ಸಿನಿಮಾ, ಒಂದು ಸೋಲು, ಒಂದು ಗೆಲುವಿನ ಸುತ್ತಾ…..

ವಿಜಯ ದರ್ಪಣ ನ್ಯೂಸ್…. ಸಿನಿಮಾ, ಒಂದು ಸೋಲು, ಒಂದು ಗೆಲುವಿನ ಸುತ್ತಾ….. ಟಾಕ್ಸಿಕ್ ಎಂಬ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾದ ಕೆಲವೇ ದಿನಗಳ ನಂತರ ಪ್ರೇಮದ ಊರಲಿ ಎಂಬ ಸಿನಿಮಾ ಸ್ವಲ್ಪ ಮಟ್ಟಿಗೆ ಯಶಸ್ಸಿನತ್ತ ಸಾಗುತ್ತಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಕುತೂಹಲಕರವಾಗಿದೆ ಮತ್ತು ಆಶಾದಾಯಕವಾಗಿದೆ. ಕನ್ನಡ ಸಿನಿಮಾ ರಂಗದಲ್ಲಿ ವರ್ಷಕ್ಕೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿದ್ದರು ಯಶಸ್ಸಿನ ಪ್ರಮಾಣ ಶೇಕಡಾ ಐದರಿಂದ ಹತ್ತು ಮಾತ್ರ. ಉಳಿದವು ವಿಫಲವಾಗುವುದೇ ಹೆಚ್ಚು. ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ರೀತಿಯ ಸಿನಿಮಾಗಳು ಯಶಸ್ವಿಯಾಗುವುದನ್ನು ಗಮನಿಸಬಹುದು. … Read more

ಶರನ್ನವರಾತ್ರಿ ಮಹೋತ್ಸವ -2026

ವಿಜಯ ದರ್ಪಣ ನ್ಯೂಸ್….. ಶರನ್ನವರಾತ್ರಿ ಮಹೋತ್ಸವ -2026 ಬೆಂಗಳೂರು : ಶ್ರೀ ಗಂಗಮ್ಮ ಗ್ರಾಮ ದೇವತಾ ಸೇವಾ ಸಮಿತಿಯ ವತಿಯಿಂದ ಜಯನಗರ 4ನೇ ಟಿ ಬಡಾವಣೆಯ 11ನೇ ಮುಖ್ಯರಸ್ತೆಯ ಶ್ರೀ ಗಂಗಮ್ಮ ದೇವಿ ಅಮ್ಮನವರ ದೇವಸ್ಥಾನದಲ್ಲಿ ಅಕ್ಟೋಬರ್ 11 ರಿಂದ 21ರ ವರೆಗೆ ಪ್ರತಿದಿನ ವಿಶೇಷ ಪೂಜೆ, ಅಭಿಷೇಕ, ವಿವಿಧ ಅಲಂಕಾರ ಹಾಗೂ ಪ್ರತಿದಿನ ಸಂಜೆ 6-30 ರಿಂದ 8-00ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ವಿವರಗಳು : ಅಕ್ಟೋಬರ್ 11-ತತ್ವಂ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ … Read more

ಪ್ರಣವಾಂಜಲಿ ಅಕಾಡೆಮಿಯಿಂದ ‘ನವರಾತ್ರಿ ನೃತ್ಯೋತ್ಸವ – 2026’

ವಿಜಯ ದರ್ಪಣ ನ್ಯೂಸ್……. ಪ್ರಣವಾಂಜಲಿ ಅಕಾಡೆಮಿಯಿಂದ ‘ನವರಾತ್ರಿ ನೃತ್ಯೋತ್ಸವ – 2026’ ಬೆಂಗಳೂರು, ಅಕ್ಟೋಬರ್ 11: ಭಾರತೀಯ ಶಾಸ್ತ್ರೀಯ ನೃತ್ಯಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿದುಷಿ ಪವಿತ್ರ ಪ್ರಶಾಂತ್ ಅವರ ನೇತೃತ್ವದ ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ 9:30ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ನವರಾತ್ರಿ ನೃತ್ಯೋತ್ಸವ – 2026’ ಆಯೋಜಿಸಲಾಗಿದೆ. ಪ್ರತಿಭಾ ನಾಟ್ಯಾಲಯದ ಸಂಸ್ಥಾಪಕಿ ವಿದುಷಿ ಶ್ರೀಮತಿ ಪ್ರಭಾ ಕಿಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಉತ್ಸವದಲ್ಲಿ … Read more

ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ಅವರಿಗೆ 2025 ನೇ ಸಾಲಿನ ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ

ವಿಜಯ ದರ್ಪಣ ನ್ಯೂಸ್….. ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ಅವರಿಗೆ 2025 ನೇ ಸಾಲಿನ ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ ತಾಂಡವಪುರ ಅಕ್ಟೋಬರ್ 9 ದಕ್ಷಿಣ ಕಾಶಿ ನಂಜನಗೂಡಿನ ಶ್ರಾವಣ ಕಲ್ಯಾಣ ಮಂಟಪದಲ್ಲಿ ಇಂದು ತಾಲ್ಲೂಕು ಪತ್ರಕರ್ತರ ಸಂಘ (ರಿ.) ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಶ್ರೀ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ನಡೆಯಿತು ಗ್ರಾಮೀಣ ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ಅವರಿಗೆ 2025 ನೇ ಸಾಲಿನ ಸುತ್ತೂರು ಮಠದಸುತ್ತೂರು … Read more

ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ: ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿ ಅಮಾನತು

ವಿಜಯ ದರ್ಪಣ ನ್ಯೂಸ್….. ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ: ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿ ಅಮಾನತು ಸಾರ್ವಜನಿಕರ ಕೆಲಸಗಳಲ್ಲಿ ವಿಳಂಬ, ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ: ಡಿಸಿಎಂ ಎಚ್ಚರಿಕೆ ಸರ್ಕಾರಿ ಗೋಮಾಳ ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಕ್ರಮ ನಕಲಿ ಭೂದಾಖಲೆ ಸೃಷ್ಟಿ ಹಾಗೂ ಅಕ್ರಮ ಖಾತೆ ಬದಲಾವಣೆ ಕಂಡುಬಂದರೆ ಕಠಿಣ ಕ್ರಮ ದೇವನಹಳ್ಳಿಯಲ್ಲಿ ಉಪ ನೋಂದಣಾಧಿಕಾರಿ ಕಚೇರಿಗೆ ಹೊಸ ಕಟ್ಟಡ ನಿರ್ಮಾಣ; ದಾಖಲೆಗಳ ಸುರಕ್ಷತೆಗೆ … Read more

ಕಾವೇರಿ ವಿವಾದ: ಕರ್ನಾಟಕಕ್ಕೆ ಕೊಂಚ ರಿಲೀಫ್, 15 ದಿನಕ್ಕೆ 3,000 ಕ್ಯೂಸೆಕ್ ನೀರು ಬಿಡಲು CWRC ಆದೇಶ

ವಿಜಯ ದರ್ಪಣ ನ್ಯೂಸ್…… ಕಾವೇರಿ ವಿವಾದ: ಕರ್ನಾಟಕಕ್ಕೆ ಕೊಂಚ ರಿಲೀಫ್, 15 ದಿನಕ್ಕೆ 3,000 ಕ್ಯೂಸೆಕ್ ನೀರು ಬಿಡಲು CWRC ಆದೇಶ ತಮಿಳುನಾಡು ಕೇಳಿದ್ದು 15,050 ಕ್ಯೂಸೆಕ್, ಆದೇಶ ಬಂದಿದ್ದು 3,000 ಕ್ಯೂಸೆಕ್; ರಾಜ್ಯದ ವಾದಕ್ಕೆ ಮನ್ನಣೆ “ಕಾವೇರಿಯಲ್ಲಿ ಕರ್ನಾಟಕದ ವಾದಕ್ಕೆ ಜಯ” *ಬೆಂಗಳೂರು, ಅ.08:* ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ನಡೆದ 144ನೇ CWRC ಮತ್ತು 59ನೇ CWMA ಸಭೆಯಲ್ಲಿ ಕರ್ನಾಟಕಕ್ಕೆ ಕೊಂಚ ರಿಲೀಫ್ ಸಿಕ್ಕಿದೆ. ತಮಿಳುನಾಡು 15 ದಿನಗಳಿಗೆ 20.013 ಟಿಎಂಸಿ … Read more

ಪ್ರತಿಭಾವಂತ ನಟ ನಾನಾ ಪಾಟೇಕರ್; ಯುವ ಜನಾಂಗಕ್ಕೆ ಸ್ಫೂರ್ತಿ!

ವಿಜಯ ದರ್ಪಣ ನ್ಯೂಸ್….. ಪ್ರತಿಭಾವಂತ ನಟ    ನಾನಾ ಪಾಟೇಕರ್; ಯುವ ಜನಾಂಗಕ್ಕೆ ಸ್ಫೂರ್ತಿ! ಲೇಖನ : ಅಂಕ್ನಳ್ಳಿ ಜಯರಾಂ, ಮುಂಬಯಿ  ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ, ವಿಶಿಷ್ಟ ಹಾಗೂ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ನಾನಾ ಪಾಟೇಕರ್ (ವಿಶ್ವನಾಥ್ ಪಾಟೇಕರ್) ಅವರು ತಮ್ಮ ಅಪ್ರತಿಮ ನಟನೆ, ವಿಶಿಷ್ಟ ಸಂಭಾಷಣೆಯ ಶೈಲಿ ಮತ್ತು ಸರಳ ವ್ಯಕ್ತಿತ್ವಕ್ಕೆ ಹೆಸರಾಗಿದ್ದರು. ‘ನಾನಾ’ ಎಂದೇ ಖ್ಯಾತನಾಮರಾಗಿ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಬಹು ಕಾಲ ಆಳಿದ ಅವರು, ಕೇವಲ ಒಬ್ಬ ನಟನಾಗಿ ಮಾತ್ರವಲ್ಲದೆ … Read more

