ವಿಜಯ ದರ್ಪಣ ನ್ಯೂಸ್….
ಶ್ರೀಶನೇಶ್ವರ ದೇವಾಲಯದಲ್ಲಿ ಶನೇಶ್ವರ ಜಯಂತಿ ಅಂಗವಾಗಿ ವಿವಿಧ ಹೋಮ ಹವನಗಳು ಹಾಗೂ ಪೂಜೆ

ಕೂಡಿಗೆ : ಕೂಡಿಗೆ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶನೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶನಿವಾರವ್ ಕೂಡಿಗೆ ಹೆಗ್ಗಡಹಳ್ಳಿ ಗ್ರಾಮದ ಶ್ರೀ ಶನೇಶ್ವರ ದೇವಾಲಯದಲ್ಲಿ ಶ್ರೀ ಶನೇಶ್ವರ ಜಯಂತಿ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು ಬೆಳಿಗ್ಗೆಯಿಂದಲೇ ದೇವಾಲಯ ಆವರಣದಲ್ಲಿ ಪಂಚಗವ್ಯ ಪುಣ್ಯಹ ವಾಚನ, ಗಣಾಯಾನ. ಸಂಗ್ರಹಾಮಕ . ಶನಿ ಶಾಂತಿ ಹೋಮ, ನವಕಲಶಾರಾಧನೆ.
ಪ್ರಧಾನ ಹೋಮ, ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ. ಮಹಾ ಕುಂಭಾಭಿಷೇಕ ಪ್ರಸನ್ನ ಪೂಜೆ ಶನಿ ಶಾಂತಿ ಹೋಮ. ಪೂರ್ಣಾವತಿ, ನೆರವೇರಿತು ಹಾಗೂ ಮಧ್ಯಾಹ್ನ 12:30 ಕ್ಕೆ ಮಹಾಪೂಜೆ ಮತ್ತು ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣ ಕಾರ್ಯಕ್ರಮವು ನೆರವೇರಿತು.

ದಿವಂಗತ ಶ್ರೀಮತಿ ಎಲ್ಲೂಬಾಯಿ ಅಮ್ಮನವರ ಆಶೀರ್ವಾದಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಅವರ ಕುಟುಂಬಸ್ಥರು ಹಾಗೂ ಭಕ್ತಾದಿಗಳು ಹಾಗೂ ದಾನಿಗಳು ನಡೆಸಿಕೊಂಡು ಬರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಲ್ಯಾಂಪ್ಸ್ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಎಸ್ ಆರ್ ಅರುಣ್ ರಾವ್. ಎಸ್ ಎನ್ ನಾಗರಾಜ್, ಅಭಿಷೇಕ್, ರೇಣುಕಾ, ಅನಿಲ್ ರಾವ್, ಅಭಿಷೇಕ್, ಕಮಲ ಬಾಯ್, ಹಾಗೂ ಸಾವಿರಾರು ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಪುನೀತರಾದರು.
ಕಳೆದ 27 ವರ್ಷಗಳಿಂದ ನಾನು ಕೂಡಿಗೆಯ ಶ್ರೀ ಶನೇಶ್ವರ ದೇವಾಲಯಕ್ಕೆ ಪ್ರತಿ ತಿಂಗಳು ಎರಡು ಬಾರಿಯಾದರೂ ನಾನು ಈ ದೇವಾಲಯಕ್ಕೆ ಬಂದು ಹೋಗುತ್ತೇನೆ. ದಿವಂಗತ ಎಲ್ಲೂ ಬಾಯಿ ಅಮ್ಮನವರ ಆಶೀರ್ವಾದದಿಂದ ಪ್ರತಿ ತಿಂಗಳು ಎರಡು ಬಾರಿಯಾದರೂ ನಾನು ಈ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದು ಹೋಗುತ್ತೇನೆ ನಾನು ಈ ದೇವರನ್ನು ನಂಬಿದ್ದೇನೆ ಎಂದು ಹೇಳಿದರು.
ಶಿವಪ್ರಸಾದ್ ಶೆಟ್ಟಿ ಪುತ್ತೂರು ನಾವು ಕಳೆದ 30 ವರ್ಷಗಳಿಂದ ಈ ದೇವಾಲಯಕ್ಕೆ ನಾವು ಹಾಗೂ ನಮ್ಮ ಕುಟುಂಬ ವರ್ಗ ಬರುತ್ತಿದ್ದೇವೆ ಅದೇ ರೀತಿ ಈ ದೇವಾಲಯಕ್ಕೆ ಕೊಡಗು ಜಿಲ್ಲೆ ಅಲ್ಲದೆ ಮೈಸೂರು ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಂದ ಸಾವಿರಾರು ಭಕ್ತಾದಿಗಳು ಇತ್ತೀಚಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ನಮಗೆ ತುಂಬಾ ಸಂತೋಷ ತಂದಿದೆ ಇದೇ ರೀತಿ ಮುಂದಕ್ಕೂ ಭಕ್ತಾದಿಗಳು ಇದೇ ರೀತಿ ಸಹಕರಿಸಬೇಕು.
ಪ್ರಕಾಶ್ ಶೆಟ್ಟಿ ಮೈಸೂರು ಕಳೆದ 65 ವರ್ಷಗಳಿಂದ ಈ ದೇವಾಲಯವನ್ನು ನಮ್ಮ ಅಜ್ಜಿಯವರು ನಡೆಸಿಕೊಂಡು ಬರ್ತಿದ್ದರು ಅದನ್ನು ನಾವು ಮುಂದುವರಿಸಿಕೊಂಡು ಬರುತ್ತಿದ್ದೇವೆ ಪ್ರತಿ ಮಹಾಶಿವರಾತ್ರಿ ಮಕರ ಸಂಕ್ರಮಣ ಶನೇಶ್ವರ ಜಯಂತಿ ಹಾಗೂ ಇನ್ನೂ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಈ ದೇವಾಲಯದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ ನಮಗೆ ಕೊಡಗು ಜಿಲ್ಲೆಗಳ ಭಕ್ತಾದಿಗಳು ಮಾತ್ರವಲ್ಲದೆ ಹಾಸನ್ ಮೈಸೂರು ಬೆಂಗಳೂರು ಪುತ್ತೂರು ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಭಕ್ತಾದಿಗಳು ನಮ್ಮ ದೇವಾಲಯಕ್ಕೆ ಬರುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಕ್ತಾದಿಗಳ ಸಂಖ್ಯೆಯು ಹೆಚ್ಚು ತಿದ್ದು ನಮಗೆ ತುಂಬಾ ಸಂತೋಷ ತಂದಿದೆ ಎಂದು ಇದೇ ಸಂದರ್ಭಕೂಡಿಗೆ ಹೆಗ್ಗಡಹಳ್ಳಿ ಶ್ರೀ ಶನೇಶ್ವರ ದೇವಾಲಯ ಸಮಿತಿಯ ಉಸ್ತುವಾರಿ ಎಸ್ ಆರ್ ಸುನಿಲ್ ರಾವ್ ಹೇಳಿದರು.











