ವಿಜಯ ದರ್ಪಣ ನ್ಯೂಸ್….
ಇದ್ಲೂಡು ಸರ್ಕಾರಿ ಶಾಲೆಗೆ ಮಾಪಲ್ ಟ್ರೀ ಸಂಸ್ಥೆಯಿಂದ ಎರಡು ಹೈಟೆಕ್ ನೂತನ ಶಾಲಾ ಕೊಠಡಿಗಳ ಕೊಡುಗೆ

ಶಿಡ್ಲಘಟ್ಟ : ಮಾಪಲ್ ಟ್ರೀ ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್.) ಯೋಜನೆಯಡಿ ಶಾಲೆಗೆ ಎರಡು ಆಧುನಿಕ ಹಾಗೂ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿಕೊಟ್ಟಿದ್ದು, ಅವುಗಳನ್ನು ಶಾಲೆಯ ವಿದ್ಯಾರ್ಥಿಗಳ ಬಳಕೆಗೆ ಅಧಿಕೃತವಾಗಿ ಸಮರ್ಪಿಸಲಾಯಿತು.
ತಾಲ್ಲೂಕಿನ ಇದ್ಲುಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಮಾಪಲ್ ಟ್ರೀ ಸಂಸ್ಥೆಯ” ವತಿಯಿಂದ ನಿರ್ಮಿಸಲಾದ ಎರಡು ಸುಸಜ್ಜಿತ ಹೈಟೆಕ್ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭ ನಡೆಯಿತು.
ಈ ವೇಳೆ ಮಾಪಲ್ ಟ್ರೀ ಸಂಸ್ಥೆಯ ಸಂಯೋಜಕರಾದ ಶ್ರೀಗಂಧ್, ರಾಧಾಕೃಷ್ಣ ಭಾಸ್ಕರನ್, ಹರ್ಷವರ್ಧನ್ ದಿಲೀಪ್,ವಿಜಯ್ ಶಾಂತಾ, ಅಂಕುರ್, ಹಾಗೂ ರವಿಕುಮಾರ್ ಭಾಗವಹಿಸಿ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಿಇಒ ಕಛೇರಿಯ ಪ್ರಸನ್ನಕುಮಾರ್, ಇಸಿಒ ಮನ್ನಾರಸ್ವಾಮಿ, ಬಿ.ಆರ್.ಪಿ.ಮಂಜುನಾಥ್, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಬೈರೇಗೌಡ ಹಾಗೂ ಸದಸ್ಯರು, ಮುಖ್ಯಶಿಕ್ಷಕ ಕೆ.ಎನ್. ನಾಗರಾಜ್, ಶಿಕ್ಷಕಿ ವಿ.ರಮಾಮಣಿ, ಗ್ರಾಮದ ಮುಖಂಡ ಡಿ.ವಿ.ಮುನಿಶ್ಯಾಮಪ್ಪ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.










