ಕೊಡಗಿನಲ್ಲಿ ಶುಂಠಿ ಬೆಳೆಯನ್ನು ಬಾಧಿಸುವ ಹೊಸ ಶಿಲೀಂಧ್ರ ರೋಗ : ವಿಜ್ಞಾನಿಗಳಿಂದ ಪತ್ತೆ.

ವಿಜಯ ದರ್ಪಣ ನ್ಯೂಸ್….

ಕೊಡಗಿನಲ್ಲಿ ಶುಂಠಿ ಬೆಳೆಯನ್ನು ಬಾಧಿಸುವ ಹೊಸ ಶಿಲೀಂಧ್ರ ರೋಗ : ವಿಜ್ಞಾನಿಗಳಿಂದ ಪತ್ತೆ.

ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಶುಂಠಿ ಬೆಳೆಯನ್ನು ತೀವ್ರವಾಗಿ ಭಾದಿಸಿದ ಹೊಸ ಶಿಲೀಂಧ್ರ ರೋಗವನ್ನು ಐ.ಸಿ.ಎ.ಆರ್.-ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ, ಕೋಜಿಕೋಡ್ ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಶುಂಠಿಯಲ್ಲಿ ಕಂಡುಬಂದಿರುವ ಈ ರೋಗವು ಪೈರಿಕ್ಯುಲೇರಿಯಾಠಿ ಎಂಬ ಶಿಲೀಂಧ್ರದಿಂದ ಹರಡುತ್ತದೆ. ಪೈರಿಕ್ಯುಲೇರಿಯಾವು ಭತ್ತ, ಗೋಧಿ ಮತ್ತು ಬಾರ್ಲಿಯಂತಹ ಏಕದಳ ಸಸ್ಯಗಳಲ್ಲಿ ಬ್ಲಾಸ್ಟ್ ರೋಗವನ್ನು ಉಂಟುಮಾಡುತ್ತದೆ. ಶುಂಠಿಯಲ್ಲಿ ಇದು ಮೊದಲ ಬಾರಿಗೆ ವರದಿಯಾಗಿದೆ. ಈ ರೋಗಬಂದ ಶುಂಠಿ ಗಿಡದ ಎಲೆಗಳು ಹಳದಿಯಾಗಿ ಕಾಣಿಸಿಕೊಳ್ಳುತ್ತವೆ. ಆರಂಭಿಕ ಹಂತದಲ್ಲಿ ಕಪ್ಪು ಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಜೊತೆಗೂಡಿರುತ್ತದೆ. ಒಮ್ಮೆ ಸೋಂಕು ತಗುಲಿದರೆ ಅದು ವೇಗವಾಗಿ ಹರಡುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ಇಡೀ ಹೊಲವನ್ನು ಆವರಿಸುತ್ತದೆ. ಇದು ತೀವ್ರವಾದ ಬೆಳೆ ನಷ್ಟ ಮತ್ತು ಶುಂಠಿಯ ಎಲೆ ಮತ್ತು ಕಾಂಡದ ಒಣಗುವಿಕೆಗೆ ಕಾರಣವಾಗುತ್ತದೆ. ರೋಗಪೀಡಿತ ಸಸ್ಯಗಳ ಗೆಡ್ಡೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಖಚಿತಪಡಿಸಿರುತ್ತಾರೆ. ಸಮಸ್ಯೆಯು ಎಲೆಗಳ ಅಕಾಲಿಕ ಹಳದಿ ಮತ್ತು ಒಣಗಿಸುವಿಕೆಯಲ್ಲಿದೆ. ಇದು ಶುಂಠಿ ಗೆಡ್ಡೆಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಈ ರೋಗದಿಂದಾಗಿ, ಕೊಡಗಿನ ರೈತರು ಗೆಡ್ಡೆಗಳ ತೂಕದಲ್ಲಿ ಶೇ.30 ರಷ್ಟು ನಷ್ಟವನ್ನು ಅನುಭವಿಸಿದ್ದಾರೆ.

