ಕೊಡಗಿನಲ್ಲಿ ಶುಂಠಿ ಬೆಳೆಯನ್ನು ಬಾಧಿಸುವ ಹೊಸ ಶಿಲೀಂಧ್ರ ರೋಗ : ವಿಜ್ಞಾನಿಗಳಿಂದ ಪತ್ತೆ.
ವಿಜಯ ದರ್ಪಣ ನ್ಯೂಸ್…. ಕೊಡಗಿನಲ್ಲಿ ಶುಂಠಿ ಬೆಳೆಯನ್ನು ಬಾಧಿಸುವ ಹೊಸ ಶಿಲೀಂಧ್ರ ರೋಗ : ವಿಜ್ಞಾನಿಗಳಿಂದ ಪತ್ತೆ. ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಶುಂಠಿ ಬೆಳೆಯನ್ನು ತೀವ್ರವಾಗಿ ಭಾದಿಸಿದ ಹೊಸ ಶಿಲೀಂಧ್ರ ರೋಗವನ್ನು ಐ.ಸಿ.ಎ.ಆರ್.-ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ, ಕೋಜಿಕೋಡ್ ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಶುಂಠಿಯಲ್ಲಿ ಕಂಡುಬಂದಿರುವ ಈ ರೋಗವು ಪೈರಿಕ್ಯುಲೇರಿಯಾಠಿ ಎಂಬ ಶಿಲೀಂಧ್ರದಿಂದ ಹರಡುತ್ತದೆ. ಪೈರಿಕ್ಯುಲೇರಿಯಾವು ಭತ್ತ, ಗೋಧಿ ಮತ್ತು ಬಾರ್ಲಿಯಂತಹ ಏಕದಳ ಸಸ್ಯಗಳಲ್ಲಿ ಬ್ಲಾಸ್ಟ್ ರೋಗವನ್ನು ಉಂಟುಮಾಡುತ್ತದೆ. ಶುಂಠಿಯಲ್ಲಿ ಇದು ಮೊದಲ…