--Ads--

ನನ್ನ ತಪ್ಪಿನ ಅರಿವಾಗಿ ಸಾರ್ವಜನಿಕ ಕ್ಷಮೆ ಕೇಳಿದ್ದೇನೆ: ರಾಜೀವ್‌ ಗೌಡ 

On: February 10, 2026 9:55 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ನನ್ನ ತಪ್ಪಿನ ಅರಿವಾಗಿ ಸಾರ್ವಜನಿಕ ಕ್ಷಮೆ ಕೇಳಿದ್ದೇನೆ: ರಾಜೀವ್‌ ಗೌಡ

 

ಶಿಡ್ಲಘಟ್ಟ : ನನ್ನ ಉಸಿರು ಇರುವ ತನಕ ನಿಮ್ಮೊಂದಿಗೆ ಇಡೀ ನನ್ನ ಕುಟುಂಬ ಇರಲಿದೆ ನೀವು ನನ್ನೊಂದಿಗೆ ಇರುವ ತನಕ ನನ್ನ ವಿರುದ್ಧ ನೂರಲ್ಲ ಸಾವಿರ ಷಡ್ಯಂತ್ರಗಳು ನಡೆದರೂ ಎದುರುವವನಲ್ಲ,ನಾನು ಇನ್ನೊಬ್ಬರ ಮನಸ್ಸಿಗೆ ಘಾಸಿ ಆಗುವಂತೆ ಮಾತನಾಡಿದೆ ಆ ನಂತರ ನನ್ನ ತಪ್ಪಿನ ಅರಿವಾಗಿ ನಾನು ನನ್ನ ತಪ್ಪಿಗೆ ಸಾರ್ವಜನಿಕ ಕ್ಷಮೆ ಕೇಳಿದ್ದೇನೆ ಎಂದು ಎಬಿಡಿ ಟ್ರಸ್ಟ್ ಅಧ್ಯಕ್ಷ ರಾಜೀವ್‌ ಗೌಡ ತಿಳಿಸಿದರು.

ನಗರದ ಎಬಿಡಿ ಟ್ರಸ್ಟ್ ಕಚೇರಿ ಆವರಣದಲ್ಲಿ ನಡೆದ ತಮ್ಮ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಬಾವುಟ ಕಿತ್ತು ಹಾಕಿದರು ಎಂಬ ಕಾರಣಕ್ಕೆ ನಾನು ಕೋಪಗೊಂಡಿದ್ದು ನಿಜ ,ನನಗೆ ಎಂತಹ ಕಷ್ಟಗಳು ಎದುರಾದರೂ ಅವೆಲ್ಲವನ್ನೂ ಮೆಟ್ಟಿ ನಿಲ್ಲುತ್ತೇನೆ ಕಾಂಗ್ರೆಸ್ ಪಕ್ಷವೇ ನನ್ನ ಉಸಿರು,ನನ್ನ ಉಸಿರು ಇರುವ ತನಕ ನಿಮ್ಮೊಂದಿಗೆ ಇಡೀ ನನ್ನ ಕುಟುಂಬ ಇರಲಿದೆ ಎಂದು ಹೇಳಿದರು.