ರೋಗ ಹರಡುವಿಕೆಗೆ ಕಾರಣೀಭೂತವಾದ ಹವಾಮಾನದ ಅಂಶಗಳು : ಸಂಶೋಧಕರ ಪ್ರಕಾರ, ಕೊಡಗಿನಲ್ಲಿರುವ ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳಿಂದ ರೋಗ ಹರಡುವಿಕೆ ಹೆಚ್ಚಾಗಿ ಉಂಟಾಗುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ, ಈ ಪ್ರದೇಶದಲ್ಲಿ ಬೆಳಗ್ಗೆ ಇಬ್ಬನಿ ಬೀಳುತ್ತದೆ. ಇದು ಶಿಲೀಂಧ್ರದ ಅಭಿವೃದ್ಧಿ ಹೊಂದಲು ಮತ್ತು ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ. ಇದು ಕೊಡಗಿನ ಮತ್ತು ಸುತ್ತಮತ್ತಲಿನ ಕೆಲವು ಪ್ರದೇಶದ ಶುಂಠಿ ಹೊಲಗಳಲ್ಲಿ ರೋಗವು ವೇಗವಾಗಿ ಹರಡಲು ಕಾರಣವಾಗಿದೆ. ಆದರೆ ಕರ್ನಾಟಕ ಮತ್ತು ಕೇರಳದ ಇತರ ಭಾಗಗಳಲ್ಲಿನ ವಿಭಿನ್ನ ಹವಾಮಾನದಿಂದ ಬೆಳೆಯು ಹಾನಿಗೊಳಗಾಗಿಲ್ಲ. ಐಸಿಎಆರ್.-ಐಐಎಸ್‍ಆರ್., ಕೋಜಿಕೋಡ್ಮತ್ತು ಅದರ ಪ್ರಾದೇಶಿಕ ಕೇಂದ್ರವಾದ ಅಪ್ಪಂಗಳ ತಂಡವು ನಡೆಸಿದ ಸಂಶೋಧನೆಯು ಕೊಡಗಿನ ಹವಾಮಾನ ಪರಿಸ್ಥಿತಿಗಳು-ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‍ನಲ್ಲಿ ಇಬ್ಬನಿ ಬೀಳುವಿಕೆ-ರೋಗ ಹರಡಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ ಎಂದು ಸೂಚಿಸಿದೆ.

