ಕೂರ್ಗಳ್ಳಿಯಲ್ಲಿ  ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ ಟಿ ದೇವೇಗೌಡ ಭೂಮಿ ಪೂಜೆ

ವಿಜಯ ದರ್ಪಣ ನ್ಯೂಸ್….. ಕೂರ್ಗಳ್ಳಿಯಲ್ಲಿ  ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ ಟಿ ದೇವೇಗೌಡ ಭೂಮಿ ಪೂಜೆ ತಾಂಡವಪುರ ಏಪ್ರಿಲ್ 6 ಸಾರ್ವಜನಿಕರಿಂದ ಮೂಲಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ಬೇಡಿಕೆ ಇರುವುದರಿಂದ ಮೈಸೂರು ತಾಲ್ಲೂಕು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹೂಟಗಳ್ಳಿ ನಗರಸಭೆ ವ್ಯಾಪ್ತಿಗೆ ಬರುವ ಕೂರ್ಗಳ್ಳಿ ಪ್ರದೇಶದ ವಿವಿಧ ಬೀದಿಗಳ ಅಭಿವೃದ್ಧಿಗೆ ಕಾಯಕಲ್ಪ ಶುರುವಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಗುದ್ದಲಿಪೂಜೆ ನೆರವೇರಿಸಿದರು. ಕೆಆರ್‌ಎಸ್ ರಸ್ತೆಯಲ್ಲಿರುವ ಕೂರ್ಗಳ್ಳಿ ಬಳಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ೮.೭೦ ಕೋಟಿ ರೂಪಾಯಿ … Read more

ಮೈಸೂರಿನಲ್ಲಿ ಸಮಗ್ರ ಆರೋಗ್ಯಕ್ಕಾಗಿ ‘ಆಯುರ್ ವೈದ್ಯ ಸಂಪತ್ತು’ ಚಾಲನೆ

ವಿಜಯ ದರ್ಪಣ ನ್ಯೂಸ್….. ಮೈಸೂರಿನಲ್ಲಿ ಸಮಗ್ರ ಆರೋಗ್ಯಕ್ಕಾಗಿ ‘ಆಯುರ್ ವೈದ್ಯ ಸಂಪತ್ತು’ ಚಾಲನೆ ತಾಂಡವಪುರ ಏಪ್ರಿಲ್ 6: ಮೈಸೂರಿನ ರುಚಿ ದಿ ಪ್ರಿನ್ಸ್ ಹೋಟೆಲ್ನಲ್ಲಿ ಸೋಮವಾರ ಸಾಂಪ್ರದಾಯಿಕ ಭಾರತೀಯ ಆರೋಗ್ಯ ರಕ್ಷಣೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ‘ಆಯುರ್ ವೈದ್ಯ ಸಂಪತ್ತು’ ಎಂಬ ಹೊಸ ಆಯುರ್ವೇದ ಉಪಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಒತ್ತಡ, ಕಳಪೆ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯಿಂದಾಗಿ ದೇಶಾದ್ಯಂತ ಹೆಚ್ಚುತ್ತಿರುವ ಜೀರ್ಣಕ್ರಿಯೆಯ ತೊಂದರೆಗಳು, ಮಧುಮೇಹ, ಯಕೃತ್ತಿನ ಸಮಸ್ಯೆಗಳು ಮತ್ತು ಕೀಲು ನೋವಿನಂತಹ ಜೀವನಶೈಲಿ ಸಂಬಂಧಿತ ಕಾಯಿಲೆಗಳನ್ನು … Read more

