ಧಾರಾವಾಹಿಗಳು ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು…..
ವಿಜಯ ದರ್ಪಣ ನ್ಯೂಸ್….. ಧಾರಾವಾಹಿಗಳು ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು….. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ ಮಾಯಾಲೋಕ.,………… ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ ಹುಚ್ಚು ಸ್ವಲ್ಪ ಹೆಚ್ಚು. ಅದರಲ್ಲೂ ಯುವಕರ ಆದ್ಯತೆ ಚಲನಚಿತ್ರವೇ. ಇದೊಂದು ಕೋಟ್ಯಾಂತರ ರೂಪಾಯಿಗಳ ಮನರಂಜನಾ ವ್ಯವಹಾರ. ಆದರೆ ಈಗ ಆ ವ್ಯವಹಾರ ನಮ್ಮ ಮನೆಗಳಿಗೇ ಮುಖ್ಯವಾಗಿ ಕೌಟುಂಬಿಕ ಮೌಲ್ಯಗಳಿಗೇ ಕೈ…
