ಗ್ಯಾರಂಟಿಗಳು ಬಿಟ್ರೆ, ರಾಜ್ಯ ಸರ್ಕಾರ ಸಾಧನೆ ಶೂನ್ಯ : ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ

ವಿಜಯ ದರ್ಪಣ ನ್ಯೂಸ್…. ಗ್ಯಾರಂಟಿಗಳು ಬಿಟ್ರೆ, ರಾಜ್ಯ ಸರ್ಕಾರ ಸಾಧನೆ ಶೂನ್ಯ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬೆಂಗಳೂರು ಏ.5: ಗ್ಯಾರಂಟಿಗಳ ಬಂಡವಾಳ ಹೊರತುಪಡಿಸಿ ಕಳೆದ ಸುಮಾರು 3 ವರ್ಷದಲ್ಲಿ ರಾಜ್ಯದಲ್ಲಿ ಯಾವುದೇ ಸಾಧನೆ ಆಗಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ದೂರಿದ್ದಾರೆ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಪತ್ರಿಕೆ ಗಮನಿಸಿದರೆ, ದೃಶ್ಯ ಮಾಧ್ಯಮಗಳನ್ನು ಗಮನಿಸುತ್ತ ಸಾಗಿದರೆ ಗ್ಯಾರಂಟಿ ಬಿಟ್ಟುಬೇರೆ ಸಾಧನೆಯನ್ನು ಹುಡುಕಲು ಸಾಧ್ಯವಿಲ್ಲ ಎಂದು ನುಡಿದರು. ರಾಜ್ಯದ ಮುಖ್ಯಮಂತ್ರಿಗಳು ಬಿಜೆಪಿ ಬಗ್ಗೆ ಮುಖ್ಯಮಂತ್ರಿ ಪದವಿಯ ಘನತೆಗೆ … Read more

ಜಿಲ್ಲಾಡಳಿತ ಭವನದಲ್ಲಿ ಡಾ. ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

ವಿಜಯ ದರ್ಪಣ ನ್ಯೂಸ್….. ಜಿಲ್ಲಾಡಳಿತ ಭವನದಲ್ಲಿ ಡಾ. ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾ. 05 : ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ|| ಬಾಬು ಜಗಜೀವನ ರಾಂ ರವರ 119ನೇ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಹಾಗೂ ಅತಿಥಿಗಳು ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ … Read more

ಹಸಿವಿನ ಔಷಧಿ ಮತ್ತು ಮತದಾನ…..

ವಿಜಯ ದರ್ಪಣ ನ್ಯೂಸ್… ಹಸಿವಿನ ಔಷಧಿ ಮತ್ತು ಮತದಾನ….. ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ…… ಒಬ್ಬ ಬಾಲಕ ಡಾಕ್ಟರ್ ಬಳಿ ” ಹಸಿವು ಹೋಗಲಾಡಿಸಲು ಔಷಧಿ ಇದ್ದರೆ ಕೊಡಿ ” ಎಂದು ಕೇಳುತ್ತಿರುವುದು ಮತ್ತು ಅದಕ್ಕೆ ಡಾಕ್ಟರ್ ಕೂಡ ಕಣ್ಣೀರಾಗುತ್ತಾರೆ….. ಡಾಕ್ಟರ್ ಅಷ್ಟೇ ಏಕೆ ಮಾನವೀಯ ಕಾಳಜಿಯ ಪ್ರತಿಯೊಬ್ಬರ ಮನಕಲಕುವ ದೃಶ್ಯವಿದು. ಗಾಳಿ ನೀರಿನ ನಂತರ ಅತ್ಯವಶ್ಯಕ ಅಂಶ ಆಹಾರ. ಆತ ರಾಜನಾಗಿರಲಿ, ಯೋಗಿಯಾಗಿರಲಿ, ಭಿಕ್ಷುಕನಾಗಿರಲಿ, ಕಳ್ಳನೋ, ಸುಳ್ಳನೋ ಊಟ ಮಾತ್ರ … Read more

