ಹಿಂದು ಸಮಾಜೋತ್ಸವಕ್ಕೆ ಹಿಂದು ಬಂಧುಗಳು ಭಾಗವಹಿಸಿ : ಎಸ್.ಪ್ರಕಾಶ್ ಕರೆ
ವಿಜಯ ದರ್ಪಣ ನ್ಯೂಸ್….
ಹಿಂದು ಸಮಾಜೋತ್ಸವಕ್ಕೆ ಹಿಂದು ಬಂಧುಗಳು ಭಾಗವಹಿಸಿ : ಎಸ್.ಪ್ರಕಾಶ್ ಕರೆ

ಶಿಡ್ಲಘಟ್ಟ : ಫೆ-1ರಂದು ಭಾನುವಾರ ಶಿಡ್ಲಘಟ್ಟ ನಗರದಲ್ಲಿ ಹಿಂದು ಸಮಾಜೋತ್ಸವ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದು ಬಂಧುಗಳು ಭಾಗವಹಿಸಿ ಎಂದು ಹಿಂದು ಸಮಾಜೋತ್ಸವ ಆಯೋಜನ ಸಮಿತಿ ಅಧ್ಯಕ್ಷ ಎಸ್.ಪ್ರಕಾಶ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಹಿಂದು ಸಮಾಜೋತ್ಸವ ನಡೆಯುವ ಹಿನ್ನಲೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ ಮತ್ತು ಕರ ಪತ್ರ ಹಂಚಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ನಮ್ಮದು ಸನಾತನ ಧರ್ಮ ,ಸಾಮರಸ್ಯ, ಸಹೋದರತ್ವದ ಭಾತೃತ್ವವನ್ನು ಸಾರುವ ವಿಶಾಲ ಭಾವನೆಯ ನಮ್ಮ ಧರ್ಮವನ್ನು ನಾವು ಉಳಿಸಿಕೊಳ್ಳಬೇಕು,ನಮ್ಮ ಧರ್ಮದ ಆಚಾರ ವಿಚಾರಗಳನ್ನು ನಮ್ಮ ಮುಂದಿನ ಪೀಳಿಗೆಗೂ ಮುಂದುವರೆಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದರು.
ಭಾನುವಾರ ಬೆಳಗ್ಗೆ ಹಿಂದು ಸಮಾಜೋತ್ಸವ ನಡೆಯಲಿದ್ದು ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು ಮದ್ಯಾಹ್ನ 2 ಗಂಟೆಗೆ ಕೋಟೆ ವೃತ್ತದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹಿಂದು ಬಂಧುಗಳು ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಹಿಂದು ಸಮಾಜೋತ್ಸವ ಆಯೋಜನ ಸಮಿತಿಯ ಸೀಕಲ್ ಆನಂದಗೌಡ, ಪಿ.ವಿ.ಶ್ರೀನಿವಾಸ್, ಚಲುವರಾಜ್, ಪುರುಷೋತ್ತಮ್, ಮಣಿ ಇನ್ನಿತರರು ಹಾಜರಿದ್ದರು.
ರಾಜೀವ್ ಗೌಡನಿಗೆ ಜಾಮೀನು ಮಂಜೂರು

ಶಿಡ್ಲಘಟ್ಟ : ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರಿಗೆ ಬ್ಯಾನರ್ ತೆರವುಗೊಳಿಸಿದ ವಿಚಾರವಾಗಿ ಮೊಬೈಲ್ ಕರೆ ಮಾಡಿ ಧಮ್ಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀವ್‍ಗೌಡ ಅವರಿಗೆ ಜೆಎಂಎಫ್‍ಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಕಳೆದ ಮೂರು ದಿನಗಳಿಂದಲೂ ನ್ಯಾಯಾಂಗ ಬಂಧನ ಮತ್ತು ಪೊಲೀಸ್ ಕಸ್ಟಡಿಯಲ್ಲಿದ್ದ ರಾಜೀವ್‍ಗೌಡ ಅವರಿಗೆ ಬಿಡುಗಡೆ ಭಾಗ್ಯ ದೊರೆತಿದ್ದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ ಆದರೆ ಸಂಭ್ರಮಾಚರಣೆ ಮಾಡದಂತೆ ನ್ಯಾಯಾಲಯ ಷರತ್ತು ವಿಧಿಸಿದೆ ,ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ಅವರು 15 ಸಾವಿರ ರೂಪಾಯಿಯ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಿದ್ದಾರೆ.
ಜ-14ರಂದು ರಾಜೀವ್‍ಗೌಡ ಅವರ ಮೇಲೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಖ್ಯಾತ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರು ರಾಜೀವ್‍ಗೌಡ ಅವರ ಪರ ವಾದ
ಮಂಡಿಸಿದ್ದರು.
