ರೈತರ ಫಲವತ್ತಾದ ಕೃಷಿ ಜಮೀನು ಬಲವಂತದಿಂದ ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಬಿಡೊಲ್ಲ : ರವಿಕೃಷ್ಣಾರೆಡ್ಡಿ

ವಿಜಯ ದರ್ಪಣ ನ್ಯೂಸ್….. ರೈತರ ಫಲವತ್ತಾದ ಕೃಷಿ ಜಮೀನು ಬಲವಂತದಿಂದ ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಬಿಡೊಲ್ಲ : ರವಿಕೃಷ್ಣಾರೆಡ್ಡಿ ಶಿಡ್ಲಘಟ್ಟ : ಕೆಐಎಡಿಬಿ ಬಳಿ ದೊಡ್ಡ ಪ್ರಮಾಣದ ಲ್ಯಾಂಡ್ ಬ್ಯಾಂಕ್ ಇದ್ದು, ಅದನ್ನು ಬಳಸಿಕೊಳ್ಳದೆ ಫಲವತ್ತಾದ ಕೃಷಿ ಭೂಮಿಯನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ ಕೈಗಾರಿಕೆಗಳು ಹಾಗೂ ಉದ್ಯೋಗ ಸೃಷ್ಟಿಗೆ ವಿರೋಧವಿಲ್ಲ, ಆದರೆ ರೈತರ ಬದುಕಿಗೆ ಧಕ್ಕೆಯಾಗುವ ಅಭಿವೃದ್ಧಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್ ಪಕ್ಷ)ಯ ಸಂಸ್ಥಾಪಕ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪ‌ ಮಾಡಿದರು. ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ … Read more

ಬೋವಿ ಸಮಾಜದ ಫಲಾನುಭವಿಗಳಿಗೆ ನಿಗಮದಿಂದ ಹೊಲಿಗೆ ಯಂತ್ರ ವಿತರಿಸಿದ ಸಚಿವ ಡಾಕ್ಟರ್ ಎಸ್ ಯತೀಂದ್ರ ಸಿದ್ದರಾಮಯ್ಯ

ವಿಜಯ ದರ್ಪಣ ನ್ಯೂಸ್…. ಬೋವಿ ಸಮಾಜದ ಫಲಾನುಭವಿಗಳಿಗೆ ನಿಗಮದಿಂದ ಹೊಲಿಗೆ ಯಂತ್ರ ವಿತರಿಸಿದ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಾಂಡವಪುರ ಆಗಸ್ಟ್ 17 ಮೈಸೂರಿನ ಬಾಬು ಜಗಜೀವನ ರಾಂ ಸಭಾಂಗಣದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಮತ್ತು ಇನ್ನಿತರಸವಲತ್ತು ಗಳನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ರಾಮಯ್ಯನವರು ವಿತರಿಸಿ ಕಾರ್ಯಕ್ರಮ ಉದ್ಘಾಟಿಸಿದರು ಸಚಿವರು ಅರ್ಹ ಯುವತಿಯರಿಗೆ ಉಚಿತ ಟೈಲರಿಂಗ್ ಯಂತ್ರೋಪಕರಣಗಳನ್ನು ವಿತರಿಸಿ. ಮಾತನಾಡಿದ ಸಚಿವರು ಸ್ವಾವಲಂಬನೆ ಹಾಗೂ ಸ್ವಯಂ ಉದ್ಯೋಗಕ್ಕೆ … Read more

ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ, ಮತ್ತೋರ್ವಕಾರ್ಮಿಕನಿಗೆ ಗಂಭೀರ ಗಾಯ

ವಿಜಯ ದರ್ಪಣ ನ್ಯೂಸ್…. ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ, ಮತ್ತೋರ್ವಕಾರ್ಮಿಕನಿಗೆ ಗಂಭೀರ ಗಾಯ ವಿರಾಜಪೇಟೆ: ತಾಲೂಕಿನ ಮಾಲ್ದಾರೆ ಸಮೀಪದ ಘಟ್ಟದಳ ಬಳಿಯ ಕಾಫಿ ತೋಟದಲ್ಲಿ ಕಾಡಾನೆ ದಾಳಿಗೆ ಹೊರ ರಾಜ್ಯದ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮೃತರನ್ನು ಗೋಪಾಲ್ (44) ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಜಾದವ್ (26) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ವೇಳೆ ಅರಣ್ಯದಂಚಿನಿಂದ ಕಾಡಾನೆ … Read more

