ಹರೆಯದ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರ ಬಹು ಮುಖ್ಯ: ಜಯಂತಿ ರೈ
ವಿಜಯ ದರ್ಪಣ ನ್ಯೂಸ್. ಆಡಿ ಬಾ ಎನ ಕಂದ ಅಂಗಾಲ ತೊಳೆದೆನಾ……….. ಎಂದು ಪುಟ್ಟ ಕಂದನಿಗೆ ನೆನ್ನೆ ಮೊನ್ನೆವರೆಗೆ ಹೇಳುತಿದ್ದ ಅಮ್ಮ ಈಗೀಗ ಆಡಲು ಬಿಡುತಿಲ್ಲ, ಹೆಚ್ಚಾಗಿ ಹೊರಗೆ ಸ್ನೇಹಿತರೊಂದಿಗೆ ಬೆರೆಯಲು ಬಿಡಲ್ಲ ಯಾಕೆ ಅಮ್ಮ ಈ ರೀತಿ ಬದಲಾದಳು? ಹೆತ್ತಮ್ಮನ ಮನದಲ್ಲಿ ಯಾರಿಗೂ ಹೇಳಿಕೊಳ್ಳಲಾಗದ ಅವ್ಯಕ್ತ ಭಯ ಆವರಿಸಿದೆ. ತನ್ನ ಕಂದ ಮನೆಯಿಂದ ಶಾಲೆ/ ಕಾಲೇಜಿಗೆ ಹೊರಟಾಗ ಕಣ್ಣಿಗೆ ಕಾಣದ ದೇವರಲ್ಲಿ ಕಣ್ತುಂಬಿಕೊಂಡು ಮೌನವಾಗಿ ಕೇಳಿಕೊಳ್ಳುವುದೊಂದೆ ಮಗು ಸುರಕ್ಷಿತವಾಗಿ ಮನೆಗೆ ಹಿಂತಿರುಗಿ ಬರಲೆಂದು. ಬಾಲ್ಯದಲ್ಲಿ ಮಕ್ಕಳು…