--Ads--

ಶಿರಾ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಯರ ಆರಾಧನೆ

On: August 27, 2026 5:35 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶಿರಾ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಯರ ಆರಾಧನೆ

ಶಿರಾ : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ಆರ್.ಟಿ. ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ 28 ರಿಂದ 31ರ ವರೆಗೆ ಹಮ್ಮಿಕೊಂಡಿದೆ.

ಕಾರ್ಯಕ್ರಮಗಳು : ಆರಾಧನೆಯ ಎಲ್ಲಾ ದಿನಗಳಲ್ಲೂ ಬೆಳಗ್ಗೆ ಗುರುರಾಜರ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಭಜನಾ ಕಾರ್ಯಕ್ರಮ, ರಥೋತ್ಸವ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ; ಆಗಸ್ಟ್ 28-ಬಾಗಲಕೋಟೆಯ ವಿದ್ವಾನ್ ಶ್ರೀ ಅನಂತ ಕುಲಕರ್ಣಿ ಮತ್ತು ಸಂಗಡಿಗರಿಂದ “ದಾಸವಾಣಿ”, ಆಗಸ್ಟ್ 29- ವಿದುಷಿ ಶ್ರೀಮತಿ ರಮ್ಯಾ ಸುಧೀರ್ ಇವರಿಂದ “ದಾಸರ ಪದಗಳ ರಸಧಾರೆ”. ಕೀಬೋರ್ಡ್ : ಶ್ರೀ ಎಸ್. ಪ್ರವೀಣ್, ತಬಲಾ : ಶ್ರೀ ರವಿಕುಮಾರ್. ಆಗಸ್ಟ್ 30-ವಿದುಷಿ ಶ್ರೀಮತಿ ರಂಜಿತಾ ಪ್ರಸಾದ್ ಇವರಿಂದ “ಹರಿದಾಸ ಮಂಜರಿ”. ಕೀಬೋರ್ಡ್ ; ಶ್ರೀ ಪ್ರವೀಣ್, ತಬಲಾ : ಶ್ರೀ ರವಿಕುಮಾರ್. ಆಗಸ್ಟ್ 31-ಏಕನಾಥೇಶ್ವರಿ ಗಾನ ವಿದ್ಯಾಲಯದ ಸದಸ್ಯರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.

WhatsApp

Join Now

Telegram

Join Now

Instagram

Join Now