ವಿಜೃಂಭಣೆಯಿಂದ ನಡೆದ ಬಸವ ಪಂಚಮಿ ಪೂಜಾ ಕಾರ್ಯಕ್ರಮ

ವಿಜಯ ದರ್ಪಣ ನ್ಯೂಸ್…. ವಿಜೃಂಭಣೆಯಿಂದ ನಡೆದ ಬಸವ ಪಂಚಮಿ ಪೂಜಾ ಕಾರ್ಯಕ್ರಮ ವಿಜಯಪುರ ಪಟ್ಟಣದಲ್ಲಿ ರಾಷ್ಟ್ರೀಯ ಬಸವದಳ ನಗರ್ತ ಯುವಕ ಸಂಘ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ನಗರ್ತ ಮಹಿಳಾ ಸಂಘ ಶ್ರೀ ಸರೋವರ ಗಣಪತಿ ಪತಾಂಜಲಿ ಯೋಗ ಶಿಕ್ಷಣ ಕೋರಮಂಗಲ ರುದ್ರಪ್ಪನವರ ಟ್ರಸ್ಟ್ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶ್ರೀ ನಗರೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಕ್ರಾಂತಿಯೋಗಿ ಬಸವಣ್ಣನವರ 831ನೆಯ ಲಿಂಗೈಕ್ಯ ಸಂಸ್ಕರಣೆಯ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ನಿರಂಜನ … Read more

ಹಸಿದವರಿಗೆ ಅನ್ನ ನೀಡುವ ಮಹತ್ವದ ಹೆಜ್ಜೆ: ದಾಸೋಹ ಕುಟೀರ ಆರಂಭ

ವಿಜಯ ದರ್ಪಣ ನ್ಯೂಸ್….. ಹಸಿದವರಿಗೆ ಅನ್ನ ನೀಡುವ ಮಹತ್ವದ ಹೆಜ್ಜೆ: ದಾಸೋಹ ಕುಟೀರ ಆರಂಭ ತಾವರೆಕೆರೆ : ಕರುನಾಡ ಪ್ರಜಾ ಸೇವಾ ಟ್ರಸ್ಟ್ ವತಿಯಿಂದ ಹೊಸಕೋಟೆ ಮಾಜಿ ಶಾಸಕರಾಗಿದ್ದ ದಿವಂಗತ ಚನ್ನಬೈರೇಗೌಡ ಅವರ ಜ್ಞಾಪಕಾರ್ಥವಾಗಿ, ಎಚ್.ಎಂ. ಸುಬ್ಬರಾಜು ಅವರ ನೇತೃತ್ವದಲ್ಲಿ ಹೊಸಕೋಟೆ ನಗರದ ತಾಲೂಕು ಕಚೇರಿ ಆವರಣದಲ್ಲಿ ದಾಸೋಹ ಕುಟೀರ ವನ್ನು ಆರಂಭಿಸಲಾಯಿತು. ತಾಲೂಕು ಕಚೇರಿಗೆ ಪ್ರತಿನಿತ್ಯ ವಿವಿಧ ಸರ್ಕಾರಿ ಕೆಲಸ-ಕಾರ್ಯಗಳಿಗಾಗಿ ದೂರದ ಊರುಗಳಿಂದ ಆಗಮಿಸುವ ಸಾರ್ವಜನಿಕರು ಕೆಲವೊಮ್ಮೆ ಊಟದ ವ್ಯವಸ್ಥೆಯಿಲ್ಲದೆ ಹಸಿವಿನಿಂದ ತೆರಳುವ ಪರಿಸ್ಥಿತಿ ಎದುರಾಗುತ್ತದೆ. … Read more

