--Ads--

ಶತಮಾನ ಸರ್ಕಾರಿ ಕೆಪಿಎಸ್ ಶಾಲೆಯಲ್ಲಿ ಪೋಷಕರಿಂದ ಹಣ ವಸೂಲಿ ವಿರೋಧಿಸಿ:ವಿವಿಧ ಸಂಘಟನೆಗಳಿಂದ ಭಿಕ್ಷಾಟನೆ.

On: June 13, 2026 5:29 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ಶತಮಾನ ಸರ್ಕಾರಿ ಕೆಪಿಎಸ್ ಶಾಲೆಯಲ್ಲಿ ಪೋಷಕರಿಂದ ಹಣ ವಸೂಲಿ ವಿರೋಧಿಸಿ :ವಿವಿಧ ಸಂಘಟನೆಗಳಿಂದ ಭಿಕ್ಷಾಟನೆ.

ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು – ಹೋರಾಟಗಾರರ ನಡುವೆ ಹೈಡ್ರಾಮಾ ಪೊಲೀಸರ ಮಧ್ಯಪ್ರವೇಶ
ಕೆ.ಆರ್.ಪೇಟೆ: ಉಚಿತ ಶಿಕ್ಷಣ ಘೋಷಣೆ ಇರುವ ಸರ್ಕಾರಿ ಶಾಲೆಯಲ್ಲೇ ಪೋಷಕರಿಂದ ಹಣ ವಸೂಲಿ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೆ.ಆರ್.ಪೇಟೆ ಪಟ್ಟಣದ 116 ವರ್ಷಗಳ ಇತಿಹಾಸವಿರುವ ಕೆ.ಪಿ.ಎಸ್ ಸರ್ಕಾರಿ ಶಾಲೆಯಲ್ಲಿ ಕೇಳಿಬಂದಿದೆ.
ಶೌಚಾಲಯ ನಿರ್ವಹಣೆ ನೆಪದಲ್ಲಿ ಪ್ರತಿ ವಿದ್ಯಾರ್ಥಿಯ ಪೋಷಕರಿಂದ ಒಂದು ಸಾವಿರ ಸಂಗ್ರಹಿಸಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿ ವಿವಿಧ ಸಂಘಟನೆಗಳಿಂದ ಭಿಕ್ಷಾಟನೆ ಮಾಡುವ ಮೂಲಕ ಸರಕಾರ,ಶಿಕ್ಷಣ ಸಚಿವ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಯಿತು.
ಭಿಕ್ಷಾಟನೆಯಿಂದ ಛೀಮಾರಿ
ಹಣ ವಸೂಲಿ ಖಂಡಿಸಿ ಕೆ.ಆರ್. ಪೇಟೆ ಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ವಿನೂತನ ಪ್ರತಿಭಟನೆ ನಡೆಸಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೂ ಪಾಲಿಶ್ ಮಾಡಿ, ಭಿಕ್ಷಾಟನೆ ಎತ್ತಿ ಹಣ ಸಂಗ್ರಹಿಸಿದ ಹೋರಾಟಗಾರರು “ಸರ್ಕಾರ ಶಾಲೆ ನಡೆಸಲು ಸಾಧ್ಯವಿಲ್ಲದಿದ್ದರೆ ನಾವೇ ಭಿಕ್ಷೆ ಬೇಡಿ ನಡೆಸುತ್ತೇವೆ ಎಂದು ಶಿಕ್ಷಣ ಸಚಿವರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಗೆ ಛೀಮಾರಿ ಹಾಕಿದರು.

ಸಂಗ್ರಹವಾದ 12.513 ಹಣವನ್ನು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲೇ ಪ್ರದರ್ಶಿಸಿದರು.
ಕಪ್ಪು ಚುಕ್ಕೆ V/S ಕಳಂಕ ವಾಗ್ಯುದ್ಧ
ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಕೆಲ ಪೋಷಕರು ಈ ರೀತಿ ಭಿಕ್ಷಾಟನೆ ಮಾಡಿ 116 ವರ್ಷದ ಶಾಲೆಗೆ ಕಪ್ಪು ಚುಕ್ಕೆ ತರಬೇಡಿ.ಶಾಲೆಯ ಗೌರವಕ್ಕೆ ಧಕ್ಕೆ ತರಬೇಡಿ ಎಂದು ಹೋರಾಟಗಾರರ ವಿರುದ್ಧ ಕಿಡಿಕಾರಿದರು.
ಇದಕ್ಕೆ ತಕ್ಷಣ ತಿರುಗೇಟು ನೀಡಿದ ಹೋರಾಟಗಾರರು, ಬಡ ಪೋಷಕರಿಂದ 1000 ವಸೂಲಿ ಮಾಡಿ ಉಚಿತ ಶಿಕ್ಷಣ ಹಕ್ಕು ಕಸಿಯೋರೇ ಶಾಲೆಗೆ ನಿಜವಾದ ಕಳಂಕ. ಸರ್ಕಾರ ಸಂಬಳ ಕೊಡುತ್ತೆ, ಅನುದಾನ ಕೊಡುತ್ತೆ. ಮತ್ತೆ ಪೋಷಕರಿಂದ ಯಾಕೆ ವಸೂಲಿ? ಎಂದು ಪ್ರಶ್ನಿಸಿದರು.

