ವಿಜಯ ದರ್ಪಣ ನ್ಯೂಸ್…..
ಬೆಳಕಿನ ಕಾವಲುಗಾರರಿಗೆ ಒಂದು ಸಲಾಂ

ಮಳೆ ಸುರಿಯಲಿ
ಮಂಜು ಮುಸುಕಲಿ
ಬಿಸಿಲು ಸುಡಲಿ
ಬಿರುಗಾಳಿ ಬೀಸಲಿ
ಗುಡುಗು-ಸಿಡಿಲು ಅಬ್ಬರಿಸಲಿ
ಕೊಡಗಿನ ಬೆಟ್ಟ-ಕಣಿವೆಗಳ ನಡುವೆ
ಕತ್ತಲೆ ಆವರಿಸಿದಾಗ
ಜನರಿಗೆ ಬೆಳಕು ಬೇಕು ಎಂಬ ಒಂದೇ ಕರೆಯೊಂದಿಗೆ
ತಮ್ಮ ಜೀವದ ಹಂಗನ್ನೂ ಮರೆತು
ಕಂಬ ಏರುವವರು ನಮ್ಮ ಕೆಇಬಿ ಲೈನ್ಮನ್ಗಳು
ಎತ್ತರದ ವಿದ್ಯುತ್ ಕಂಬದ ತುದಿಯಲ್ಲಿ
ಒಂದು ಹೆಜ್ಜೆ ತಪ್ಪಿದರೂ ಅಪಾಯ
ಆದರೂ ಅವರ ಕೈಗಳು ನಡುಗುವುದಿಲ್ಲ
ಆ ಕೈಗಳಲ್ಲಿ ಕೇವಲ ತಂತಿಗಳಿಲ್ಲ
ಸಾವಿರಾರು ಮನೆಗಳ ಬೆಳಕಿನ ಹೊಣೆ ಇರುತ್ತದೆ
ಕತ್ತಲೆಯೊಂದಿಗೆ ಹೋರಾಡಿ
ಬೆಳಕನ್ನು ಹಂಚುವ ಕೈಗಳು
ತಂತಿಗಳನ್ನು ಮಾತ್ರ ಜೋಡಿಸುವುದಿಲ್ಲ
ಜನರ ಬದುಕನ್ನೇ ಜೋಡಿಸುತ್ತವೆ
ಕೊಡಗಿನ ಮಳೆ ಮಂಜು ಕಾಡು-ಗುಡ್ಡ
ರಾತ್ರಿ-ಹಗಲು ಯಾವುದನ್ನೂ ಲೆಕ್ಕಿಸದೆ
ತಮ್ಮ ಕರ್ತವ್ಯಕ್ಕೆ ಧಾವಿಸುವ
ಪ್ರತಿಯೊಬ್ಬ ಲೈನ್ಮನ್ನ ಶ್ರಮದ ಹಿಂದೆ
ಒಂದು ಕುಟುಂಬದ ಪ್ರಾರ್ಥನೆಯೂ ಇರುತ್ತದೆ
ಅವರ ಜೊತೆ ಕ್ಷೇತ್ರದಲ್ಲಿ ನಿಂತು
ಸಮಸ್ಯೆಯ ಮೂಲವನ್ನು ಅರಿತು
ಸಿಬ್ಬಂದಿಗೆ ಮಾರ್ಗದರ್ಶನ ನೀಡಿ
ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಿ
ಜನರ ಸಮಸ್ಯೆ ಪರಿಹಾರಕ್ಕೆ ಬೆನ್ನೆಲುಬಾಗಿ ನಿಲ್ಲುವ
ಅಭಿಯಂತರರು ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳ ಸೇವೆಯೂ
ಅಷ್ಟೇ ಗೌರವಕ್ಕೆ ಅರ್ಹ
ಒಬ್ಬ ಲೈನ್ಮನ್ ಕಂಬ ಏರುತ್ತಾನೆ
ಒಬ್ಬ ಅಧಿಕಾರಿ ದಿಕ್ಕು ತೋರಿಸುತ್ತಾರೆ
ಒಬ್ಬ ಸಿಬ್ಬಂದಿ ದುರಸ್ತಿ ಮಾಡುತ್ತಾರೆ
ಆದರೆ ಫಲವಾಗಿ
ಒಂದು ಊರು ಬೆಳಗುತ್ತದೆ
ಸಾವಿರಾರು ಮನೆಗಳು ಬೆಳಗುತ್ತವೆ
ಮಳೆ ಇರಲಿ ಬಿಸಿಲಿರಲಿ
ಅಪಾಯ ಇರಲಿ ಕಷ್ಟವಿರಲಿ
ಜನರ ಬದುಕಿಗೆ ಬೆಳಕು ನೀಡುವ
ಎಲ್ಲಾ ಲೈನ್ಮನ್ಗಳು ತಾಂತ್ರಿಕ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ
ನಮ್ಮ ಹೃದಯಪೂರ್ವಕ ಗೌರವ ಮತ್ತು ಅಭಿನಂದನೆಗಳು
ಭಗವಂತನು ಅವರ ಕೈಗಳಿಗೆ ಶಕ್ತಿ ನೀಡಲಿ
ಅವರ ಹೆಜ್ಜೆಗಳಿಗೆ ರಕ್ಷಣೆ ನೀಡಲಿ
ಅವರ ಕುಟುಂಬಗಳಿಗೆ ನೆಮ್ಮದಿ ನೀಡಲಿ
ಭುವನೇಶ್ವರಿಯ ಮಣ್ಣಿಗೆ ಬೆಳಕು ನೀಡುವ
ಈ ಬೆಳಕಿನ ಕಾವಲುಗಾರರಿಗೆ
ನಮ್ಮ ಹೃದಯದ ಸಲಾಂ
✍🏽 ಎಂ ಎಂ ದಾವೂದ್
ಕೊಡಗು ಜನ ಅಭಿವೃದ್ಧಿ ಸಮಿತಿ