ಶ್ರೀ ಅಮ್ಮನಾಗಮ್ಮ ದೇವಾಲಯದಲ್ಲಿ ನಾಗರಪಂಚಮಿ ಹಬ್ಬ, ಭಕ್ತಾಧಿಗಳಿಂದ ಹಾಲಿನ ಅಭಿಷೇಕ

ವಿಜಯ ದರ್ಪಣ ನ್ಯೂಸ್…. ಶ್ರೀ ಅಮ್ಮನಾಗಮ್ಮ ದೇವಾಲಯದಲ್ಲಿ ನಾಗರಪಂಚಮಿ ಹಬ್ಬ, ಭಕ್ತಾಧಿಗಳಿಂದ ಹಾಲಿನ ಅಭಿಷೇಕ ಗಾಂಧಿನಗರ: ಓಕುಳಿಪುರಂ ನಲ್ಲಿರುವ ಶ್ರೀ ಅಮ್ಮ ನಾಗಮ್ಮ ದೇವಾಲಯದಲ್ಲಿ ನಾಗರ ಪಂಚಮಿ ಮತ್ತು ವಾರ್ಷಿಕೋತ್ಸವ ಪ್ರಯುಕ್ತ ವಿಶೇಷಪೂಜೆ ಸಮಾರಂಭ. ದೇವಾಲಯದ ಸಂಸ್ಥಾಪಕರಾದ ಆರ್.ಮೋಹನ್ , ಶ್ರೀಮತಿ ಅನಿತರವರು ನಾಗಮ್ಮ ದೇವಿ ವಿಶೇಷಪೂಜೆ ಸಲ್ಲಿಸಿ, ನಾಗರಕಲ್ಲು, ಹುತ್ತಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ನಾಗರ ಪಂಚಮಿ ಅಚರಿಸಿದರು, ನೂರಾರು ಭಕ್ತರುಗಳು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಆರ್.ಮೋಹನ್ ರವರು ಮಾತನಾಡಿ ಸಕಲ, ಸಂಕಷ್ಟ ನಿವಾರಣೆ … Read more

ಹೊಸಕೋಟೆ ತಾಲೂಕು ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಸಿ. ನಾಗರಾಜ್ ಅವಿರೋಧ ಆಯ್ಕೆ

ವಿಜಯ ದರ್ಪಣ ನ್ಯೂಸ್…… ಹೊಸಕೋಟೆ ತಾಲೂಕು ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಸಿ. ನಾಗರಾಜ್ ಅವಿರೋಧ ಆಯ್ಕೆ ತಾವರೆಕೆರೆ : ಹೊಸಕೋಟೆ ತಾಲೂಕು ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಚನ್ನಸಂದ್ರ ಸಿ. ನಾಗರಾಜ್ ಅವರು ಅವಿರೋಧವಾಗಿ ಆಯ್ಕೆಯಾದರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತಾವರೆಕೆರೆ ಶ್ರೀಕಾಂತ್ ಖಜಾನ್ಸಿಯಾಗಿ ಚಿಮಾಂಡಹಳ್ಳಿ ರಾಜೇಂದ್ರ ಹಾಗೂ ಸಹಾಯಕ ಕಾರ್ಯದರ್ಶಿಯಾಗಿ ಹೊಸಕೋಟೆ ಗ್ಯಾಸ್ ಮಂಜುನಾಥ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಚನ್ನಸಂದ್ರ ಸಿ. ನಾಗರಾಜ್ ಅವರು, ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ … Read more

ಸ್ಯಾಮ್‌ಸಂಗ್ ಭಾರತದ ಟಾಪ್ 40 ಯುವ ಆವಿಷ್ಕಾರಕರನ್ನು ಘೋಷಿಸಿದೆ

ವಿಜಯ ದರ್ಪಣ ನ್ಯೂಸ್…. ಸ್ಯಾಮ್‌ಸಂಗ್ ಭಾರತದ ಟಾಪ್ 40 ಯುವ ಆವಿಷ್ಕಾರಕರನ್ನು ಘೋಷಿಸಿದೆ ಬೆಂಗಳೂರು, 17 ಆಗಸ್ಟ್, 2026: ಸ್ಯಾಮ್‌ಸಂಗ್ ಭಾರತ ಇಂದು ತನ್ನ ಪ್ರಮುಖ ಯುವ ಆವಿಷ್ಕಾರ ಕಾರ್ಯಕ್ರಮವಾದ ಸ್ಯಾಮ್‌ಸಂಗ್ ಸಾಲ್ವ್ ಫಾರ್ ಟುಮಾರೋನ ಟಾಪ್ 40 ಸೆಮಿಫೈನಲ್ ತಂಡಗಳನ್ನು ಘೋಷಿಸಿದೆ. ಈ ಕಾರ್ಯಕ್ರಮವು ಯುವಜನರಿಗೆ ತಮ್ಮ ಸುತ್ತಮುತ್ತಲಿನ ಸವಾಲುಗಳನ್ನು ಗುರುತಿಸಿ, ಮಾರ್ಗದರ್ಶನ, ತಂತ್ರಜ್ಞಾನ, ಮೂಲಮಾದರಿ ನಿರ್ಮಾಣ ಮತ್ತು ಪ್ರಾಯೋಗಿಕ ಕಲಿಕೆಯ ಮೂಲಕ ತಮ್ಮ ಆಲೋಚನೆಗಳನ್ನು ಪರಿಹಾರಗಳಾಗಿ ಪರಿವರ್ತಿಸಲು ವೇದಿಕೆಯನ್ನು ಒದಗಿಸುತ್ತದೆ. 2026ರಲ್ಲಿ ಭಾರತದಲ್ಲಿ ತನ್ನ … Read more

