--Ads--

ರಸಗೊಬ್ಬರ ಖರೀದಿಸುವಂತೆ ಒತ್ತಾಯಿಸುವಂತಿಲ್ಲ: ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ

On: April 17, 2026 5:42 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ರಸಗೊಬ್ಬರ ಖರೀದಿಸುವಂತೆ ಒತ್ತಾಯಿಸುವಂತಿಲ್ಲ: ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ

ತಾಂಡವಪುರ ಏಪ್ರಿಲ್ 17: ರಸಗೊಬ್ಬರ ಮಾರಾಟಗಾರರು ರೈತರು ಯುರಿಯಾ ಸೇರಿ ಅಗತ್ಯ ರಸಗೊಬ್ಬರ ಖರೀದಿಸುವಾಗ ಅವರಿಗೆ ಅಗತ್ಯವಿಲ್ಲದ ರಸಗೊಬ್ಬರ ಖರೀದಿಸುವಂತೆ ಲಿಂಕ್ ಮಾಡಿ ಒತ್ತಾಯ ಮಾಡಿದರೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2026-27 ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಸಮರ್ಪಕ ಪೂರೈಕೆ ಸಂಬoಧ ಕೃಷಿ ಪರಿಕರಗಳ ಸರಬರಾಜುದಾರರ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಅಧಿಕಾರಗಳ ಸಭೆ ನಡೆಸಿ ಮಾತನಾಡಿದರು. ರೈತರಿಗೆ ಯುರಿಯಾ ಕೊರತೆಯಾಗದಂತೆ ಮಾರಾಟ ಮಾಡಲು ಜಿಲ್ಲೆಯಲ್ಲಿ ರಸಗೊಬ್ಬರ ಸರಬರಾಜುದಾರ ಸಂಸ್ಥೆ ಹಾಗೂ ಡೀಲರ್ ಗಳು ಕೃಷಿ ಇಲಾಖೆಯಿಂದ ಹೊರಡಿಸಲಾಗಿರುವ ಸೂಚನೆಗಳನ್ನು ಪಾಲಿಸಬೇಕು ಎಂದರು.

ರಸಗೊಬ್ಬರ ಸರಬರಾಜುದಾರ ಕಂಪನಿಗಳು ಡೀಲರ್ ಗಳಿಗೆ ರಸಗೊಬ್ಬರ ವಿತರಣೆ ಮಾಡುವ ಮೊದಲೇ ರೇಕ್ (Rake) ವಿವರವನ್ನು ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಯುರಿಯಾ ಮತ್ತು ಡಿ.ಎ.ಪಿ ದಾಸ್ತಾನು ಜಿಲ್ಲೆಗೆ ಬಂದ ತಕ್ಷಣ ಕೆ.ಎಸ್.ಎಸ್.ಸಿ ಮತ್ತು ಕೆ.ಎಸ್.ಸಿ.ಎಂ.ಎಫ್ ನಲ್ಲಿ ಶೇ 40 ರಿಂದ 50 ರಷ್ಟು ಪರಿಮಾಣವನ್ನು ಬಫರ್ ಸ್ಟಾಕ್ ರೂಪದಲ್ಲಿ ಸಂಗ್ರಹಿಸಬೇಕು. ರೈತರಿಗೆ ಮಾರಾಟ ಮಾಡಬೇಕಿರುವ ಯುರಿಯಾ ಹಾಗೂ ಡಿ.ಎ.ಪಿ ರಸಗೊಬ್ಬರಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡುವುದು, ಕೈಗಾರಿಕೆಗಳಿಗೆ ಮಾರಾಟ ಮಾಡುವುದು ಕಂಡು ಬಂದಲಿ ಅಂತಹ ಡೀಲರ್ ಅಥವಾ ಸರಬರಾಜು ಕಂಪನಿಗಳ ಪರವಾನಗಿ ರದ್ದು ಪಡಿಸಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಯುರಿಯಾ ರಸಗೊಬ್ಬರವನ್ನು ಕಡ್ಡಾಯವಾಗಿ ಯುರಿಯಾ ವಿತರಣಾ ಆ್ಯಪ್ ನಲ್ಲಿ ಹಾಗೂ ಪಿ.ಒ.ಎಸ್ ತಂತ್ರಾoಶದಲ್ಲಿ ನಮೂದಿಸಿ ನಂತರ ಮಾರಾಟ ಮಾಡಬೇಕು. ರೈತರ ಎಫ್.ಐ.ಡಿ (fruits ID) ಯಲ್ಲಿ ಜಮೀನಿನ ವಿವರ ಲಭ್ಯವಿದ್ದು, ವಿಸ್ತೀರ್ಣ ಹಾಗೂ ಬೆಳೆಗಳಿಗೆ ಇಲಾಖೆ ನಿಗದಿಪಡಿಸುವ ಯುರಿಯಾ ಬಳಕೆಯ ಪರಿಮಾಣವನ್ನು ಮಾತ್ರ ಆಯಾ ರೈತರಿಗೆ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಹೆಚ್ಚುವರಿಯಾಗಿ ನೀಡುವಂತಿಲ್ಲ. ಯುರಿಯಾ ಸೇರಿದಂತೆ ರಾಸಾಯನಿಕ ರಸಗೊಬ್ಬರಗಳ ಬಳಕೆ ಕುರಿತಂತೆ ಇಲಾಖೆ ಪ್ರಕಣೆ ಹೊರಡಿಸಲಿದೆ. ಇಲಾಖೆಯ ಪ್ರಕಟಣೆಯನ್ನು ಅನಾವರಣಗೊಳಿಸಿ, ರೈತರಿಗೆ ಅದರನ್ವಯ ರಸಗೊಬ್ಬರ ವಿತರಣೆ ಮಾಡಿ. ಇದರಿಂದ ಅತಿಯಾದ ರಾಸಾಯನಿಕ ರಸಗೊಬ್ಬರ ಬಳಕೆಯನ್ನು ಸಹ ತಡೆಯಬಹುದು ಎಂದರು.