ಹಿಂದೂ ಧರ್ಮ ರಕ್ಷಣೆಗೆ ಒಗ್ಗಟ್ಟಿನ ಮಂತ್ರ

ವಿಜಯ ದರ್ಪಣ ನ್ಯೂಸ್…… ಹಿಂದೂ ಧರ್ಮ ರಕ್ಷಣೆಗೆ ಒಗ್ಗಟ್ಟಿನ ಮಂತ್ರ ನೆಲಮಂಗಲ: ಹಿಂದೂ ಧರ್ಮದ ಉಳಿವು ಹಾಗೂ ಭದ್ರತೆಗಾಗಿ ದೇಶದ ನೂರಾರು ಸ್ವಾಮೀಜಿಗಳು ಎರಡು ದಿನಗಳ ಸಭೆ ನಡೆಸಿದ್ದು, ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಪಾಲ್ಗೊಂಡಿದ್ದರು. ಅರಿಶಿನಕುಂಟೆಯ ನಗರೂರಿನ ಬಿಜಿಎಸ್ ಎಂಸಿಎಚ್ ಆಸ್ಪತ್ರೆ ಹಾಗೂ ಪಿಯು ಕಾಲೇಜು ಆವರಣದಲ್ಲಿ ಹಿಂದೂ ಧರ್ಮ ಆಚಾರ್ಯ ಸಭಾದಿಂದ ನಡೆದ ಸಭೆಯಲ್ಲಿ ಹಿಂದೂ ಧರ್ಮದ ಭದ್ರತೆ, ಉಳಿವು ಮತ್ತು ಮುಂದಿನ ತೀರ್ಮಾನಗಳ … Read more

ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು…. 01/04/1907, 21/01/2019……

ವಿಜಯ ದರ್ಪಣ ನ್ಯೂಸ್…. ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮಿಗಳು…. 01/04/1907, 21/01/2019…… ಇಬ್ಬರು ಮನುಷ್ಯರ ಆಯಸ್ಸನ್ನು ಒಬ್ಬರೇ ಪಡೆದ ಅದೃಷ್ಟವಂತರ ಸಾಧನೆಯ ಒಂದು ನೋಟ….. ನಡೆದಾಡುವ ದೇವರಲ್ಲ, ನಲಿದಾಡುವ – ನುಡಿದಾಡಿದ ಜೀವಪ್ರೀತಿಯ ನಿಜ ಮನುಷ್ಯನಾಗಿದ್ದ ಸಿದ್ದಗಂಗೆಯ ಶಿವಕುಮಾರ ಸ್ವಾಮಿ ಎಂಬ ಶಿವಣ್ಣ…………… ಸಾಧಾರಣ ಕುಟುಂಬದ ಬಾಲಕನೊಬ್ಬ ಉಚಿತ ವಸತಿ ಶಾಲೆಯ ವಿದ್ಯಾರ್ಥಿಯಾಗಿ ತನ್ನ ವಿನಯ, ಪ್ರತಿಭೆ, ಜ್ಞಾನ, ನಡವಳಿಕೆಯಿಂದ – ಪರಿಸ್ಥಿತಿ ನಿರ್ಮಿಸಿದ ಅವಕಾಶದಿಂದ ಸನ್ಯಾಸತ್ವ ಸ್ವೀಕರಿಸಿ ಸಿದ್ದಗಂಗೆ ಎಂಬ ಸ್ಥಳದ ಸಣ್ಣ ಮಠ ಒಂದಕ್ಕೆ … Read more