ಪ್ರತಿಭೆಗೆ ಮಾನದಂಡ ಜಾತಿಯಾಗಬಾರದು : ‌ಪ್ರಾಧ್ಯಾಪಕ ಡಾ ಸಿಸಿರಾ

ವಿಜಯ ದರ್ಪಣ ನ್ಯೂಸ್…. ಪ್ರತಿಭೆಗೆ ಮಾನದಂಡ ಜಾತಿಯಾಗಬಾರದು : ‌ಪ್ರಾಧ್ಯಾಪಕ ಡಾ ಸಿಸಿರಾ ಬೆಂಗಳೂರು : ಪ್ರತಿಭೆ ಯಾರ ಸ್ವತ್ತೂ ಅಲ್ಲ, ಅದು ಜಾತಿ ಮತ ಧರ್ಮ ಮೀರಿದ್ದು, ಪಂಪನಿಂದ ಹಿಡಿದು ಕುವೆಂಪು ನಂತರದಲ್ಲೂ ಜಾತೀಯತೆಯು ತನ್ನ ಮಿತಿಯನ್ನು ಬೇರೆ ಬೇರೆ ರೂಪದಲ್ಲಿ ಟಿಸಿಲೊಡೆದು ಬೆಳೆಯುತ್ತಲೇ ಇದೆ, ಇದು ಸಮಸಮಾಜದ ಕನಸು ಕಂಡ ದಾರ್ಶನಿಕರ ತತ್ವ ಸಿದ್ಧಾಂತಗಳಿಗೆ ಮಾಡಿದ ಅವಮಾನವೆಂದು ಸಾಹಿತಿ ಹಾಗೂ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ) ವಿಷಾದ ವ್ಯಕ್ತಪಡಿಸಿದರು. ಪತಂಜಲಿ ಯೋಗಾಶ್ರಮ … Read more

ನಾಗರಪಂಚಮಿ ಹಬ್ಬದ ಸಂಭ್ರಮ

ವಿಜಯ ದರ್ಪಣ ನ್ಯೂಸ್…… ನಾಗರಪಂಚಮಿ ಹಬ್ಬದ ಸಂಭ್ರಮ ಆಷಾಢ ಕಳೆದು ಎಲ್ಲ ಹಬ್ಬ ಹರಿದಿನಗಳಿಗೆ ಮುನ್ನುಡಿಯಿಡುವುದು ನಾಗರ ಪಂಚಮಿ ಹಬ್ಬ, ಈ ಹಬ್ಬವು ಮುಂದೆ ಬರಲಿರುವ ಸಾಲು ಸಾಲು ಹಬ್ಬಗಳಿಗೆ ಮೊದಲ ಮೆಟ್ಟಿಲು, ಹೆಂಗಳೆಯರು ಮಕ್ಕಳು ಸಂಭ್ರಮದಿಂದ ಸಂಭ್ರಮಿಸುವ ಹಬ್ಬ, ಹಿಂದೂ ಧರ್ಮದಲ್ಲಿ ನಾಗದೇವರಿಗೆ ವಿಶೇಷ ಮಹತ್ವವಿದೆ. ನಾಗರ ಪಂಚಮಿ ಹಬ್ಬದಂದು ಸಂತೋಷ ಸಮೃದ್ಧಿಯ ಬದುಕಿಗಾಗಿ ಹೊಲಗಳಲ್ಲಿನ ಬೆಳೆಗಳ ರಕ್ಷಣೆಗಾಗಿ ಹಾವುಗಳನ್ನು ಪೂಜಿಸಲಾಗುತ್ತದೆ. ನಾಗದೇವರಿಗೆ ಮನುಜರಿಗೆ ಅವಿನಾಭಾವ ಸಂಬಂಧ , ಜಗತ್ತಿನೆಲ್ಲೆಡೆ ಬೇರೆ ಬೇರೆಯ ರೀತಿಯಿಂದ ಮಾಡಲಾಗುತ್ತದೆ. … Read more