ಶ್ರೀ ಕನಕದಾಸ ವಿದ್ಯಾ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲು ಸಹಕಾರ ನೀಡಿ:  ಡಿ ಕಾಳೇಗೌಡ

ವಿಜಯ ದರ್ಪಣ ನ್ಯೂಸ್…..

ದಿವಂಗತ ರಾಚಯ್ಯನವರು ಕಟ್ಟಿ ಬೆಳೆಸಿರುವ 

ಶ್ರೀ ಕನಕದಾಸ ವಿದ್ಯಾ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲು ಸಹಕಾರ ನೀಡಿ:  ಡಿ ಕಾಳೇಗೌಡ

ತಾಂಡವಪುರ ಸೆಪ್ಟೆಂಬರ್ 21 ಮಾಜಿ ಶಾಸಕ ದಿವಂಗತ ಎನ್ ರಾಚಯ್ಯ ನವರು ಕಟ್ಟಿ ಬೆಳೆಸಿರುವ ಶ್ರೀ ಕನಕದಾಸ ವಿದ್ಯಾಸಂಸ್ಥೆಯನ್ನು  ನಂಜನಗೂಡು ತಾಲೂಕಿನಲ್ಲಿ ಇನ್ನು ಎತ್ತರಕ್ಕೆ ಬೆಳೆಸಲು ಸಹಕಾರ ನೀಡಿ ಎಂದು ಶ್ರೀ ಕನಕದಾಸ ವಿದ್ಯಾ ಸಂಸ್ಥೆಯ ಟ್ರಸ್ಟಿನ ಖಜಾಂಚಿ ಡಿ ಕಾಳೇಗೌಡರು ಕರೆ ನೀಡಿದರು

ನಂಜನಗೂಡು ತಾಲೂಕಿನ ಶ್ರೀ ಕನಕದಾಸ ಸಾರ್ವಜನಿಕವಿದ್ಯಾ ಸಂಸ್ಥೆ ಸಂಸ್ಥಾಪಕ ಮಾಜಿ ಶಾಸಕ ಎನ್ ರಾಜಯ್ಯ ರಾಮಮ್ಮ ರವರ ಪುಣ್ಯ ಸ್ಮರಣೆ ಅಂಗವಾಗಿ ನಂಜನಗೂಡಿನ ಕನಕ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಳೇಗೌಡರು ರಾಚಯ್ಯನವರು ಮುಂದಿನ ಪೀಳಿಗೆಗೆ ಅನುಕೂಲವಾಗಲಿ ಎಂದು ನಂಜನಗೂಡಿನಲ್ಲಿ ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಿ ತಾಲೂಕಿನ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಮಾಡಿಕೊಡಿದ್ದಾರೆ ಅವರ ಮಾರ್ಗದರ್ಶನದಂತೆ ನಾವು ಕೂಡ ವಿದ್ಯ ಸಂಸ್ಥೆಯನ್ನು ಬೆಳೆಸಲು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿ ಈ ಶಿಕ್ಷಣ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡುಯಲು ಶ್ರಮ ವಹಿಸೋಣ ಎಂದರು

ಇದೇ ವೇಳೆ ವಿದ್ಯಾ ಸಂಸ್ಥೆ ಆಡಳಿತ ಮಂಡಳಿಯ ಕುರಟ್ಟಿ ಬಸವರಾಜು ರವರು ಮಾತನಾಡಿ ಇದೆ ತಿಂಗಳು 22 ರಿಂದ ಸರ್ಕಾರ ಶೈಕ್ಷಣಿಕ ಸಾಮಾಜಿಕ ಜಾತಿ ಸಮೀಕ್ಷೆಯನ್ನು ಮಾಡಲು ಮುಂದಾಗಿದ್ದು ತಮ್ಮ ತಮ್ಮ ಗ್ರಾಮಗಳಲ್ಲಿ ಸಮೀಕ್ಷೆ ಮಾಡಲು ಬರುವ ಅಧಿಕಾರಿಗಳಿಗೆ ತಮ್ಮ ದಾಖಲೆಗಳನ್ನು ಸರಿಯಾಗಿ ನೀಡಿ ಕುರುಬ ಸಮಾಜದವರು ಕುರುಬ ಎಂದು ನೊಂದಾಯಿಸಿ ಇತರೆ ಸಮಾಜದವರು ಸಹ ಅವರವರ ಸಮುದಾಯದ ಹೆಸರನ್ನು ನೋಂದಾಯಿಸಬೇಕು ಎಂದು ಮನವಿ ಮಾಡಿದರು

ಇದೇ ವೇಳೆ ದಿವಂಗತ ಮಾಜಿ ಶಾಸಕ ಎನ್ ರಾಚಯ್ಯ ರಾಮಮ್ಮ ರವರ ಸ್ವರ್ಣಾರ್ಥ ನಂಜನಗೂಡು ತಾಲೂಕಿನ ವಿವಿಧ ಗ್ರಾಮಗಳ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಆಟೋ ಸ್ಪರ್ಧೆ ಏರ್ಪಡಿಸಿ ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೆನಪಿನ ಕಾಣಿಕೆ ನೀಡಿ ಶಿಕ್ಷಣ ಸಂಸ್ಥೆಯಿಂದ ಪ್ರೋತ್ಸಾಹ ನೀಡಲಾಯಿತು

ಕಾರ್ಯಕ್ರಮದಲ್ಲಿ ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾ ಸಂಸ್ಥೆಯ ಟ್ರಸ್ಟಿನ ಖಜಾಂಚಿ ಕಾಳೇಗೌಡ ಆಡಳಿತ ಮಂಡಳಿಯ ಕುರಿಹುಂಡಿ ಬಸವರಾಜು ಕಾರ್ಯದರ್ಶಿ ಹುಚ್ಚೇಗೌಡ ಸದಸ್ಯ ಕೆಎಸ್ ಹುಂಡಿ ಎನ್ ನಂಜಯ್ಯ ಚಿನ್ನದ ಗುಡಿ ಹುಂಡಿ ಬಸವೇಗೌಡ ಮಹಾದೇವಯ್ಯ ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ ಕಾರ್ಯದರ್ಶಿ ಬಸವರಾಜು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನೇರಳೆ ಮಹೇಶ್ ಕುಪ್ಪರವಳ್ಳಿ ಚಂದ್ರಶೇಖರ್ ಶಿವ ಮಲ್ಲಯ್ಯ ಮುಖಂಡರಾದ ಬೀರೇಗೌಡ ಲೋಕೇಶ ಸೇರದಂತೆ ಶಿಕ್ಷಣ ಸಂಸ್ಥೆಯ ಶಿಕ್ಷಕರು ವಿದ್ಯಾರ್ಥಿಗಳು ಸಮಾಜದ ಮುಖಂಡರುಗಳು ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು