ವಿಜಯ ದರ್ಪಣ ನ್ಯೂಸ್….
ಇತ್ತೀಚಿಗೆ ಬಿದ್ದ ಮಳೆಯಿಂದ
ಮನೆಗೋಡೆ ಕುಸಿತಕ್ಕೆ ಧರ್ಮಸ್ಥಳ ಸಂಸ್ಥೆಯಿಂದ ಸಹಾಯಧನ ವಿತರಣೆ

ತಾಂಡವಪುರ ಜುಲೈ 23 ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಲೂಕಿನ ಹೊಸೂರು ಗ್ರಾಮದ ಸಿದ್ದಮ್ಮರವರ ಮನೆಯ ಗೋಡೆ ಕಳೆದ ತಿಂಗಳು ಬಂದ ಮಳೆಯಲ್ಲಿ ಬಿದ್ದು ಹೋಗಿದ್ದು ಇವರಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳು ಮಂಜೂರು ಮಾಡಿದ 7500 ರೂಪಾಯಿ ಸಹಾಯಧನ ಮೊತ್ತವನ್ನು ನೀಡಲಾಗಿದ್ದುತಾಲೂಕಿನ ಯೋಜನಾಧಿಕಾರಿಗಳಾದ ಕೆಧರ್ಮರಾಜ್ ರವರು ಗ್ರಾಮಸ್ಥರ ಸಮ್ಮುಖದಲ್ಲಿ ವಿವರಿಸಿದರು
ಈ ಸಂಧರ್ಭದಲ್ಲಿ ಮಾತನಾಡಿದ ಅವರು
ಸಿದ್ದಮ್ಮ ರವರು ಸಲ್ಲಿಸಿದ ಮನವಿಯನ್ನು ಪೂಜ್ಯರು ಪರಿಶೀಲಿಸಿ ಸಹಾಯಧನ ಮಂಜೂರು ಮಾಡಿದ್ದಾರೆ
ಗ್ರಾಮಾಭಿವೃದ್ಧಿಯೋಜನೆ ಕೇವಲ ಸಂಘರಚನೆ ಮಾಡಿ ಅವುಗಳಿಗೆ ಬ್ಯಾಂಕ್ ಇಂದ ಸಾಲ ವಿತರಣೆ ಮಾಡಿಸುವುದು ಅಷ್ಟೇ ಅಲ್ಲದೆ ಹಲವು ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಸಂಸ್ಥೆಯ ಹೆಮ್ಮೆಯ ವಿಷಯವಾಗಿದೆ, ದೇವಸ್ಥಾನ ಅಭಿವೃದ್ಧಿಗೆ ಸಹಾಯಧನ ,ಹಾಲಿನ ಡೈರಿಗೆ ಸಹಾಯಧನ, ಹಿಂಧೂ ರುದ್ರಭೂಮಿಗೆ ಸಹಾಯಧನ, ಸುಜ್ಞಾನ ನಿಧಿ ಯಂತಹ ಇನ್ನು ಅನೇಕ ಕಾರ್ಯಕ್ರಮಗಳನ್ನು ಸಂಸ್ಥೆ ಮಾಡುತ್ತಿದೆ ಎಂದು ತಿಳಿಸಿದರು
ಈ ಸಂಧರ್ಭದಲ್ಲಿ ಊರಿನ ಮುಖಂಡರಾದ ,ಗಿರೀಶ್ ,ಚಂದ್ರು ,ಶಿವಲಿಂಗ ಸ್ವಾಮಿ ,ಸಂತ್ರಸ್ತೆ ಸಿದ್ದಮ್ಮ ,
ಮೇಲ್ವಿಚಾರಕರಾದ ಚಂದನ್, ಸಿ,ಸೇವಾ ಪ್ರತಿನಿಧಿ ಸೌಮ್ಯ
ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು











