ರಸ್ತೆಯ ಡಾಂಬರೀಕರಣಕ್ಕೆ ಒತ್ತಾಯಿಸಿ ಮುಳ್ಳೂರು ಗ್ರಾಮಸ್ಥರಿಂದ ಪ್ರತಿಭಟನೆ
ವಿಜಯ ದರ್ಪಣ ನ್ಯೂಸ್…
ರಸ್ತೆಯ ಡಾಂಬರೀಕರಣಕ್ಕೆ ಒತ್ತಾಯಿಸಿ ಮುಳ್ಳೂರು ಗ್ರಾಮಸ್ಥರಿಂದ ಪ್ರತಿಭಟನೆ

ತಾಂಡವಪುರ ನವಂಬರ್ 12 ಮೈಸೂರು ಜಿಲ್ಲೆ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಮುಳ್ಳೂರು ಗ್ರಾಮದ ಗೇಟಿನಿಂದ ಮುಳ್ಳೂರು ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆ ಸುಮಾರು 10 ವರ್ಷಗಳಿಂದ ಡಾಂಬರೀಕರಣ ಇಲ್ಲದೆ ಹದಗೆಟ್ಟಿದೆ ಇದನ್ನು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ , ಮುಳ್ಳೂರು ಗ್ರಾಮದ ಯುವಕರು ಬಿ ಆರ್ ಅಂಬೇಡ್ಕರ್ ಅವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆದಷ್ಟು ಬೇಗನೆ ಈ ರಸ್ತೆಯನ್ನು ಸರಿಪಡಿಸಬೇಕು ಎಂದು ಪ್ರತಿಭಟನೆಕಾರರು ಮನವಿ ಮಾಡಿದರು
ಇದೇ ವೇಳೆ ಮಾತನಾಡಿದ ಮುಖಂಡ ಪ್ರಕಾಶ್ ರವರು ಕಳೆದ ಹತ್ತು ವರ್ಷಗಳಿಂದ ಡಾಂಬರೀಕರಣ ಮಾಡಿಲ್ಲ ಚುನಾಯಿತ ಪ್ರತಿನಿಧಿಗಳು ನಿರ್ಲಕ್ಷೆ ತೋರುತ್ತಿದ್ದಾರೆ ಈ ರಸ್ತೆಯಲ್ಲಿ ಪ್ರತಿದಿನ ಮುಳ್ಳೂರು ಗ್ರಾಮಸ್ಥರು ಕುಳ್ಳ ಕನಹುಂಡಿ ಗ್ರಾಮಸ್ಥರು ಹೊರಳವಾಡಿ ಗ್ರಾಮಸ್ಥರು ವಿದ್ಯಾರ್ಥಿಗಳು ಶಾಲೆಯ ಬಸ್ಸುಗಳು ಎತ್ತಿನ ಗಾಡಿಗಳು ಕಾಲ್ನಡಿಗೆಯಿಂದ ಓಡಾಡುವ ಸಾರ್ವಜನಿಕರು ಈ ರೀತಿ ಪ್ರತಿದಿನ ಓಡಾಡುತ್ತಾರೆ ಸಂಚಾರ ಮಾಡುವಾಗ ಹೆಚ್ಚಿನ ಗುಂಡಿಗಳು ಇರುವುದರಿಂದ ಆಯತಪ್ಪಿ ಬಿದ್ದು ಹಲವಾರು ಬಾರಿ ಕಾಲು ಕೈಗಳು ಮುರಿದುಕೊಂಡಿರುವ ಪ್ರಸಂಗಗಳು ನಡೆದಿದೆ ದ್ವಿಚಕ್ರ ವಾಹನಗಳು ಓಡಾಡಲು ಅರ ಸಾಹಸ ಪಡಬೇಕಾಗುತ್ತದೆ ಬೆಳಗಿನ ಸಮಯದಲ್ಲಿ ಕಷ್ಟಪಟ್ಟು ಓಡಾಡುತ್ತವೆ ರಾತ್ರಿಯ ಸಮಯದಲ್ಲಿ ಓಡಾಡಲು ಕಷ್ಟಕರವಾಗಿದೆ ಇದಕ್ಕೆ ಸಂಬಂಧ ಪಟ್ಟಂತೆ 10 ವರ್ಷದಿಂದ ಪ್ರಯತ್ನ ಪಡುತ್ತಿದ್ದೇವೆ ಇನ್ನು ಕೂಡ ಈ ಕಡೆ ಡಾಂಬರೀಕರಣ ಮಾಡುವ ಗೋಜಿಗೆ ಹೋಗಿಲ್ಲ ಚುನಾಯಿತ ಪ್ರತಿನಿಧಿಗಳು ಇದಕ್ಕೆ ಸಂಬಂಧಪಟ್ಟಂತೆ 10 ವರ್ಷದಿಂದ ಮನವಿ ಮಾಡುತ್ತಾ ಬಂದಿದ್ದೇವೆ ಪ್ರಯೋಜನ ಇಲ್ಲದಂತಾಗಿದೆ ನಾವು ವಿಧಿ ಇಲ್ಲದೆ ಹೋರಾಟ ಪ್ರಯತ್ನ ಮಾಡುತ್ತಿದ್ದೇವೆ . ಸಂಬಂಧಪಟ್ಟ ಶಾಸಕರು ಮತ್ತು ಸಂಸದರು ಹಾಗೂ ಉಸ್ತುವಾರಿ ಸಚಿವರಾದ ಡಾಕ್ಟರ್ ಎಚ್ ಸಿ ಮಾದೇವಪ್ಪನವರು ಅಧಿಕಾರಿಗಳು ತಕ್ಷಣ ಸ್ಪಂದಿಸಿ ಡಾಂಬರೀಕರಣ ಮಾಡಿ ಉತ್ತಮ ರಸ್ತೆಯಾಗಿ ಮಾಡಿಕೊಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಆದಷ್ಟು ಬೇಗ ರಸ್ತೆ ಡಾಂಬರೀಕರಣ ಆಗಬೇಕು ಇಲ್ಲದಿದ್ದರೆ ಎಲ್ಲಾ ಗ್ರಾಮದಲ್ಲಿ ಕುಳಿತು ಚರ್ಚಿಸಿ ಶಾಸಕರು ಸಂಸದರು ಉಸ್ತುವಾರಿ ಸಚಿವರ ಮನೆಗೆ ಮುತ್ತಿಗೆ ಹಾಕುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು
ಪ್ರತಿಭಟನೆಯಲ್ಲಿ ಗ್ರಾಮದ ಯಜಮಾನರುಗಳಾದ ಸ್ವಾಮಿ ಮರಿ ನಂಜಯ್ಯ ಪ್ರಕಾಶ ಸುನಿಲ್ ಕುಮಾರ್ ಸೇರಿದಂತೆ ಗ್ರಾಮದ ಮುಖ್ಯಸ್ಥರಾದ ವರದರಾಜು ಸಿದ್ದರಾಜು ಸುರೇಶ್ ಪ್ರದೀಪ್ ಕುಮಾರ್ ರಾಮಯ್ಯ ಶಿವಣ್ಣ ಸಿದ್ದರಾಜು ನಂಜುಂಡ ಸುರೇಶ ಶಿವಮಲ್ಲು ಅಪ್ಪಣ್ಣ ಸುರೇಂದ್ರ ಕಾರ್ತಿಕ್ ಕುಮಾರ್ ಸೇರಿದಂತೆ ಯುವಕರು ಹಾಜರಿದ್ದರು
