಕೈಗಳೇ ನಮ್ಮ ಪೌರಕಾರ್ಮಿಕರ ಕೈಗಳು ನಾವು ಬೆಳಗ್ಗೆ ಎದ್ದು ಸ್ವಚ್ಛವಾದ ರಸ್ತೆಯನ್ನು ನೋಡುತ್ತೇವೆ. ಸ್ವಚ್ಛವಾದ ಪರಿಸರದಲ್ಲಿ ಬದುಕುತ್ತೇವೆ ಸ್ವಚ್ಛತೆಯ ಹಿಂದೆ ಮುಂಜಾನೆಯೇ ಎದ್ದು ಬಿಸಿಲು–ಮಳೆ ಎನ್ನದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ … Read more

ಹಾಡಹಗಲೇ ಕಳ್ಳರು ಮನೆಗೆ ನುಗ್ಗಿ ಕಳವು ಪರಾರಿ

ವಿಜಯ ದರ್ಪಣ ನ್ಯೂಸ್…. ಹಾಡಹಗಲೇ ಕಳ್ಳರು ಮನೆಗೆ ನುಗ್ಗಿ ಕಳವು ಪರಾರಿ ಶಿಡ್ಲಘಟ್ಟ : ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಗ್ರಾಮದ ಕೃಷ್ಣಪ್ಪ ಮತ್ತು ನಾರಾಯಣಮ್ಮ ದಂಪತಿ ಕುರಿ ಮೇಯಿಸಲು ತೆರಳಿದ್ದ ಸಂದರ್ಭದಲ್ಲಿ ಬೆಳಿಗ್ಗೆ 9ರಿಂದ 10ರ ನಡುವೆ ಕಳ್ಳರು ಮನೆಯ ಬಾಗಿಲು ಮುರಿದು ಒಳನುಗ್ಗಿದ್ದಾರೆ ಎನ್ನಲಾಗಿದೆ. ಬಳಿಕ ಬೀರು ಒಡೆದು ಅದರಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು … Read more

ಬರಪಿಡಿತ ಪ್ರದೇಶದ ರೈತರ ಸಾಲ ಮನ್ನಾಕ್ಕೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅಗ್ರಹ

ವಿಜಯ ದರ್ಪಣ ನ್ಯೂಸ್….. ಬರಪಿಡಿತ ಪ್ರದೇಶದ ರೈತರ ಸಾಲ ಮನ್ನಾಕ್ಕೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅಗ್ರ ತಾಂಡವಪುರ ಸೆಪ್ಟೆಂಬರ್ 22 ರಾಜ್ಯದಲ್ಲಿ ವರುಣದೇವನ ಕೃಪ ಇಲ್ಲದೆ ರಾಜ್ಯದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಕೂಡ ರೈತರ ನೆರವಿಗೆ ಸರ್ಕಾರ ಧಾವಿಸುವ ಜೊತೆಗೆಬರ ಪೀಡಿತ ಪ್ರದೇಶಗಳೆಂದು ಘೋಷಣೆಯಾಗಿರುವ ವ್ಯಾಪ್ತಿಯ ರೈತರ ಕೃಷಿ ಪತ್ತಿನ ಸಹಕಾರ ಸಂಘದ ಸಾಲವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಹಾಗೂ ಕೇಂದ್ರ ಸರ್ಕಾರ ರಾಷ್ಟ್ರೀಕೃತ … Read more

ಬೆಂಗಳೂರು ತಜ್ಞರಿಂದ ಬೆಳವಣಿಗೆ ವಿಳಂಬ ಹೊಂದಿರುವ ಮಕ್ಕಳಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ

ವಿಜಯ ದರ್ಪಣ ನ್ಯೂಸ್….. ಬೆಂಗಳೂರು ತಜ್ಞರಿಂದ ಬೆಳವಣಿಗೆ ವಿಳಂಬ ಹೊಂದಿರುವ ಮಕ್ಕಳಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ ಶಿಡ್ಲಘಟ್ಟ : ಮಕ್ಕಳ ಬೆಳವಣಿಗೆಯಲ್ಲಿ ಯಾವುದೇ ರೀತಿಯ ವಿಳಂಬ ಅಥವಾ ತೊಂದರೆ ಕಂಡುಬಂದಲ್ಲಿ ಆರಂಭಿಕ ಹಂತದಲ್ಲಿಯೇ ತಜ್ಞರಿಂದ ತಪಾಸಣೆ ಹಾಗೂ ಸೂಕ್ತ ಮಾರ್ಗದರ್ಶನ ಪಡೆಯುವುದು ಅಗತ್ಯ ಎಂದು ವೈದ್ಯರು ಪೋಷಕರಿಗೆ ತಿಳಿಸಿದರು. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧಿ ಫೌಂಡೇಷನ್ ಫಾರ್ ಅರ್ಲಿ ಇಂಟರ್ವೆನ್ನನ್ಸ್ ವತಿಯಿಂದ ಬೆಳವಣಿಗೆಯಲ್ಲಿ ವಿಳಂಬ ಹಾಗೂ ತೊಂದರೆಗಳನ್ನು ಹೊಂದಿರುವ ಮಕ್ಕಳಿಗೆ ಉಚಿತ ತಪಾಸಣಾ … Read more