ವಿಜಯ ದರ್ಪಣ ನ್ಯೂಸ್…….
ಮಾಜಿ ಪ್ರಧಾನಿ ದೇವೇಗೌಡರ ತತ್ವ ಆದರ್ಶಗಳನ್ನು ನಂಬಿರುವವನು ನಾನು ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ : ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ಮಾಜಿ ಪ್ರಧಾನಿ ದೇವೇಗೌಡರ ತತ್ವ ಆದರ್ಶಗಳನ್ನು ನಂಬಿ ಕ್ಷೇತ್ರದ ಸ್ವಾಭಿಮಾನಿ ಮತದಾರರ ಹಾಗೂ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಉಳಿವಿಗಾಗಿ ರಾಜಕೀಯಕ್ಕೆ ಬಂದವನು ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಿ.ಎನ್.ರವಿಕುಮಾರ್ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಗಂಜಿಗುಂಟೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತಾವು ಶಾಸಕರಾಗಿ ಆಯ್ಕೆಯಾದಾಗಿನಿಂದ ಕಾಂಗ್ರೆಸ್ ಗೆ ಬರುವಂತೆ ತಮಗೆ ನಿರಂತರ ಆಹ್ವಾನವಿದೆ ಆದರೂ ಯಾವುದೇ ಕಾರಣಕ್ಕೂ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲ್ಲ ಎಂದು ಹೇಳಿದರು.
ತಾವು ರಾಜಕೀಯಕ್ಕೆ ಬಂದಿದ್ದು ಆಸ್ತಿ, ಅಧಿಕಾರ ಗಳಿಸುವುದಕ್ಕೋ ಅಥವಾ ನನ್ನ ಸ್ವಂತಕ್ಕೆ ಏನಾದರೂ ಮಾಡಿಕೊಳ್ಳಲಿಕ್ಕೋ ಅಲ್ಲ ಎಂದರು.
ಕಾಂಗ್ರೆಸ್ ತಮ್ಮನ್ನು ಪಕ್ಷಕ್ಕೆ ಬರುವಂತೆ ಆಹ್ವಾನಿಸುತ್ತಿರುವುದು ಸತ್ಯ ಆದರೆ ನಾನು ಯಾವುದೇ ಆಮಿಷ ಒಡ್ಡಿಲ್ಲ, ಬದಲಿಗೆ ಪಕ್ಷಕ್ಕೆ ಬಂದರೆ ‘ಬಿ ಫಾರ್ಮ್’ ನೀಡುವುದು ಸೇರಿ ಸಾಕಷ್ಟು ಅನುದಾನ ನೀಡುವ ಭರವಸೆ ನೀಡಿದ್ದರು.
ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳ ಮತದಾರರು ಕಾಂಗ್ರೆಸ್ ಅನ್ನು ಧಿಕ್ಕರಿಸಿ ಎನ್ಡಿಎ ಪರ ನೀಡಿರುವ ತೀರ್ಪಿನ ಮೂಲಕ ರಾಜಕೀಯ ಸಂದೇಶ ನೀಡಿದ್ದಾರೆ ,ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಬರುವುದು ಶತಃಸಿದ್ಧ ಎಂದರು.
ಕಳೆದ 2023ರ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೂ, ಇದೀಗ ಪ್ರಾದೇಶಿಕ ಪಕ್ಷಗಳ ಶಾಸಕರನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿದೆ ಆದರೆ ಇತ್ತೀಚೆಗೆ ನಡೆದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆ ಫಲಿತಾಂಶ ಗಮನಿಸಿದರೆ ಜನರ ಒಲವು ಯಾವ ಕಡೆಗಿದೆ ಎಂಬುದು ತಿಳಿಯುತ್ತದೆ ಎಂದರು.










