--Ads--

ಡೇಟಾ ಸೆಂಟರ್ ಭೂಸ್ವಾಧೀನಕ್ಕೆ ವಿರೋಧ

On: September 27, 2026 9:54 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

ಡೇಟಾ ಸೆಂಟರ್ ಭೂಸ್ವಾಧೀನಕ್ಕೆ ವಿರೋಧ

ದೊಡ್ಡಬಳ್ಳಾಪುರ, ಸೆ.27-ತಾಲ್ಲೂಕಿನ ದೊಡ್ಡಬೆಳವಂಗಲ ಸೇರಿದಂತೆ ಸುತ್ತಲಿನ ಐದು ಗ್ರಾಮಗಳ ವ್ಯಾಪ್ತಿಯಲ್ಲಿ ಡೇಟಾ ಸೆಂಟರ್ ಸ್ಥಾಪನೆಗಾಗಿ 2,100 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆ ಭೂಸ್ವಾಧೀನ ವಿರೋಧಿಸಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರಜಾ ಸೇವಾ ಆಂದೋಲನ ನಡೆಯುತ್ತಿದ್ದ ಸ್ಥಳಕ್ಕೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ರೈತರನ್ನು ಉಪವಿಭಾಗಾಧಿಕಾರಿ ಟಿ.ಆ‌ರ್.ಮಂಜುನಾಥ್ ಹಾಗೂ ತಹಶೀಲ್ದಾರ್ ಮಲ್ಲಪ್ಪ ಕೆ.ಯರಗೋಳ ಭೇಟಿ ಮಾಡಿ, ಭೂಸ್ವಾಧೀನದಿಂದ ಎದುರಾಗುವ ಸಮಸ್ಯೆಗಳ ಕುರಿತು ರೈತರ ಅಹವಾಲು ಆಲಿಸಿದರು.

ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಪ್ರಭಾ ಬೆಳವಂಗಲ, ಜನವಸತಿ ಪ್ರದೇಶ ಹಾಗೂ ಫಲವತ್ತಾದ ಕೃಷಿ ಭೂಮಿಯನ್ನು ಡೇಟಾ ಸೆಂಟರ್‌ಗಾಗಿ ಸ್ವಾಧೀನಪಡಿಸಿಕ ಗೊಳ್ಳುತ್ತಿರುವುದು ಅವೈಜ್ಞಾನಿಕ ಕ್ರಮ ಎಂದು ಆಕ್ಷೇಪಿಸಿದರು. ಡೇಟಾ ಸೆಂಟರ್‌ಗಳಿಂದ ಪರಿಸರ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಇಂತಹ ಘಟಕಗಳನ್ನು ಜನವಸತಿ ಪ್ರದೇಶಗಳಿಂದ ದೂರದಲ್ಲಿ ಸ್ಥಾಪಿಸಲಾಗುತ್ತಿದೆ. ಆದರೆ ಇಲ್ಲಿ ಜನವಸತಿ ಪ್ರದೇಶಗಳ ಜತೆಗೆ ನೀರಾವರಿ ಸೌಲಭ್ಯ ಹೊಂದಿರುವ ಫಲವತ್ತಾದ ಕೃಷಿ ಜಮೀನುಗಳನ್ನೇ ಸ್ವಾಧೀನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.

ಸಿ.ಎಚ್ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ
ರಾಮಕೃಷ್ಣ ಮಾತನಾಡಿ, ದೊಡ್ಡಬೆಳವಂಗಲ ಸಮೀಪ ಕ್ವಿನ್ ಸಿಟಿ ನಿರ್ಮಾಣಕ್ಕಾಗಿ ಉದ್ದೇಶಿಸಲಾಗಿರುವ 5,200 ಎಕರೆ ಜಮೀನಿನಲ್ಲಿ ಈಗಾಗಲೇ ಸುಮಾರು 3,200 ಎಕರೆ ಕೃಷಿ ಭೂ‌ಮಿ ಸ್ವಾಧೀನಪಡಿಸಿ ಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಡೇಟಾ ಸೆಂಟರ್‌ಗಾಗಿ ಮತ್ತಷ್ಟು 2,100 ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾಗಿರುವುದರಿಂದ ದೊಡ್ಡಬೆಳವಂಗಲ ಹೋಬಳಿಯ ರೈತರು ತಮ್ಮ ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಕಾನೂನು ಸಲಹೆಗಾರ ಕೇಶವಕುಮಾರ್, ಅಧ್ಯಕ್ಷ ಡಿ.ಸಿ.ಶಶಿಧರ್, ಕಾರ್ಯಾಧ್ಯಕ್ಷ ಎಸ್.ಸುನೀಲ್ ಕುಮಾರ್, ರೈತರು ಪಾಲ್ಗೊಂಡಿದ್ದರು.

 

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