--Ads--

ಡಿಸಿಸಿ ಬ್ಯಾಂಕ್ ಸುಸ್ತಿಯಾಗಿದೆ , ದಿವಾಳಿಯಾಗಿಲ್ಲ  ಹಣಕಾಸಿನ ವ್ಯವಹಾರ ಡಿಸಿಸಿ ಬ್ಯಾಂಕ್ ಮೂಲಕವೇ ನಡೆಸಿ : ಕೊತ್ತೂರು ಮಂಜುನಾಥ್

On: November 19, 2026 4:37 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಡಿಸಿಸಿ ಬ್ಯಾಂಕ್ ಸುಸ್ತಿಯಾಗಿದೆ , ದಿವಾಳಿಯಾಗಿಲ್ಲ , ಹಣಕಾಸಿನ ವ್ಯವಹಾರ ಡಿಸಿಸಿ ಬ್ಯಾಂಕ್ ಮೂಲಕವೇ ನಡೆಸಿ :  ಕೊತ್ತೂರು ಮಂಜುನಾಥ್

ಶಿಡ್ಲಘಟ್ಟ : ನಮ್ಮ ಬ್ಯಾಂಕ್ ರೈತರು ಮತ್ತು ಮಹಿಳೆಯರ ಪರವಾಗಿದ್ದು, ರೈತರು, ಮಹಿಳೆಯರು ಹಾಗೂ ಸಾರ್ವಜನಿಕರು ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಡಿಸಿಸಿ ಬ್ಯಾಂಕ್ ಮೂಲಕವೇ ನಡೆಸಬೇಕು ಎಂದು ಡಿಸಿಸಿ
ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಮನವಿ ಮಾಡಿದರು.

ನಗರದ ಡಿಸಿಸಿ ಬ್ಯಾಂಕ್ ನಲ್ಲಿ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಹಕರ ಸಭೆಯಲ್ಲಿ ಬಾಗವಹಿಸಿ ಅವರು ಮಾತನಾಡಿದರು.

ಹೊಸ ಆಡಳಿತ ಮಂಡಳಿ ರಚನೆಯಾಗಿದ್ದು, ಬ್ಯಾಂಕಿನ ಸಮಸ್ಯೆಗಳನ್ನು ಸರಿಪಡಿಸಿ ಎಲ್ಲ ಹಣಕಾಸಿನ ಚಟುವಟಿಕೆಗಳನ್ನು ಮತ್ತೆ ಸಕ್ರಿಯಗೊಳಿಸಲಾಗುವುದು ಎಂದು ತಿಳಿಸಿದರು.

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಸುಸ್ತಿಯಾಗಿರುವುದು ನಿಜ, ಆದರೆ ದಿವಾಳಿಯಾಗಿಲ್ಲ ಎಂದು ಹೇಳಿದರು.
ರೈತರಿಗೆ ಕೃಷಿ ಸಾಲ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ನೀಡಲು ಬ್ಯಾಂಕ್ ಸಿದ್ಧವಿದ್ದು, ಗ್ರಾಹಕರು ವಿಶ್ವಾಸವಿಟ್ಟು ಖಾತೆ ತೆರೆಯಬೇಕು
ಎಂದರು.

ಇತರ ಬ್ಯಾಂಕುಗಳು ಠೇವಣಿಗೆ ನೀಡುವ ಬಡ್ಡಿದರವನ್ನೇ ಡಿಸಿಸಿ ಬ್ಯಾಂಕ್ ಕೂಡ ನೀಡಲಿದೆ ಇದನ್ನು ಗ್ರಾಹಕರಿಗೆ ಮನವರಿಕೆ ಮಾಡಿ ಹೆಚ್ಚು ಠೇವಣಿ ಸಂಗ್ರಹಿಸಲು ನಿರ್ದೇಶಕರು ಮತ್ತು ಸಿಬ್ಬಂದಿ ಶ್ರಮಿಸಬೇಕು ಎಂದರು.

ಕೃಷಿ ಚಟುವಟಿಕೆಗಳಿಗೆ ರೈತರಿಗೆ 5 ಲಕ್ಷ ರೂ.ಗಳವರೆಗೆ ಸಾಲ ನೀಡಲಾಗುವುದು ಪ್ರತಿ ಸಹಕಾರ ಬ್ಯಾಂಕ್ ವ್ಯಾಪ್ತಿಯಲ್ಲಿ ಐದು ಉತ್ತಮ ಮಹಿಳಾ ಸ್ವಸಹಾಯ ಸಂಘಗಳನ್ನು ಗುರುತಿಸಿ, ಸಾಲಕ್ಕೆ ಬೇಕಾದ ಕಡತಗಳನ್ನು ಸಿದ್ಧಪಡಿಸಿಕೊಟ್ಟರೆ ಸಾಲ ಮಂಜೂರು ಮಾಡಲಾಗುವುದು ಎಂದು ಹೇಳಿದರು.

