ಎಲ್ಲಾ ಧರ್ಮ ಪ್ರೀತಿಸುವ  ಗೌರವಿಸುವ ಮನೋಭಾವ ಮಕ್ಕಳಲ್ಲಿ ಬೆಳೆಸಬೇಕು : ಆಲೂರು ಹನುಮಂತರಾಯಪ್ಪ

ವಿಜಯ ದರ್ಪಣ ನ್ಯೂಸ್….

ಎಲ್ಲಾ ಧರ್ಮ ಪ್ರೀತಿಸುವ  ಗೌರವಿಸುವ ಮನೋಭಾವ ಮಕ್ಕಳಲ್ಲಿ ಬೆಳೆಸಬೇಕು : ಆಲೂರು ಹನುಮಂತರಾಯಪ್ಪ

ಹಿರಿಯೂರು: ನಮ್ಮ ಭಾರತದೇಶವು ಸರ್ವ ಧರ್ಮಗಳ ಸಮನ್ವಯತೆಯನ್ನು ಕಾಯ್ದುಕೊಂಡಿರುವ ದೇಶವಾಗಿದ್ದು, ಎಲ್ಲಾ ಧರ್ಮಗಳನ್ನು ಹಾಗೂ ಧರ್ಮೀ ಯರನ್ನು ಗೌರವಿಸುತ್ತದೆ, ಈ ನಿಟ್ಟಿನಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಹೀಗೆ ಎಲ್ಲಾ ಧರ್ಮಗಳನ್ನು ಪ್ರೀತಿಸುವ ಹಾಗೂ ಗೌರವಿಸುವ ಮನೋಭಾವ ಮಕ್ಕಳಲ್ಲಿ ಬೆಳೆಸಬೇಕೆಂಬ ಉದ್ದೇಶ ದಿಂದ ನಮ್ಮ ಶಾಲೆಯಲ್ಲಿ ಇಂದು ಕ್ರಿಸ್‌ಮಸ್‌ ಸಂಭ್ರಮಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ವಾಣಿ ವಿಲಾಸ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಹೇಳಿದರು.

ನಗರದ ವಾಣಿವಿಲಾಸ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಕ್ರಿಸ್‌ಮಸ್ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಲುಬೆ ಏರುವಾಗಲೂ ನನ್ನನ್ನು ಶಿಲುಬೆಗೇರಿಸುವ ಜನರಿಗೆ ಕ್ಷಮೆ ನೀಡೆಂದು ಭಗವಂತನಲ್ಲಿ ಪ್ರಾರ್ಥಿಸಿದ ಏಸುಕ್ರಿಸ್ತನ ಸಹನೆ, ಸಂಯಮ, ತಾಳ್ಮೆ ಇಂದಿನ ವಿದ್ಯಾರ್ಥಿಗಳಿಗೆ ಮಾದರಿ ಯಾಗಿದ್ದು, ವಿದ್ಯಾರ್ಥಿಗಳು ಏಸು ಕ್ರಿಸ್ತನ ಜೀವನ ಹಾಗೂ ಬೋಧನೆಗ ಳನ್ನು ತಿಳಿದು, ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಿ.ಆರ್.ಸತೀಶ್ ಬಾಬು, ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕಿ ಸೌಮ್ಯ, ವ್ಯವಸ್ಥಾಪಕಿ ವಸಂತಾ, ಆಡಳಿತಾಧಿಕಾರಿ ಹೇಮಲತಾ, ಕೋ- ಆರ್ಡಿನೇಟರ್ ರಚನ, ಕಾರ್ಯಕ್ರಮ ಸಂಯೋಜಕಿ ಭಾಗ್ಯ, ಜಯಸುಧಾ, ಪೂಜಾ, ಶಿವ ರಾಜ್, ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.