ವಿಜೃಂಭಣೆಯಿಂದ ನಡೆದ ಶ್ರೀದೌಪದಮ್ಮ ಧರ್ಮರಾಯಸ್ವಾಮಿ ಹಸಿ ಕರಗ ಮಹೋತ್ಸವ

ವಿಜಯ ದರ್ಪಣ ನ್ಯೂಸ್….. ವಿಜೃಂಭಣೆಯಿಂದ ನಡೆದ ಶ್ರೀದೌಪದಮ್ಮ ಧರ್ಮರಾಯಸ್ವಾಮಿ ಹಸಿ ಕರಗ ಮಹೋತ್ಸವ ಶಿಡ್ಲಘಟ್ಟ : ತಾಲ್ಲೂಕಿನ ಮೇಲೂರಿನ ವಹ್ನಿಕುಲ ಕ್ಷತ್ರಿಯರ (ತಿಗಳರ) ಟ್ರಸ್ಟ್ ವತಿಯಿಂದ ಶ್ರೀದೌಪದಮ್ಮ ಧರ್ಮರಾಯಸ್ವಾಮಿ ಹಸಿ ಕರಗ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. ಕರಗದ ಪೂಜಾರಿ ಅಭಿಲಾಷ್ ಹಸಿಕರಗ ಹೊತ್ತು ಗ್ರಾಮದ ಚಂಗಲರಾಯರೆಡ್ಡಿ ವೃತ್ತದಲ್ಲಿ ತಮಟೆ ವಾದನ, ಮಂಗಳವಾದ್ಯಗಳ ವಾದನಕ್ಕೆ ತಕ್ಕಂತೆ ನೃತ್ಯ ಮಾಡಿ ನೆರದಿದ್ದವರ ಮನರಂಜಿಸಿದರು. ಆನಂತರ ಶ್ರೀಗಂಗಾದೇವಿ ದೇವಾಲಯ, ಶ್ರೀ ಉಮಾಮಹೇಶ್ವರ ದೇವಾಲಯ ಸೇರಿದಂತೆ ಗ್ರಾಮದ ಎಲ್ಲಾ ದೇವಾಲಯಗಳಿಗೆ ತೆರಳಿ ಪೂಜೆ … Read more

ಜಾನುವಾರುಗಳಿಗೆ 9ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ:ಅಪರ ಜಿಲ್ಲಾಧಿಕಾರಿಗಳಿಂದ ಪೋಸ್ಟರ್ ಬಿಡುಗಡೆ

ವಿಜಯ ದರ್ಪಣ ನ್ಯೂಸ್…. ಪಶುಪಾಲನಾ ಮತ್ತು ವಶುವೈದ್ಯಕೀಯ ಸೇವಾ ಇಲಾಖೆಯಿಂದ ಹಮ್ಮಿಕೊಳ್ಳಲಿರುವ ಕಾಲುಬಾಯಿ ಲಸಿಕಾ ಅಭಿಯಾನ ಜಾನುವಾರುಗಳಿಗೆ 9ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ:ಅಪರ ಜಿಲ್ಲಾಧಿಕಾರಿಗಳಿಂದ ಪೋಸ್ಟರ್ ಬಿಡುಗಡೆ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  ಏ.04: ಏಪ್ರಿಲ್ 23 ರಿಂದ ಜಾನುವಾರುಗಳಿಗೆ ಉಚಿತ ಕಾಲು ಬಾಯಿ ಲಸಿಕೆ ಹಾಕುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ರೈತರು ತಪ್ಪದೇ ತಮ್ಮ ಜಾನುವಾರುಗಳಿಗೆ ಉಚಿತ ಕಾಲುಬಾಯಿ ಲಸಿಕೆ ಹಾಕಿಸಿ ಎಂದು ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ … Read more

ಮಕ್ಕಳು ಜಾತಿ-ಮತದ ಭೇದಗಳನ್ನು ಮರೆತು ಬದುಕಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ: ಬಿ.ಆರ್.ಪಾಟೀಲ್

