ಬೆಂಗಳೂರು ಅಭಿವೃದ್ಧಿಗೆ ಕೆಂಪೇಗೌಡರ ದೂರದೃಷ್ಟಿ ಕಾರಣ : ಡಿ.ಕೆ‌ಶಿವಕುಮಾರ್

ವಿಜಯ ದರ್ಪಣ ನ್ಯೂಸ್….

ಕೆಂಪೇಗೌಡರ 516 ನೇ ಜಯಂತಿ ಹಿನ್ನೆಲೆ ಪ್ರತಿಮೆಗೆ ನಮನ

ಬೆಂಗಳೂರು ಅಭಿವೃದ್ಧಿಗೆ ಕೆಂಪೇಗೌಡರ ದೂರದೃಷ್ಟಿ ಕಾರಣ – ಡಿ.ಕೆ‌ಶಿವಕುಮಾರ್

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೂನ್ 27: ನಾಡಪ್ರಭು ಕೆಂಪೇಗೌಡ ರವರ 516 ನೇ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಬೆಳಗ್ಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನದ ನಿಲ್ದಾಣದ ಬಳಿ ಇರುವ ನಾಡಪ್ರಭು ಕೆಂಪೇಗೌಡ ರವರ 118 ಅಡಿ ಎತ್ತರದ ಕಂಚಿನ ಪ್ರತಿಮೆಗೆ ಪರಮಪೂಜ್ಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಯವರೊಂದಿಗೆ ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್. ಮುನಿಯಪ್ಪರವರು ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ.ಶಿವಕುಮಾರ್ ಅವರು ಮಾತನಾಡಿ ಇದು ಒಂದು ಐತಿಹಾಸಿಕ ದಿನ ಎಂದು ಹೇಳಬಹುದು ಕೆಂಪೇಗೌಡರು ಬೆಂಗಳೂರು ನಗರ ಕಟ್ಟದೇ ಹೋಗಿದ್ದರೆ ಇಂದು ನಾವು ಯಾರು ಕೂಡ ಬೆಂಗಳೂರಿನಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಬೇರೆ ರಾಜ್ಯಗಳಿಂದ ಹಳ್ಳಿಗಳಿಂದ ಜನರು ಕೆಲಸ ಹರಿಸುತ್ತ ಬೆಂಗಳೂರಿಗೆ ಬಂದು ಜೀವನ ನಡೆಸುತ್ತಿದ್ದಾರೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಐಟಿ ಬಿಟಿ ಕಂಪನಿಗಳ ತವರೆನಿಸಿಕೊಂಡಿದೆ. ಒಂದು ನದಿ ಮೂಲವು ಇಲ್ಲದ ಬೆಂಗಳೂರನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು. ಅವರ ಜ್ಞಾನದ ಮೂಲಕ ಹರಿದ ಅವರ ಶ್ರಮ ಇಂದಿಗೂ ಬೆಂಗಳೂರು ಉತ್ತಮ ಭೌಗೋಳಿಕ ಪ್ರದೇಶದಲ್ಲಿ ನಿರ್ಮಾಣವಾದ ನಗರವಾಗಿದೆ. ಅವರ ಆದರ್ಶ ಮೌಲ್ಯಗಳು ಚಿರಸ್ಥಾಯಿಯಾಗಿ ಉಳಿಯಬೇಕು ಎಂದರು.

ಈ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಬಯ್ಯಪ್ಪಾ ಅಧ್ಯಕ್ಷ ಶಾಂತಕುಮಾರ್  ಹಾಗೂ ಮುಖಂಡರು ಉಪಸ್ಥಿತರಿದ್ದರು.