ಎಸ್ ಎಸ್ ಎಲ್ ಸಿ ಮಕ್ಕಳಿಗೆ ಆಸರೆಯಾದ ಆಸರೆ ಪುಸ್ತಕ ವಿತರಿಸಿದ ಶಾಸಕ ದರ್ಶನ್ ಧ್ರುವ ನಾರಾಯಣ್
ವಿಜಯ ದರ್ಪಣ ನ್ಯೂಸ್…..
ಆಸರೆ” ಪುಸ್ತಕ ಹಾಗೂ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಆಸರೆಯಾದ ಆಸರೆ ಪುಸ್ತಕ ವಿತರಿಸಿದ ಶಾಸಕ ದರ್ಶನ್ ಧ್ರುವ ನಾರಾಯಣ್

ತಾಂಡವಪುರ ಡಿಸೆಂಬರ್ 27 ಡೋಲು ನಗಾರಿಗಳೊಂದಿಗೆ ಶಾಸಕರನ್ನು ಸ್ವಾಗತ ಕೋರಿದ ಪ್ರತಿಭಾ ಕಾರಂಜಿ ಮಕ್ಕಳು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಲಿಕೆಗೆ ಉತ್ತೇಜನ್ನು ನೀಡುವ ಉದ್ದೇಶದಿಂದ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಆಸರೆ ಪುಸ್ತಕ ಆಸರೆಯಾಗಿದೆ ಎಂದು ಶಾಸಕ ದರ್ಶನ್ ದ್ರುವ ನಾರಾಯಣ ಅಭಿಪ್ರಾಯ ಪಟ್ಟರು.
ಇಂದು ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವಸರ್ಕಾರಿ ಆದರ್ಶ ಶಾಲೆಯಲ್ಲಿ 2025 26 ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಸರ್ಕಾರ ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಹಾಗೂ ಮಕ್ಕಳಲ್ಲಿರುವ ಕಲಿಕೆಯನ್ನು ಹೊರಹಾಕಲು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ಮಕ್ಕಳಿಗೆ ಪ್ರೋತ್ಸಾಹ ನೀಡಿತ್ತಿರುವುದು ಸಂತಸವಾಗಿದೆ ಮಕ್ಕಳಲ್ಲಿರುವಂತ ಪ್ರತಿಭೆಗಳನ್ನು ಶಾಲೆಗಳಲ್ಲಿ ಶಿಕ್ಷಕರು ಗುರುತಿಸುವ ಪ್ರಯತ್ನ ಮಾಡುತ್ತಿದ್ದಾರೆ ಇಂತಹ ಮಕ್ಕಳಿಗೆ ಮನೆಯಲ್ಲಿ ಪೋಷಕರು ಸಹಕರಿಸಿದರೆ ಮಕ್ಕಳು ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಕೀರ್ತಿ ತರುತ್ತಾರೆಂದು ತಿಳಿಸಿದರು. ಇದೇ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಲಿಕೆಯಲ್ಲಿ ಕಡಿಮೆ ಅಂಕ ಗಳಿಸುವ ಮಕ್ಕಳಿಗೆ ಪಾಸಿಂಗ್ ಮಾರ್ಕ್ಸ್ ಉದ್ದೇಶದಿಂದ ಆಸರೆ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಇಂತಹ ಹಿಂದುಳಿದ ಮಕ್ಕಳಿಗೆ ಪುಸ್ತಕಗಳನ್ನು ನೀಡುವುದರಿಂದ ಅವರು ಪುನರ್ಮನ ಮಾಡುವುದರಿಂದ ತಾಲೂಕಿಗೆ ನೂರರಷ್ಟು ನೂರು ಫಲಿತಾಂಶ ತರಲು ಸಾಧ್ಯವಾಗುತ್ತದೆ ಇದಕ್ಕೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಂಡ ಕೈಜೋಡಿಸಿರುವುದು ಲಾಗನ್ಯವಾಗಿದೆ ಇದಕ್ಕೆ ನಮ್ಮ ಸಹಕಾರವು ಇದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ನೋಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ ಕಳೆದ ಸಾಲಿನಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಕಲಿಕೆಗೆ ಉತ್ತಮವಾಗಲಿ ಎಂದು ಆಸರೆ ಎಂಬ ಪುಸ್ತಕವನ್ನು ತಂದಿರುವುದರಿಂದ ಕಲಿಕಾ ಮಟ್ಟ ಹಾಗೂ ಫಲಿತಾಂಶ ಮಟ್ಟ ಉತ್ತಮವಾಗಿದೆ ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಂತರದಲ್ಲಿ ಪೋಷಕರೊಬ್ಬರು ಫೋನ್ ಕರೆ ಮಾಡಿ ತಾವು ನೀಡಿದ ಆಸರೆ ಪುಸ್ತಕದ ಸಹಕಾರದಿಂದ ನನ್ನ ಮಗ ಉತ್ತಮ ಫಲಿತಾಂಶ ಪಡೆದಿದ್ದಾನೆ ಆದ್ದರಿಂದ ತಮಗೆ ಹಾಗು ಇಲಾಖೆಗೆ ಧನ್ಯವಾದಗಳು ತಿಳಿಸಿದ್ದು. ಇದೇ ಸಂದರ್ಭದಲ್ಲಿ ಅವರು ನೆನಪಿಸಿಕೊಂಡಿದ್ದು ವಿಶೇಷವಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ. ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಬಸವರಾಜು ,ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಡಾ. ದೀಪು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮ ರತ್ನಾಕರ ನೌಕರರ ಸಂಘದ ಕಾರ್ಯದರ್ಶಿ ಮಹೇಶ್ ಎಚ್ ಎಸ್ ಉಪಾಧ್ಯಾಯರ ಸಹಕಾರ ಸಂಘದ ಉಪಾಧ್ಯಕ್ಷ ಸತೀಶ ದಳವಾಯಿ. ನೌಕರ ಸಂಘದ ನಿರ್ದೇಶಕ ಹನುಮಂತರಾಜು, ಎಂಎ ರಂಗನಾಥ, ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ವೀಣಾ ಶಿಕ್ಷಣ ಸಂಯೋಜಿಕಗಳಾದ ಶ್ರೀಪತಿ ಎನ್ . ರಾಜುಸ್ವಾಮಿ . ಗೋಪಾಲ್ ರಾವ್. ದೊರೆಸ್ವಾಮಿ. ಶಿಕ್ಷಕ ಕೆಎಸ್ ಹುಂಡಿ ರವಿ ಸಿಆರ್ ಪಿ ಹಾಗೂ ಸಿಆರ್‌ಪಿ ಮತ್ತು ತೀರ್ಪುಗಾರರು ಸುಮಾರು 600 ಕ್ಕಿಂತಲೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
