ಶಿಡ್ಲಘಟ್ಟ ನಗರಸಭೆಗೆ ನೂತನ ಪೌರಾಯುಕ್ತೆಯಾಗಿ ಜಿ.ಅಮೃತ ನೇಮಕ
ವಿಜಯ ದರ್ಪಣ ನ್ಯೂಸ್…..
ಶಿಡ್ಲಘಟ್ಟ ನಗರಸಭೆಗೆ ನೂತನ ಪೌರಾಯುಕ್ತೆಯಾಗಿ ಜಿ.ಅಮೃತ ನೇಮಕ
ಶಿಡ್ಲಘಟ್ಟ : ನಗರಸಭೆಗೆ ನೂತನ ಪೌರಾಯುಕ್ತೆಯಾಗಿ ಜಿ.ಅಮೃತ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ಪ್ರಭಾರಿ ನಗರಸಭೆ ಪೌರಾಯುಕ್ತರಾದ ಮೋಹನ್ ಕುಮಾರ್ ಅವರ ಸ್ಥಾನಕ್ಕೆ ಸರ್ಕಾರವು ಇವರನ್ನು ನಿಯೋಜಿಸಿದೆ.
ನಗರಸಭೆ ಪೌರಾಯುಕ್ತೆಯಾಗಿ ಜಿ.ಅಮೃತ ಅಧಿಕಾರ ಸ್ವೀಕರಿಸಿ ಮಾತನಾಡಿ ನಗರದ ಅಭಿವೃದ್ಧಿ ಚಟುವಟಿಕೆಗಳು ,ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಪೌರಸೇವೆಗಳ ಸುಧಾರಣೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಾಗು ನಗರ ಸ್ವಚ್ಛತೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.
###################################
ಅಶ್ವತ್ಥಕಟ್ಟೆ ನಿರ್ಮಾಣಕ್ಕೆ ಭೂಮಿ ಪೂಜೆ
ಶಿಡ್ಲಘಟ್ಟ : ನಗರದ ಇತಿಹಾಸ ಪ್ರಸಿದ್ಧ ಪುರಾತನ ಹಾಗೂ ನಗರ ನಿರ್ಮಾತೃ ಶ್ರೀಶಿವನೇಗೌಡ ರಿಂದ ಸ್ಥಾಪಿಸಿದ ಕೋಟೆ
ಶ್ರೀಸೋಮೇಶ್ವರ ದೇವಾಲಯದ ಆವರಣದಲ್ಲಿ
ಅಶ್ವತ್ಥ ಕಟ್ಟೆಯ ನಿರ್ಮಾಣಕ್ಕೆ ನಗರದ ಹಿರಿಯರಾದ ಟೆನನ್ಸಿ ನಾರಾಯಣಸ್ವಾಮಿ ದಂಪತಿಗಳು ಅರಳಿಮರ ಮತ್ತು ಬೇವಿನ ಮರದ ಸಸಿಗಳನ್ನು ಧಾರ್ಮಿಕವಿಧಿ ವಿಧಾನಗಳಂತೆ ಭೂಮಿ ಪೂಜೆ ಸಲ್ಲಿಸಿ ಸಸಿಗಳನ್ನು ನೆಟ್ಟರು. ವೇದ ಪುರೋಹಿತ ಬಶೆಟ್ಟಿಹಳ್ಳಿ ಕೃಷ್ಣಮೂರ್ತಿ ಪೌರೋಹಿತ್ಯ ದಲ್ಲಿ ಪೂಜಾ ಕಾರ್ಯಗಳು ನಡೆದವು.
ಶ್ರೀಸೋಮೇಶ್ವರ ದೇವಾಲಯದ ಸಮಿತಿಯ ಅದ್ಯಕ್ಷ ಡಾಲ್ಫಿನ್ ನಾಗರಾಜ್ ನೇತೃತ್ವದಲ್ಲಿ ದೇವತಾ ಕಾರ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಧರ್ಮದರ್ಶಿಗಳಾದ ಪಿ.ಮುರಳಿ,ರೂಪಸಿ ರಮೇಶ್,ಹಿರಿಯರಾದ ಜಾತವಾರ ವೆಂಕಟಸ್ವಾಮಿ,ಡಿಶ್ ಶ್ರೀನಾಥ್ ಮತ್ತಿತರರು ಪಾಲ್ಗೊಂಡಿದ್ದರು
@@@@@@@@@@@@####@@@@@@
ರೈತರು ಬೆಳೆದ ಜಂಬುನೇರಳೆ ಹಣ್ಣು ಲಂಡನ್ ಗೆ ರವಾನೆ
ಶಿಡ್ಲಘಟ್ಟ : ತಾಲ್ಲೂಕಿನ ರೈತರು ಬೆಳೆದ ಜಂಬುನೇರಳೆ ಹಣ್ಣು ಮೊಟ್ಟಮೊದಲ ಬಾರಿಗೆ ವಿದೇಶಕ್ಕೆ ರವಾನೆಯಾಗಿದೆ ಈ ಮೂಲಕ ಕೆ.ಎನ್.ಮಾರೇಶ್ ಮುಂದಿನ ದಿನಗಳಲ್ಲಿ ಜಂಬುನೇರಳೆ ಹಣ್ಣಿಗೆ ಬೇಡಿಕೆ ಮತ್ತು ಬೆಲೆ ಸಿಗುವ ಆಶಾಭಾವನೆ ರೈತರಲ್ಲಿ ಮೂಡಿದೆ.
ತಾಲ್ಲೂಕಿನ ಕನ್ನಮಂಗಲದ ರೈತ ಕೆ.ಎನ್.ಮಾರೇಶ್ ಬೆಳೆದ ಒಂದು ಟನ್ ಜಂಬುನೇರಳೆ ಹಣ್ಣು ಈ ಬಾರಿ ಲಂಡನ್ನಿಗೆ ರಫ್ತು ಆಗಿದೆ.
ಎರಡೂವರೆ ಎಕರೆ ತೋಟದಲ್ಲಿ ನೂರು ಜಂಬುನೇರಳೆ ಮರಗಳಿವೆ ಎಂಟು ವರ್ಷಗಳಿಂದ ಫಸಲು ಕೊಡುತ್ತಿವೆ ಹಣ್ಣು ಬಿಟ್ಟಾಗ ಮಾರುಕಟ್ಟೆಗೆ ಕೊಂಡೊಯ್ದು ಮಾರುತ್ತಿದ್ದೆವು ಕೆಲವು ಸಲ ಹೆಚ್ಚು ಹಣ್ಣುಗಳು ಆವಕವಾದಾಗ, ಖರೀದಿಸುವವರಿಲ್ಲದೆ ಬಿಸಾಕುತ್ತಿದ್ದೆವು ಈಗ ಮ್ಯಾಂಗೊ ಬೋರ್ಡ್ ವ್ಯವಸ್ಥಾಪಕ
ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಜಂಬುನೇರಳೆ ಹಣ್ಣಿಗೆ ವಿದೇಶಕ್ಕೆ ರಫ್ತಾಗುವ ಅವಕಾಶ ಲಭಿಸಿದೆ ಎಂದು ರೈತ ಕೆ.ಎನ್.ಮಾರೇಶ್ ವಿವರಿಸಿದರು.