ಉದ್ವಿಗ್ನತೆ: ಪೊಲೀಸರ ಹರಸಾಹಸ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಮತ್ತು ಹೋರಾಟಗಾರರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಎರಡೂ ಗುಂಪುಗಳ ನಡುವೆ ತೀವ್ರ ಗದ್ದಲ, ತಳ್ಳಾಟ ನೂಕಾಟ ನಡೆಯಿತು.
ಪರಿಸ್ಥಿತಿ ಕೈಮೀರುವ ಹಂತ ತಲುಪಿದಾಗ ಕೆ.ಆರ್.ಪೇಟೆ ಪಟ್ಟಣ ಪೊಲೀಸರು ಸ್ಥಳಕ್ಕೆ ಧಾವಿಸಿದರು.ಎರಡೂ ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸುಮಾರು ಒಂದು ಗಂಟೆ ಕಾಲ ಬೋರಲಿಂಗೇಗೌಡ ವೃತ್ತ ಆವರಣದಲ್ಲಿ ಉದ್ವಿಗ್ನ, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸೂಕ್ತ ತನಿಖೆಗೆ ಅಗ್ರಹ
ಶಿಕ್ಷಣ ಇಲಾಖೆ ಕೂಡಲೇ ಮಧ್ಯಪ್ರವೇಶಿಸಿ ತನಿಖೆ ನಡೆಸಿ ತಪ್ಪಿತಸ್ಥ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು.ವಸೂಲಿ ಮಾಡಿದ ಹಣವನ್ನು ಪೋಷಕರಿಗೆ ಮರುಪಾವತಿಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.
ಕ ರ ವೇ ಸ್ವಾಭಿಮಾನಿ ಬಳಗದ ಮಂಡ್ಯ ಜಿಲ್ಲಾ ಅಧ್ಯಕ್ಷ ಕಾಂತರಾಜು, ಜಿಲ್ಲಾ ಉಸ್ತುವಾರಿ ಸಮೀರ್,ಕೆ.ಆರ್.ಎಸ್ ಪಕ್ಷದ ಶ್ರೀನಿವಾಸ್, ಜಯ ಕರ್ನಾಟಕ ಸಂಘದ ಯೂತ್ ಅಧ್ಯಕ್ಷ ಕಾಮನಹಳ್ಳಿ ಮಹೇಶ್,ಕಾರ್ಯಧ್ಯಕ್ಷ ಆನಂದ ಕುಮಾರ್ ವಿದ್ಯಾರ್ಥಿ ಘಟಕದ ಅಧ್ಯಕ್ಷರು ಶಿವು ಉಪಾಧ್ಯಕ್ಷ ಯುವರಾಜು.ನಗರ ಘಟಕದ ಅಧ್ಯಕ್ಷ ಅಕ್ಷಯ್. ಸಂಘಟನೆ ಕಾರ್ಯದರ್ಶಿ ಶಂಕರ್.ಯೋಗೇಶ್. ರಾಜು. ಉಮೇಶ್. ಮಹಿಳಾ ಅಧ್ಯಕ್ಷರು ಜಯಲಕ್ಸ್ಮಿ ಕಾರ್ಯಾಧ್ಯಕ್ಷೆ ಸರಸ್ವತಿ, ಯೂತ್ ಅಧ್ಯಕ್ಷರು ಭಾಗ್ಯಮ್ಮ ನಗರ ಘಟಕದ ಅಧ್ಯಕ್ಷ ಅನು, ರತ್ನಮ್ಮ, ದ್ರಾಕ್ಷಿಯಿಣಿ, ಗೌರಮ್ಮ, ಮಂಜಮ್ಮ,ರಾಜಮ್ಮ,ಸೇರಿದಂತೆ ಹಲವರು ಭಿಕ್ಷಾಟನೆ ಭಾಗವಹಿಸಿದರು.
 ಮನು ಮಾಕವಳ್ಳಿ ಕೆ.ಆರ್.ಪೇಟೆ

WhatsApp

Join Now

Telegram

Join Now

Instagram

Join Now