ಮೈಸೂರು ದಸರಾ, ಮಹಿಷಾ ದಸರಾ, ಚಾಮುಂಡಿ ದಸರಾ…..

ವಿಜಯ ದರ್ಪಣ ನ್ಯೂಸ್…… ಮೈಸೂರು ದಸರಾ, ಮಹಿಷಾ ದಸರಾ, ಚಾಮುಂಡಿ ದಸರಾ….. ವಿಜಯ ದಶಮಿ – ಆಯುಧ ಪೂಜೆ….. ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತ…… ರಾಜಪ್ರಭುತ್ವ ವ್ಯವಸ್ಥೆಯಲ್ಲಿನ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಗಳ ಅರ್ಥ ಮತ್ತು ಪ್ರಜಾಪ್ರಭುತ್ವದಲ್ಲಿ ಅದೇ ಮೌಲ್ಯಗಳ ಅರ್ಥ ಒಂದಷ್ಟು ಪರಿವರ್ತನೆ ಹೊಂದಿದೆ. ರಾಜನೇ ಪ್ರತ್ಯಕ್ಷ ದೇವರು ಎಂಬ ಪರಿಕಲ್ಪನೆಯ ಸ್ಥಿತಿಯಲ್ಲಿ ರಾಜ ನಿಷ್ಠೆಯೇ ಒಳ್ಳೆಯತನದ ಸಂಕೇತ. ಅದಕ್ಕೆ ವಿರುದ್ಧದ ಎಲ್ಲವೂ ದ್ರೋಹ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಇಲ್ಲಿ ಒಳ್ಳೆಯದು … Read more

ಕನ್ನಡ ಭಾಷೆಯನ್ನು ಉಳಿಸಿ ಬೆಳಸಬೇಕು ಕನ್ನಡ ಭಾಷೆಯನ್ನು ಉಳಿಸಿ ಬೆಳಸಬೇಕು

ವಿಜಯ ದರ್ಪಣ ನ್ಯೂಸ್….. ಕನ್ನಡ ಭಾಷೆಯನ್ನು ಉಳಿಸಿ ಬೆಳಸಬೇಕು ಶಿಡ್ಲಘಟ್ಟ : ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಯುವಜನರ ಪಾತ್ರ ಮಹತ್ವದ್ದು ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಯು ಉಳಿಸಿ ಬೆಳಸಬೇಕು ಎಂದು ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಶ್ರೀಕಾಂತ್ ತಿಳಿಸಿದರು. ನಗರದ ಸರಸ್ವತಿ ವಿದ್ಯಾಸಂಸ್ಥೆಯಲ್ಲಿ “ಕನ್ನಡ ಕಲರವ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿದೆ ವಿದ್ಯಾರ್ಥಿಗಳು ಕನ್ನಡ ಭಾಷೆಯ ಮಹತ್ವ ಅರಿತು ದಿನನಿತ್ಯದ ಬದುಕಿನಲ್ಲಿ ಬಳಸಬೇಕು … Read more

ಬಳುವನಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳಿಂದ ಕೃಷಿ ಕಲರವ

ವಿಜಯ ದರ್ಪಣ ನ್ಯೂಸ್….. ಬಳುವನಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳಿಂದ ಕೃಷಿ ಕಲರವ ಶಿಡ್ಲಘಟ್ಟ : ಕೃಷಿ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೈತರು ಹಾಗೂ ಕೃಷಿ ವಿದ್ಯಾರ್ಥಿಗಳ ನಡುವಿನ ಸಂವಾದಗಳು ಸಹಕಾರಿಯಾಗಲಿವೆ ಎಂದು ತಹಶೀಲ್ದಾರ್ ಎನ್. ಗಗನಸಿಂಧು ತಿಳಿಸಿದರು. ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಬಳುವನಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳು ಆಯೋಜಿಸಿದ್ದ “ಕೃಷಿ ಕಲರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೃಷಿ ಕ್ಷೇತ್ರದ ಬೆಳವಣಿಗೆಗೆ ರೈತರ ಜ್ಞಾನ, ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆ ಹಾಗೂ ಕೃಷಿ … Read more