ಐ.ಸಿ.ಎ.ಆರ್.–ಐಐಎಸ್‍ಆರ್. ನಲ್ಲಿನ ಸಂಶೋಧನಾ ತಂಡವು ರೋಗವನ್ನು ಅಧ್ಯಯನ ಮಾಡುವಾಗ ಗಮನಾರ್ಹ ಸವಾಲುಗಳನ್ನು ಎದುರಿಸಿತು, ಏಕೆಂದರೆ ರೋಗದ ಮಾದರಿಗಳು ಕೋಜಿಕೋಡ್ನ ಪ್ರಯೋಗಾಲಯವನ್ನು ತಲುಪುವ ವೇಳೆಗೆ ಹೆಚ್ಚಾಗಿ ಒಣಗಿರುತ್ತಿದ್ದವು. ತಿಂಗಳುಗಳ ಸತತ ಸಂಶೋಧನೆಯಿಂದ ರೋಗದ ಹಿಂದಿನ ಕಾರಣವಾದ ಪೈರಿಕ್ಯುಲೇರಿಯಾsಠಿ. ಅನ್ನು ವಿಜ್ಞಾನಿಗಳು ದೃಢೀಕರಿಸಲು ಸಾಧ್ಯವಾಯಿತು.
ನಿಯಂತ್ರಣ ಕ್ರಮಗಳು: ರೋಗವನ್ನು ನಿರ್ವಹಿಸಲು, ವಿಜ್ಞಾನಿಗಳು ಶಿಲೀಂಧ್ರನಾಶಕಗಳಾದ ಪೆನ್ಕೊನಜೋಲ್ ಅನ್ನು 1 mಟ/ಐ ಅಥವಾ ಕಾಬೆರ್ಂಡಜಿಮ್ ಮತ್ತು ಮ್ಯಾಂಕೋಜೆಬ್ ಸಂಯೋಜನೆಯನ್ನು 2 ಗ್ರಾಂ/ಲೀ ಅನುಪಾತದಲ್ಲಿ ಶಿಫಾರಸು ಮಾಡುತ್ತಾರೆ. ಬೀಜದ ಗೆಡ್ಡೆಗಳನ್ನು ಶೇಖರಿಸುವ ಮೊದಲು ಈ ಶಿಲೀಂಧ್ರನಾಶಕದಲ್ಲಿ 30 ನಿಮಿಷಗಳ ಕಾಲ ಅದ್ದಿ ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸುವುದು.ರೋಗನಿರೋಧಕ ಕ್ರಮವಾಗಿ ಪೆನ್ಕೊನಜೋಲ್  ಅಥವಾ ಟೆಬುಕೊನಜೋಲ್ @ 1mಟ/ಐ ಅನ್ನು ನಾಟಿ ಮಾಡಿದ ನಾಲ್ಕು ತಿಂಗಳ ನಂತರ ಸಿಂಪಡಿಸುವುದು. ರೋಗಲಕ್ಷಣವಾದ ಎಲೆಗಳ ಮೇಲೆ ಕಪ್ಪು ಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಹಳದಿಭಾಗದಿಂದ ಸುತ್ತುವರಿಯುವುದನ್ನು ಗಮನಿಸಿದರೆ, ರೋಗದ ತ್ವರಿತ ಹರಡುವಿಕೆಯನ್ನು ತಡೆಯಲು ತಕ್ಷಣ ಶಿಲೀಂಧ್ರನಾಶಕವನ್ನು ಸಿಂಪಡಿಸುವುದು. ಪೈರಿಕ್ಯುಲೇರಿಯ ಶಿಲೀಂಧ್ರವು ಅತಿ ವೇಗವಾಗಿ ಹರಡುವುದರಿಂದ ರೈತರು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುವುದು ಅಗತ್ಯ. ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಈ ರೋಗವು ಕೇವಲ 10 ಗಂಟೆಗಳ ಅವಧಿಯಲ್ಲಿ ದೊಡ್ಡ ಪ್ರದೇಶಗಳಲ್ಲಿ ಹರಡಬಹುದು. ಕೆಲವು ರೋಗ ಪೀಡಿತ ತೋಟಗಳು 20 ಕಿಲೋಮೀಟರ್ ಅಂತರದಲ್ಲಿದ್ದರು ಸಹರೋಗ ಹರಡುತ್ತದೆ.

ಬೆಳೆ ಹಾನಿಗೊಳಗಾದ ರೈತರಿಗೆ ಶಿಫಾರಸು:

ಈ ರೋಗದಿಂದ ಬೆಳೆ ಹಾನಿಗೊಳಗಾದ ರೈತರು ರೋಗಪೀಡಿತ ಪ್ರದೇಶಗಳಲ್ಲಿ ಶುಂಠಿ ಕೃಷಿ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಲಹೆ ನೀಡಲಾಗಿದೆ. ರೋಗಕಾರಕ ಶಿಲೀಂಧ್ರದ ವರ್ತನೆ ಮತ್ತು ಪರಿಸರ ಪ್ರಚೋದಕಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಂಶೋಧನಾ ತಂಡವು ಹೆಚ್ಚಿನ ಅಧ್ಯಯನಗಳನ್ನು ನಡೆಸುತ್ತಿದೆ ಎಂದು ಅಪ್ಪಂಗಳ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.