ನನ್ನ ತಾಯಿ, ಹೆಂಡತಿ, ನನ್ನ ಮಗಳು ಸಹ ಮಹಿಳೆಯರು ನಾನು ನನ್ನ ಜೀವನದಲ್ಲಿ ಯಾವ ಹೆಣ್ಣಿಗೂ ಅಪಮಾನ ಮಾಡಿಲ್ಲ, ಮಾಡುವ ಜಾಯಮಾನವೂ ನನ್ನದಲ್ಲ ಆದರೆ ಆಕಸ್ಮಿಕವಾಗಿ ಘಟನೆ ನಡೆದು ಹೋಯ್ತು. ಕೆಲವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಇನ್ನಿಲ್ಲದ ರಾದ್ಧಾಂತ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಹಲವು ಕಾಂಗ್ರೆಸ್ ಮುಖಂಡರು ಮಾತನಾಡಿ, ಪಕ್ಷ ಮತ್ತು ಪಕ್ಷದ ಭಾವುಟ ವಿಚಾರ ವಾಗಿ ರಾಜೀವ್‌ ಗೌಡರು ಕಷ್ಟಕ್ಕೆ ಸಿಲುಕಿದರು, ನಾವು ಅವರ ಕೈ ಬಿಡಬಾರದು ಮುಂದಿನ 2028ರ ಅಸೆಂಬ್ಲಿ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ರಾಜೀವ್‌ ಗೌಡರ ವಿರುದ್ಧ ಷಡ್ಯಂತ್ರ ರೂಪಿಸಿದವರಿಗೆ ತಕ್ಕ ಪಾಠ ಕಲಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಲ್ಟ್ ಸಿನಿಮಾದ ಪ್ಲೆಕ್ಸ್ ಕಿತ್ತು ಹಾಕಿದ ಕಾರಣಕ್ಕೆ ನಗರಸಭೆ ಪೌರಾಯುಕ್ತ ಜಿ.ಅಮೃತ ಅವರಿಗೆ ಧಮ್ಮಿಹಾಕಿದ ಪ್ರಕರಣದ ನಂತರ ರಾಜೀವ್‌ ಗೌಡ ಅವರು ಕ್ಷೇತ್ರದಲ್ಲಿ ಟೆಂಪಲ್ ರನ್ ನಡೆಸಿದ್ದಾರೆ ,ತಲಕಾಯಲಬೆಟ್ಟದ ಶ್ರೀ ವೆಂಕಟರಮಣಸ್ವಾಮಿ ದೇವಾಲಯ, ಸಾದಲಿಯ ಶ್ರೀ ಸಾದಲಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು,ಭಾನುವಾರ ನಗರದ ಕೋಟೆ ಶ್ರೀಸೋಮೇಶ್ವರಸ್ವಾಮಿ ದೇವಾಲಯ,ಶ್ರೀ ವೇಣುಗೋಪಾಲಸ್ವಾಮಿ, ಬಸ್ ನಿಲ್ದಾಣದ ಶ್ರೀ ಸಲ್ಲಾಪುರಮ್ಮ ದೇವಾಲಯ, ದಿಬ್ಬೂರಹಳ್ಳಿ ಬೈಪಾಸ್‌ನ ಶ್ರೀ ಪೂಜಮ್ಮದೇವಿ ದೇವಾಲಯ ಮತ್ತು ಮಸೀದಿಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ, ಪತ್ನಿ ಸಹನ ರಾಜೀವ್‌ಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅವರಿಗೆ ಸಾಥ್ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ಸ್ಕೂಲ್ ನಾಗರಾಜ್, ನಗರಸಭೆ ಮಾಜಿ ಉಪಾಧ್ಯಕ್ಷ ಅಪ್ಸರ್ ಪಾಷ, ಕೆಪಿಸಿಸಿ ಸದಸ್ಯ ಗುಡಿಹಳ್ಳಿ ನಾರಾಯಣಸ್ವಾಮಿ, ತನ್ನು, ಬಸವಾಪಟ್ಟಣ ಬೈರೇಗೌಡ, ದೊಡ್ಡತೇಕಹಳ್ಳಿ ಗೋಪಾಲರೆಡ್ಡಿ,ಹೀರೇಬಲ್ಲ ಕೃಷ್ಣಪ್ಪ, ಕುಂದಲಗುರ್ಕಿ ಮುನೀಂದ್ರ, ಸಾದಲಿ ಗೋವಿಂದರಾಜು,ಮುತ್ತೂರು ವೆಂಕಟೇಶ್ ಹಾಗು .ಮುಖಂಡರು, ಕಾರ್ಯಕರ್ತರು ಮತ್ತು ಸ್ಥಳೀಯರು ಭಾಗವಹಿಸಿದ್ದರು.

&&&&&&&&&&&&&&&&&&&

“ಹರಿನಾಮ ಘೋಷ”

ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ಫೆಬ್ರವರಿ 12, ಗುರುವಾರ ಸಂಜೆ 7~00ಕ್ಕೆ “ಹರಿನಾಮ ಘೋಷ”. ಗಾಯನ : ಕು|| ಡಿ.ಆರ್. ಗಗನ, ಕೀ-ಬೋರ್ಡ್ : ಶ್ರೀ ಅಮಿತ್ ಶರ್ಮಾ, ತಬಲಾ : ಶ್ರೀ ಸರ್ವೋತ್ತಮ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು
ಸರ್ವರಿಗೂ ಆತ್ಮೀಯ ಸುಸ್ವಾಗತ

WhatsApp

Join Now

Telegram

Join Now

Instagram

Join Now