ಶ್ರೀಲಕ್ಷ್ಮೀನರಸಿಂಹಸ್ವಾಮಿ ಹಾಗೂ ಶ್ರೀ ಅಭಯಾಂಜನೇಯಸ್ವಾಮಿ ದೇವರುಗಳಿಗೆ ತಂಬಿಟ್ಟು ದೀಪೋತ್ಸವ 

ವಿಜಯ ದರ್ಪಣ ನ್ಯೂಸ್…. ಶ್ರೀಲಕ್ಷ್ಮೀನರಸಿಂಹಸ್ವಾಮಿ ಹಾಗೂ ಶ್ರೀ ಅಭಯಾಂಜನೇಯಸ್ವಾಮಿ ದೇವರುಗಳಿಗೆ ತಂಬಿಟ್ಟು ದೀಪೋತ್ಸವ  ಶಿಡ್ಲಘಟ್ಟ : ಗಂಜಿಗುಂಟೆ ಪಂಚಾಯಿತಿಯ ಪೂಲಕುಂಟ್ಲಹಳ್ಳಿಯಲ್ಲಿ ಗ್ರಾಮಸ್ಥರು ತಂಬಿಟ್ಟು ದೀಪೋತ್ಸವದ ಮೆರವಣಿಗೆಯನ್ನು ಮಾಡಿ, ಗ್ರಾಮದ ಶ್ರೀಲಕ್ಷ್ಮೀನರಸಿಂಹಸ್ವಾಮಿ ಹಾಗೂ ಶ್ರೀ ಅಭಯಾಂಜನೇಯಸ್ವಾಮಿ ದೇವಾಲಯಗಳಿಗೆ ತೆರಳಿ ದೀಪಗಳನ್ನು ಬೆಳಗಿದರು. ಬೆಳಿಗ್ಗೆ ದೇವರುಗಳಿಗೆ ಪಂಚಾಮೃತಾಭಿಷೇಕ, ವಿವಿಧ ಹೂವಿನ ಅಲಂಕಾರ ಮಾಡಲಾಗಿತ್ತು. ಅಕ್ಕಿ ಹಿಟ್ಟು ಮತ್ತು ಬೆಲ್ಲದಿಂದ ತಯಾರಿಸಿದ ‘ತಂಬಿಟ್ಟು’ ಪ್ರಸಾದದ ಉಂಡೆಗಳನ್ನು ಮಾಡಿ, ಅವುಗಳ ಮಧ್ಯದಲ್ಲಿ ಗುಂಡಿಯನ್ನು ಮಾಡಿ ತುಪ್ಪದ ದೀಪವನ್ನು ಹಚ್ಚಲಾಗುತ್ತದೆ. ಗ್ರಾಮದ ದೇವರುಗಳಿಗೆ ಭಕ್ತಿಯಿಂದ … Read more

ಕೆಐಎಡಿಬಿಗೆ ಭೂಮಿ ವಶ ಖಂಡಿಸಿ ರೈತರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ವಿಜಯ ದರ್ಪಣ ನ್ಯೂಸ್…… ಕೆಐಎಡಿಬಿಗೆ ಭೂಮಿ ವಶ ಖಂಡಿಸಿ ರೈತರಿಂದ ರಾಷ್ಟ್ರೀಯ ಹೆದ್ದಾರಿ ಬಂದ್*ಮಾಡಿ ಪ್ರತಿಭಟನೆ ತಾಂಡವಪುರ ಏಪ್ರಿಲ್ 6 ಮೈಸೂರು ಜಿಲ್ಲೆ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಲೂಕಿನ ಮುದ್ದಳ್ಳಿ ಗ್ರಾಮದಲ್ಲಿ ಸುಮಾರು 448 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿ ಕೈಗಾರಿಕರಣಕ್ಕೆ ವಶಪಡಿಸಿಕೊಳ್ಳುವುದನ್ನು ಖಂಡಿಸಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಗ್ರಾಮದ ರೈತರೊಂದಿಗೆಸೋಮವಾರ ಕರ್ನಾಟಕ , ತಮಿಳುನಾಡು , ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ … Read more

ಬಸವಣ್ಣನವರ ತತ್ವಗಳು ಸರ್ವಕಾಲಿಕ: ಸಚಿವ ಈಶ್ವರ ಖಂಡ್ರೆ

ವಿಜಯ ದರ್ಪಣ ನ್ಯೂಸ್…….  ಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆ ಲೋಕಾರ್ಪಣೆ ಬಸವಣ್ಣನವರ ತತ್ವಗಳು ಸರ್ವಕಾಲಿಕ: ಸಚಿವ ಈಶ್ವರ ಖಂಡ್ರೆ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾ. 06 : ಸಮಾಜದ ನಿರ್ಮಾಣಕ್ಕೆ ಕ್ರಾಂತಿಯನ್ನೇ ಮಾಡಿದ ಬಸವಣ್ಣನವರ ತತ್ವಾದರ್ಶಗಳು ಸಾರ್ವಕಾಲಿಕವಾಗಿದ್ದು, ಬಸವ ತತ್ವಗಳ ಪ್ರಚಾರ, ಪ್ರಸಾರ ಇಂದಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಬಸವೇಶ್ವರ ಪ್ರತಿಮೆ ನಿರ್ಮಾಣ … Read more

ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ, ” War against war… “

ವಿಜಯ ದರ್ಪಣ ನ್ಯೂಸ್….. ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ, ” War against war… “ ಅಸಹಾಯಕರ ನೋವಿನ ಧ್ವನಿ,… ದಯವಿಟ್ಟು ಬನ್ನಿ ಭಾಗವಹಿಸಿ…… ಯುದ್ಧದ ವಿರುದ್ಧವೇ ಯುದ್ಧ ಸಾರುವ ಅನಿವಾರ್ಯತೆಗೆ ವಿಶ್ವ ಸಮುದಾಯ ಬರಬೇಕಾಗಿದೆ. ಇಲ್ಲದಿದ್ದರೆ ವಿಶ್ವ ಎಂದಿನಂತೆ ಉಳಿಯುವುದು ಕಷ್ಟ…. ಯಾರೋ ಹೇಳಿದಂತೆ ಮುದುಕರು ಯುದ್ಧ ಘೋಷಿಸುತ್ತಾರೆ, ಯುವಕರ ಯುದ್ಧದಲ್ಲಿ ಸಾಯುತ್ತಾರೆ. ಯಾರೋ ತಾಯಿ ಹೆತ್ತ ಮಕ್ಕಳು ಇನ್ಯಾರದೋ ಹುಚ್ಚಾಟಕ್ಕೆ ಬಲಿಯಾಗುತ್ತಾರೆ…. ಸೈನಿಕರು…… ಯುದ್ಧದ ಈ ಭಯಂಕರ ಸನ್ನಿವೇಶದಲ್ಲಿ ಕಾಡುತ್ತಿರುವ ನನ್ನ ಸೈನಿಕ ಜೀವಗಳು … Read more

ಮಾನವನ ದುಡಿಮೆ ಬಸಿದ ಬೆವರಿನ ಬೆಣ್ಣೆಯಂತಾಗಬೇಕು

ವಿಜಯ ದರ್ಪಣ ನ್ಯೂಸ್…… ಮಾನವನ ದುಡಿಮೆ ಬಸಿದ ಬೆವರಿನ ಬೆಣ್ಣೆಯಂತಾಗಬೇಕು ಮಧುಗಿರಿ, ಏ 5 : ತಾನು ಬದುಕುವ ಹಾದಿಯನ್ನು ನೋಡಿ ಮನುಕುಲವೇ ಮೆಚ್ಚುವಂತಿರಬೇಕು. ಮನುಕುಲದ ಮನಕ್ಕೆ ಮಸಿ ಬಳಿಯುವ ಜೀವನ ನಮ್ಮದಾಗಬಾರದು. ಜೀವನಕ್ಕೆ ಆದಾಯ ಬೇಕು. ಆದರೆ ಗಳಿಕೆಯೇ ಜೀವನವಾಗಬಾರದು. ಮಾನವನ ದಡಿಮೆ ಬಸಿದ ಬೆವರಿನ ಬೆಣ್ಣೆಯಂತಾಗಬೇಕು ಎಂದು ಟಿವಿವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಸಿ,ಕೃಷ್ಣಪ್ಪ ಹೇಳಿದರು. ಪಟ್ಟಣದ ಕಾಳಿಕಾಂಬ ದೇವಿಗೆ ವಿಶ್ವ ಶಂಕರ ಫೌಂಡೇಶನ್ ವತಿಯಿಂದ ನಡೆದ 87ನೇ ಬೆಳದಿಂಗಳ ಹುಣ್ಣಿಮೆ ಪೂಜಾ ಸತ್ಸಂಗದಲ್ಲಿ … Read more