ಜಂಟಿ ಕೃಷಿ ನಿರ್ದೇಶಕ ಕೆ.ಎಚ್ ರವಿ ಅವರು ಮಾತನಾಡಿ ಮಾರಟಗಾರರು ತಮ್ಮಲ್ಲಿರುವ ರಸಗೊಬ್ಬರದ ದಾಸ್ತಾನು, ದರದ ವಿವರನ್ನು ಅಂಗಡಿಯ ಮುಂಭಾಗ ಅನಾವರಣ ಮಾಡಬೇಕು, ಕಡ್ಡಾಯವಾಗಿ ಎಂ. ನಮೂನೆಯಲ್ಲಿ ಬಿಲ್ ನೀಡಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕ್, ಜಂಟಿ ಕೃಷಿ ನಿರ್ದೇಶಕ( ಜಾಗೃತ ಕೋಶ) ರಾಮಕೃಷ್ಣ, ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ವೆಂಕಟೇಶ ಸೇರಿ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಗಳಿಂದ ಜನಗಣತಿ ಕೆಲಸ ಪರಿಶೀಲನೆ

ಮೈಸೂರು: ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಮೈಸೂರು ನಗರದ ತೊಣಚಿ ಕೊಪ್ಪಲ್ ಪ್ರದೇಶದಲ್ಲಿ ಜನಗಣತಿ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಿದರು.
ಗಣತಿದಾರರು ಮನೆಗಳ ಮ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದು, ಗಣತಿದಾರರಿಂದ ಜಿಲ್ಲಾಧಿಕಾರಿಗಳು ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಶನಿವಾರದವರೆಗೆ ಮನೆಗಳ ಮ್ಯಾಪಿಂಗ್ ಕೆಲಸ ನಡೆಯುತ್ತಿದ್ದು, ನಂತರ ಮನೆ- ಮನೆಗೆ ಗಣತಿದಾರರು ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ. ಸಾರ್ವಜನಿಕರು ಗಣತಿದಾರರಿಗೆ ನಿಖರ ಮಾಹಿತಿ ನೀಡಿ ಎಂದರು.

ಇದೇ ಸಂದರ್ಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಉಪಯುಕ್ತ ಹಾಗೂ ಮೈಸೂರು ನಗರ ಜನಗಣತಿ ಅಧಿಕಾರಿ ಜಿ.ಎಸ್.ಸೋಮಶೇಖರ್ ಇತರರು ಉಪಸ್ಥಿತರಿದ್ದರು.
ನೀರಿನ ಸಮಸ್ಯೆ ನಿವಾರಣೆಗೆ ಸಹಾಯವಾಣಿ ಸ್ಥಾಪನೆ
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಪ್ರಸ್ತುತ ಬೇಸಿಗೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಂಭವವಿರುವುದರಿoದ ಗ್ರಾಮೀಣ ಪ್ರದೇಶದ ಜನರಿಗೆ ಪ್ರಸ್ತುತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಹಾಗೂ ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾ ಪಂಚಾಯಿತಿಯಿoದ ಸಹಾಯವಾಣಿ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಜಿಲ್ಲೆಯ ಸಾರ್ವಜನಿಕರು ಸಹಾಯವಾಣಿ ದೂರವಾಣಿ ಸಂ.0821-2526344 ಗೆ ಕರೆಮಾಡಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

WhatsApp

Join Now

Telegram

Join Now

Instagram

Join Now