ವಿಜಯ ದರ್ಪಣ ನ್ಯೂಸ್……. ಮಕ್ಕಳು ಜಾತಿ-ಮತದ ಭೇದಗಳನ್ನು ಮರೆತು ಬದುಕಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ:  ಬಿ.ಆರ್.ಪಾಟೀಲ್ ಶಿಡ್ಲಘಟ್ಟ : ಮಕ್ಕಳು ಜಾತಿ-ಮತದ ಭೇದಗಳನ್ನು ಮರೆತು ಮಾನವೀಯತೆಯಿಂದ ಬದುಕಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ ಶಾಲೆ ಹಂತದಿಂದಲೇ ‘ನಾವೆಲ್ಲರೂ ಮೊದಲು ಭಾರತೀಯರು’ ಎಂಬ ವಿಶಾಲ ಮನೋಭಾವ ರೂಢಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದರು. ತಾಲ್ಲೂಕಿನ ಭಕ್ತರಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ (ಬಿಎಂವಿ ಶಾಲೆ) ವಿದ್ಯಾಸಂಸ್ಥೆಯಲ್ಲಿ ಬಿಎಂವಿ … Read more

ಕವಿ, ಉಪನ್ಯಾಸಕ, ಸಾಂಸ್ಕೃತಿಕ ಪರಿಚಾರಕ ಡಾ.ಸಿಸಿರಾ

ವಿಜಯ ದರ್ಪಣ ನ್ಯೂಸ್…. ಕವಿ, ಉಪನ್ಯಾಸಕ, ಸಾಂಸ್ಕೃತಿಕ ಪರಿಚಾರಕ ಡಾ.ಸಿಸಿರಾ ಜನ್ಮ ದಿನದ ಸಂಭ್ರಮ  ಕವಿ, ಸಾಹಿತ್ಯ, ಸಾಂಸ್ಕೃತಿಕ ಸಂಘಟಕ ಕನ್ನಡ ಉಪನ್ಯಾಸಕರು ಆದ ಡಾ.ಸಿಸಿರಾ ಅವರು 1973 ಏಪ್ರಿಲ್ 05 ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಸಿದ್ಧನಹಳ್ಳಿಯಲ್ಲಿ ರೈತ ಕಾರ್ಮಿಕರಾದ ಸಿದ್ದೇಗೌಡ, ಪದ್ಮಾ ದಂಪತಿಗೆ ಜನಿಸಿದವರು.ಇವರ ಪೂರ್ಣ ಹೆಸರು ಸಿದ್ಧನಹಳ್ಳಿ ಸಿದ್ದೇಗೌಡ ರಾಮಲಿಂಗೇಶ್ವರ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಹಾಗೂ ಪಿಹೆಚ್. ಡಿ ಪದವಿ ಪಡೆದು ಪ್ರತಿಷ್ಠಿತ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.ಕನ್ನಡ ಸಾಹಿತ್ಯ … Read more

ಚಿಕ್ಕಯ್ಯನ ಛತ್ರ ಗ್ರಾಮದಲ್ಲಿ  ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ  ಬಸ್ಸು ನಿಲುಗಡೆಗೆ ವಿದ್ಯಾರ್ಥಿಗಳ ಪೋಷಕರ ಒತ್ತಾಯ

ವಿಜಯ ದರ್ಪಣ ನ್ಯೂಸ್….. ಚಿಕ್ಕಯ್ಯನ ಛತ್ರ ಗ್ರಾಮದಲ್ಲಿ  ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ  ಬಸ್ಸು ನಿಲುಗಡೆಗೆ ವಿದ್ಯಾರ್ಥಿಗಳ ಪೋಷಕರ ಒತ್ತಾಯ ತಾಂಡವಪುರ ಏಪ್ರಿಲ್ 4 ಮೈಸೂರು ನಂಜನಗೂಡು ಊಟಿ ರಸ್ತೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಚಿಕ್ಕಯ್ಯನ ಛತ್ರ ಗ್ರಾಮದ ಬಳಿ ಸಾರಿಗೆ ಬಸ್ಸುಗಳು ನಿಲ್ಲಿಸದೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಿ ಶಾರಿಗೆ ವಸ್ತುಗಳನ್ನು ನಿಲ್ಲಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಅನುಕೂಲ ಮಾಡಿಕೊಡಬೇಕೆಂದು … Read more