--Ads--

ಬೆಳೆ ವಿಮೆ ಯೋಜನೆಯಡಿ ದ್ರಾಕ್ಷಿ, ಮಾವು ಹಾಗೂ ದಾಳಿಂಬೆ ಬೆಳೆಗಳಿಗೆ ತಾಲ್ಲೂಕಿನ ರೈತರು ಜುಲೈ 31ರೊಳಗೆ ನೋಂದಾಯಿಸಿ

On: July 25, 2026 7:32 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಬೆಳೆ ವಿಮೆ ಯೋಜನೆಯಡಿ ದ್ರಾಕ್ಷಿ, ಮಾವು ಹಾಗೂ ದಾಳಿಂಬೆ ಬೆಳೆಗಳಿಗೆ ತಾಲ್ಲೂಕಿನ ರೈತರು ಜುಲೈ 31ರೊಳಗೆ ನೋಂದಾಯಿಸಿ

ಶಿಡ್ಲಘಟ್ಟ : ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ದ್ರಾಕ್ಷಿ, ಮಾವು ಹಾಗೂ ದಾಳಿಂಬೆ ಬೆಳೆಗಳನ್ನು ಒಳಪಡಿಸಲಾಗಿದ್ದು, ತಾಲ್ಲೂಕಿನ ರೈತರು ಜುಲೈ 31ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್.ಮಂಜುನಾಥ್ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರೈತರು ಸಂಭವನೀಯ ಅನಾವೃಷ್ಟಿ, ಅತಿವೃಷ್ಟಿ ಸೇರಿದಂತೆ ಪ್ರಕೃತಿ ವಿಕೋಪಗಳಿಂದ ಉಂಟಾಗುವ ನಷ್ಟದಿಂದ ರಕ್ಷಿಸಿಕೊಳ್ಳಲು ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ದ್ರಾಕ್ಷಿ : ಪ್ರತಿ ಎಕರೆಗೆ ರೂ.1.12 ಲಕ್ಷ ವಿಮೆ ಮೊತ್ತ – ರೂ. 5,600 ಪ್ರೀಮಿಯಂ,ಮಾವು: ರೂ 32,000 ವಿಮೆ ಮೊತ್ತ – ರೂ.1,600 ಪ್ರೀಮಿಯಂ ,ದಾಳಿಂಬೆ: ರೂ.50,800 ವಿಮೆ ಮೊತ್ತ – ರೂ.2,540 ಪ್ರೀಮಿಯಂ ,ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿ, ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳು ಅಥವಾ ಯೋಜನೆ ಅನುಷ್ಠಾನಗೊಳಿಸುತ್ತಿರುವ ಟಾಟಾ ಎಐಜಿ ಜನರಲ್ ಇನ್ಸೂರೆನ್ಸ್ ಕಂಪನಿಯ ಟೋಲ್ ಫ್ರೀ ಸಂಖ್ಯೆ 1800 209 3536 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

WhatsApp

Join Now

Telegram

Join Now

Instagram

Join Now