ಮಾನವೀಯ ಗುಣದ ಅಧಿಕಾರಿ ಐ ಎಂ ವಿಠಲಮೂರ್ತಿ : ನಿರ್ದೇಶಕ ಟಿ ಎನ್ ಸೀತಾರಾಮ್

ವಿಜಯ ದರ್ಪಣ ನ್ಯೂಸ್…. ಮಾನವೀಯ ಗುಣದ ಅಧಿಕಾರಿ ಐ ಎಂ ವಿಠಲಮೂರ್ತಿ : ನಿರ್ದೇಶಕ ಟಿ ಎನ್ ಸೀತಾರಾಮ್ ಬೆಂಗಳೂರು: ಅನ್ಯಾಯವಾದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಒಂದು ವ್ಯವಸ್ಥೆ ಮಾಡಬೇಕು. ಅದನ್ನು ಐ.ಎಂ ವಿಠಲಮೂರ್ತಿ ಮಾಡುತ್ತಿದ್ದರು. ಕಾನೂನು ಯಾವಾಗಲೂ ನ್ಯಾಯದ ಕಡೆ ಇರಬೇಕು. ಕಾನೂನನ್ನು ಮನುಷ್ಯನ ಅಗತ್ಯಕ್ಕೆ ತಕ್ಕ ಹಾಗೆ ಸಂವಿಧಾನದ ಚೌಕಟ್ಟಿನಲ್ಲೇ ತಿರುಗಿಸುವ ಕಲೆ ಅವರಿಗಿತ್ತು. ಅವರು ಕಾನೂನು ಪಾಲಿಸುವ ಮಾನವೀಯ ಗುಣದ ಅಧಿಕಾರಿಯೂ ಆಗಿದ್ದರು ಎಂದು ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಂ ಹೇಳಿದ್ದಾರೆ. ನಗರದ … Read more

ಸಾಮಾಜಿಕ ಜಾಲತಾಣಗಳಿಂದ ಮಕ್ಕಳನ್ನು ರಕ್ಷಿಸಲು, ಅರಿವು ಕೇಂದ್ರ ಸಹಕಾರಿ

ಸಾಮಾಜಿಕ ಜಾಲತಾಣಗಳಿಂದ ಮಕ್ಕಳನ್ನು ರಕ್ಷಿಸಲು, ಅರಿವು ಕೇಂದ್ರ ಸಹಕಾರಿ ಶಿಡ್ಲಘಟ್ಟ : ರಜೆ ಬಂತೆಂದರೆ ಸಾಕು, ಮಕ್ಕಳನ್ನು  ಮನೆಗಳಲ್ಲಿ ಹಿಡಿದಿಟ್ಟುಕೊಳ್ಳಲು ಪೋಷಕರು ಹೆಣಗಾಡುತ್ತಾರೆ. ಅವರನ್ನು ಬಿಸಿಲಿನಿಂದ ರಕ್ಷಣೆ ಮಾಡುವುದಕ್ಕಾಗಿ, ಇವರನ್ನು ಸಮಾಧಾನ ಪಡಿಸಲು ಅನಿವಾರ್ಯವಾಗಿ ಮೊಬೈಲ್ ಕೊಟ್ಟು ಕೂರಿಸುತ್ತಾರೆ. ಮನೆಗಳಲ್ಲಿ ಉಳಿಯುವ ಮಕ್ಕಳು  ಮೊಬೈಲ್, ಯೂಟ್ಯೂಬ್, ಫೇಸ್ಟುಕ್, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗುತ್ತಾರೆ . ಇದರಲ್ಲಿ ಕಾಲಹರಣ ಮಾಡುವುದೇ ಹೆಚ್ಚು, ಇದರೊಂದಿಗೆ ಯಾರನ್ನು  ಬೆರೆಯದೇ ಒಂಟಿಯಾಗುವ ಮಕ್ಕಳನ್ನು ಮೊಬೈಲ್ ಚಟದಿಂದ ಬಿಡಿಸಿ ಅವರ ಮೆದುಳನ್ನು ಚುರುಕುಗೊಳಿಸಲು  … Read more

ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ : ರಾಮೇಶ್ವರ–ಸಿದ್ದೇಶ್ವರ ಜಾತ್ರೆಯಲ್ಲಿ ಸಿಎಂ ಹೇಳಿಕೆ

ವಿಜಯ ದರ್ಪಣ ನ್ಯೂಸ್…… ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ : ರಾಮೇಶ್ವರ–ಸಿದ್ದೇಶ್ವರ ಜಾತ್ರೆಯಲ್ಲಿ ಸಿಎಂ ಹೇಳಿಕೆ ಹೊಸಕೋಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ: ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದ ಶ್ರೀ ರಾಮೇಶ್ವರ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. … Read more