ಆರ್‌ಬಿಐ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಒಂದು ತಿಂಗಳೊಳಗೆ ಗ್ರಾಹಕರಿಗೆ ಪೋನ್‌ ಪೇ ಮತ್ತು ಆರ್‌ಟಿಜಿಎಸ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.

ಪಕ್ಷಭೇದವಿಲ್ಲದೆ ಎಲ್ಲಾ ಅರ್ಹರಿಗೂ ಅಗತ್ಯಕ್ಕೆ ತಕ್ಕಂತೆ ಸಾಲ ನೀಡಲಾಗುವುದು ಎಂದ ಅವರು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಲು ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ನಾಗರಾಜ್ ಮಾತನಾಡಿ, ತಾಲ್ಲೂಕಿನಲ್ಲಿ ರೇಷ್ಮೆ ಕೃಷಿಕರು, ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಮಹಿಳೆಯರು ಹಾಗು ರೇಷ್ಮೆ ನೂಲು ಬಿಚ್ಚಾಣಿಕೆದಾರರು, ಹೆಚ್ಚಿನ ಸಂಖ್ಯೆಯಲ್ಲಿದ್ದು,
ಅವರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ರೈತ ಸಂಘಗಳಿಂದ ಡಿಸಿಸಿ ಬ್ಯಾಂಕ್ ಅದ್ಯಕ್ಷರಿಗೆ ಮನವಿ

ರೈತ ಸಂಘದ ಪದಾಧಿಕಾರಿಗಳು ಕೊತ್ತೂರು ಮಂಜುನಾಥ್ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು ,

ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಇದ್ದು, ಸರ್ಕಾರ ಬರ ಘೋಷಿಸಿದೆ ,ರೈತರಿಂದ ಸಾಲ ವಸೂಲಿ ಮಾಡಬಾರದೆಂಬ ಆದೇಶವಿದ್ದರೂ ಡಿಸಿಸಿ ಬ್ಯಾಂಕಿನ ಕೆಲವು ಶಾಖೆಗಳಲ್ಲಿ ಮರುಪಾವತಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಅವರು ದೂರಿದರು.

ಸಾಲ ನವೀಕರಣದ ವೇಳೆ ಕೆಲವು ಶಾಖೆಗಳ ವ್ಯವಸ್ಥಾಪಕರು 2 ಸಾವಿರ ರೂ.ಗಳಿಂಸ 3 ಸಾವಿರ ರೂ.ಗಳ ವರೆಗೆ ಹಣ ಪಡೆಯುತ್ತಿದ್ದಾರೆ ಎಂದೂ ಆರೋಪಿಸಿದರು.

ರೈತರ ಮನವಿಗೆ ಪ್ರತಿಕ್ರಿಯಿಸಿದ ಬ್ಯಾಂಕ್ ಅದ್ಯಕ್ಷ ಕೊತ್ತೂರು ಮಂಜುನಾಥ್, ರೈತರಿಂದ ಸಾಲ ವಸೂಲಿ ಮಾಡದಂತೆ ಈಗಾಗಲೇ ಸೂಚಿಸಲಾಗಿದೆ ,ಯಾರಾದರೂ ನೋಟಿಸ್ ನೀಡಿದ್ದರೆ ತಮ್ಮ ಗಮನಕ್ಕೆ ತರಬೇಕು, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾಲ ನವೀಕರಣದ ವೇಳೆ ಹಣ ಪಡೆಯಲು ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ, ರೈತರೂ ಇಂತಹ ಹಣ ನೀಡಬಾರದು, ಹಣ ಪಡೆದಿರುವುದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ನಿರ್ದೇಶಕರಾದ ಮೋಹನ್‌ ರೆಡ್ಡಿ, ಹನುಮೇಗೌಡ, ಮಂಜುನಾಥ್, ಪ್ರಭಾಕರ್,ಡಿಸಿಸಿ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಆನಂದ್ ಹಾಗೂ ತಾಲ್ಲೂಕಿನ ಎಲ್ಲ ಸಹಕಾರ ಸಂಘಗಳ ಅದ್ಯಕ್ಷರುಗಳು ಹಾಗು ಸಿಇಒಗಳು ಹಾಜರಿದ್ದರು.

WhatsApp

Join Now

Telegram

Join Now

Instagram

Join Now