ನಾಟ್ಯಲೀಲ ಟ್ರಸ್ಟ್ ವತಿಯಿಂದ “ಮಾತೃ ವಂದನ” ನೃತ್ಯ ಪ್ರದರ್ಶನ
ವಿಜಯ ದರ್ಪಣ ನ್ಯೂಸ್…..
ನಾಟ್ಯಲೀಲ ಟ್ರಸ್ಟ್ ವತಿಯಿಂದ “ಮಾತೃ ವಂದನ” ನೃತ್ಯ ಪ್ರದರ್ಶನ
ಶಿಡ್ಲಘಟ್ಟ : ವಿಶ್ವ ಅಮ್ಮಂದಿರ ದಿನದ ಅಂಗವಾಗಿ ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ನಾಟ್ಯಲೀಲ ಟ್ರಸ್ಟ್ ವತಿಯಿಂದ ಆಯೋಜಿಸಲಾದ “ಮಾತೃ ವಂದನ” ನೃತ್ಯ ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ನಗರದ S.R.ಡ್ಯಾನ್ಸ್ ಅಕಾಡೆಮಿಯ ನೃತ್ಯಪಟುಗಳು ಗಮನ ಸೆಳೆದಿದ್ದಾರೆ.
ಈ ವಿಶೇಷ ನೃತ್ಯೋತ್ಸವವು “ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ಸ್ಥಾನ ಪಡೆಯುವ ಗೌರವವನ್ನು ಸಂಪಾದಿಸಿದೆ. ಅಮ್ಮಂದಿರಿಗೆ ನೃತ್ಯದ ಮೂಲಕ ನಮನ ಸಲ್ಲಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಯ್ದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭರತನಾಟ್ಯದಲ್ಲಿ ಭಾಗವಹಿಸಿದ್ದರು. ಸಮೂಹವಾಗಿ ನಿರಂತರವಾಗಿ 7 ನಿಮಿಷಗಳ ಕಾಲ ಭರತನಾಟ್ಯ ಪ್ರದರ್ಶನವು ನಡೆದಿದ್ದು, ಇದು ರಾಜ್ಯ ಮಟ್ಟದ ದಾಖಲೆ ಆಗಿದೆ.
ಎಸ್. ಆರ್.ಡ್ಯಾನ್ಸ್ ಅಕಾಡೆಮಿ ಶಿಕ್ಷಕಿ ಎಸ್.ಎಂ.ಶಿಲ್ಪಾ ಮಾತನಾಡಿ ನಾಟ್ಯಲೀಲ ಟ್ರಸ್ಟ್ ದೇಶದ ನಾನಾ ರಾಜ್ಯಗಳಿಂದ ಆಯ್ದ ಡ್ಯಾನ್ಸ್ ಅಕಾಡೆಮಿಯ 500 ನೃತ್ಯ ಪಟುಗಳಿಗಷ್ಟೆ ಆಹ್ವಾನ ನೀಡಿ ಮಾತೃ ವಂದನಾ ಸಾಮೂಹಿಕ ನೃತ್ಯ ಕಾರ್ಯಕ್ರಮವನ್ನು ಅಮ್ಮಂದಿರಿಗೆ ಅರ್ಪಿಸುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿತ್ತು ಅದರಲ್ಲಿ ನಮ್ಮ ನಾಟ್ಯ ಶಾಲೆಯ ಮಕ್ಕಳಿಗೆ ಅವಕಾಶ ಸಿಕ್ಕಿದ್ದು ಪುಣ್ಯ ಹಾಗು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದ್ದು ಸಂತಸದ ವಿಷಯ
ಎಂದರು.
S R.ಡ್ಯಾನ್ಸ್ ಅಕಾಡೆಮಿಯ ನೃತ್ಯಗುರು ಎಸ್.ಎಂ.ಶಿಲ್ಪಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರಾದ ರಶ್ಮಿಕ,ನೇಹ ನಳಿನ,ಬಿಂಬನ, ಕಾವ್ಯ,ಯಶ್ಚಿತ ಶುಜನ್ಯ,ರಾದಿಕಾ, ಹೇಮಲತಾ, ಹಾಗೂ ಬೃಂಧ ನೃತ್ಯವನ್ನು ಪ್ರದರ್ಶಿಸಿದರು.
ಅವರ ಈ ಸಾಧನೆಗೆ ಕಾರ್ಯಕ್ರಮ ಆಯೋಜಕರು ಹಾಗೂ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ತಂಡದಿಂದ ವಿಶೇಷ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು.