ಕಾಂಗ್ರೆಸ್ ಪಕ್ಷದವರು ಸ್ವಾಭಿಮಾನಿ ಮತದಾರರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ : ಪಿ.ಎನ್.ರಘುನಾಥರೆಡ್ಡಿ ಆರೋಪ
ವಿಜಯ ದರ್ಪಣ ನ್ಯೂಸ್….
ಕಾಂಗ್ರೆಸ್ ಪಕ್ಷದವರು ಸ್ವಾಭಿಮಾನಿ ಮತದಾರರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ : ಪಿ.ಎನ್.ರಘುನಾಥರೆಡ್ಡಿ ಆರೋಪ

ಶಿಡ್ಲಘಟ್ಟ : ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಮಾಜಿ ಸಚಿವ ವಿ.ಮುನಿಯಪ್ಪ ಪುತ್ರ ಶಶಿಧರ್ ಮುನಿಯಪ್ಪ ಅಥವಾ ಪುಟ್ಟು ಆಂಜಿನಪ್ಪ, ರಾಜೀವ್ಗೌಡ ಈ ಮೂವರಲ್ಲಿ ಯಾರು ಸ್ಪರ್ದಿಸುತ್ತಾರೆ ಎಂಬುದನ್ನು ಈ ಕ್ಷೇತ್ರದ ಮತದಾರರಿಗೆ ಸ್ಪಷ್ಟಪಡಿಸಬೇಕೆಂದು ಜೆಡಿಎಸ್ ಮುಖಂಡ ಪೂಲಕುಂಟಹಳ್ಳಿ ರಘುನಾಥರೆಡ್ಡಿ ಒತ್ತಾಯಿಸಿದರು.
ಚಿಮುಲ್ ಚುನಾವಣೆಯ ಜಂಗಮಕೋಟೆ, ಶಿಡ್ಲಘಟ್ಟ ಮತ್ತು ಚೇಳೂರು ಕ್ಷೇತ್ರದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.
ಶಿಡ್ಲಘಟ್ಟ ವಿದಾನಸಭಾ ಕ್ಷೇತ್ರದಲ್ಲಿನ ಮತದಾರರು ಸ್ವಾಭಿಮಾನಿಗಳು ಜಾತಿ, ಧರ್ಮ, ಹಣ ಇನ್ನಿತರೆ ಯಾವುದೆ ಆಮಿಷಕ್ಕೂ ಒಳಗಾಗದೆ ಮತ ಹಾಕುವ ಸ್ವಾಭಿಮಾನಿ ಮತದಾರರನ್ನು ಕಾಂಗ್ರೆಸ್ಸಿನವರು ಚುನಾವಣೆಗಳಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಮಾಜಿ ಸಚಿವ ವಿ.ಮುನಿಯಪ್ಪ ಮತ್ತು ಪುತ್ರ ಶಶಿಧರ್ ಮುನಿಯಪ್ಪ ಅವರು ರಾಜೀವ್ಗೌಡ ಅವರನ್ನು ಕರೆತಂದು ನಮ್ಮ ರಾಜಕೀಯ ವಾರಸುದಾರರು ಇವರೆ ಎಂದು ಕ್ಷೇತ್ರದ ಮತದಾರರಿಗೆ ಪರಿಚಯಿಸಿದರು.
ರಾಜೀವ್ಗೌಡ ಅವರ ಮೇಲೆ ಈಗಾಗಲೆ 12ಕ್ಕೂ ಹೆಚ್ಚು ಪ್ರಕರಣಗಳಿವೆ ,ಹಾಗೆಯೆ ಆಂಜಿನಪ್ಪ (ಪುಟ್ಟು)ಮೇಲೂ ಸರಕಾರಿ ಜಮೀನು ಕಬಳಿಸಿ ಲೇಔಟ್ ಮಾಡಿ ಸೈಟ್ಗಳನ್ನು ಮಾರಾಟ ಮಾಡುತ್ತಿರುವ ಆರೋಪಗಳು ಇವೆ ,ರಾಜೀವ್ಗೌಡ ಮತ್ತು ಆಂಜಿನಪ್ಪ (ಪುಟ್ಟು) ಇಬ್ಬರು ಕೂಡ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದು ಅಲ್ಲಿನ ತಪ್ಪುಗಳಿಂದ ರಕ್ಷಿಸಿಕೊಳ್ಳಲು ರಾಜಕೀಯಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ಶಿಡ್ಲಘ್ಟಟ್ಟದಲ್ಲಿ ಹಣ ಖರ್ಚು ಮಾಡಿ ಗೆದ್ದು ಎಮ್ಮೆಲ್ಲೆ ಆಗಿಬಿಟ್ಟರೆ ನಮ್ಮೆಲ್ಲಾ ದಂಧೆಗಳಿಂದ ಪಾರಾಗಬಹುದು ಎಂದು ರಾಜೀವ್ಗೌಡ ಮತ್ತು ಆಂಜಿನಪ್ಪ (ಪುಟ್ಟು) ಕನಸು ಕಂಡಿದ್ದರೆ ಅದು ತಪ್ಪು ಈ ಕ್ಷೇತ್ರದ ಜನರು ಅಮಾಯಕರಲ್ಲ ಎಂದಿಗೂ ಈ ಕ್ಷೇತ್ರದಲ್ಲಿ ರಾಜೀವ್ಗೌಡ ಮತ್ತು ಆಂಜಿನಪ್ಪ (ಪುಟ್ಟು)ಗೆ ಮಣೆ ಹಾಕುವ ಪ್ರಶ್ನೆಯೆ ಇಲ್ಲ ಎಂದರು.
ಈ ಹಿಂದೆ ಕಾಂಗ್ರೆಸ್ನಿಂದ ಟಿಕೇಟ್ ಆಕಾಂಕ್ಷಿಯಾಗಿದ್ದ ಆಂಜಿನಪ್ಪ(ಪುಟ್ಟು) ಅವರು ಮುನಿಯಪ್ಪ ಮತ್ತು ಶಶಿಧರ್ ಅವರು 30 ಕೋಟಿ ರೂ.ಹಣ ಪಡೆದು ರಾಜೀವ್ಗೌಡ ಅವರಿಗೆ ‘ಬಿ’ ಫಾರಂ ಮಾರಾಟ ಮಾಡಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.
ಆದರೆ ಅದೇ ಶಶಿಧರ್ ಇದೀಗ ಆಂಜಿನಪ್ಪ(ಪುಟ್ಟು) ಅವರ ಪರ ನಿಂತುಕೊಂಡಿದ್ದಾರೆ. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸುತ್ತೇವೆಂದು ಇಬ್ಬರೂ ಒಂದಾಗಿದ್ದು ಇದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದರು.
ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಮಾಜಿ ಶಾಸಕ ವಿ.ಮುನಿಯಪ್ಪ ಅವರು ವಯೋ ಸಹಜ ಕಾರಣದಿಂದ ರಾಜಕೀಯ ನಿವೃತ್ತಿ ಘೋಷಿಸಿದಾಗ ಶಶಿಧರ್ ಮುನಿಯಪ್ಪ ಅವರನ್ನೆ ಸ್ರ್ಪಸುವಂತೆ ಕಾಂಗ್ರೆಸ್ಸಿನವರು ಒತ್ತಾಯಿಸಿದರು. ಆದರೆ ಆಗ ಶಶಿಧರ್ ಮುನಿಯಪ್ಪ ಅವರು ಸ್ಪರ್ಧೆಗೆ ಆಸಕ್ತಿ ತೋರಲಿಲ್ಲ ಬದಲಿಗೆ ರಾಜೀವ್ಗೌಡ ಅವರನ್ನು ಬೆಂಬಲಿಸಿದರು.
ಆ ನಂತರ ರಾಜೀವ್ಗೌಡ ಅವರನ್ನು ದೂರವಿಟ್ಟು ತಮ್ಮ ಮೇಲೆ ಹಣಪಡೆದು ಟಿಕೇಟ್ ಮಾರಾಟ ಮಾಡಿಕೊಂಡರು ಎಂದು ಆರೋಪಿಸಿದ್ದ ಆಂಜಿನಪ್ಪ (ಪುಟ್ಟು) ಅವರೊಂದಿಗೆ ಕೈ ಜೋಡಿಸಿರುವುದು ಈ ಕ್ಷೇತ್ರದ ಸ್ವಾಭಿಮಾನಿ ಮತದಾರರಿಗೆ ಮಾಡಿದ ಅಪಮಾನ ಎಂದು ದೂರಿದರು.
ಚುನಾವಣೆಯಲ್ಲಿ ಯಾರಿಗೇ ಆಗಲಿ ಟಿಕೇಟ್ ಕೊಡುವುದು ಬಿಡುವುದು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟಿದ್ದು. ನಮ್ಮದೇನು ತಕರಾರು ಇಲ್ಲ. ಆದರೆ ಸ್ವಾಭಿಮಾನಿ ಮತದಾರರ ಘನತೆಗೆ ದಕ್ಕೆ ತರುವ ಕೆಲಸ ಆಗಬಾರದು ಎನ್ನುವ ಕಾರಣಕ್ಕೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಯಾರು ಸ್ರ್ಪಸುತ್ತಾರೆ ಎಂಬುದನ್ನು ಮತದಾರರಿಗೆ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.
ಗೆಲುವು ನಿಶ್ಚಿತ :
ಚಿಮುಲ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಶಿಡ್ಲಘಟ್ಟ ಕ್ಷೇತ್ರದಿಂದ ಬಂಕ್ ಮುನಿಯಪ್ಪ, ಜಂಗಮಕೋಟೆ ಕ್ಷೇತ್ರದಿಂದ ಹುಜಗೂರು ರಾಮಣ್ಣ ಹಾಗೂ ಚೇಳೂರು ಕ್ಷೇತ್ರದಿಂದ ಕೃಷ್ಣಾರೆಡ್ಡಿ ಅವರು ಗೆಲ್ಲುತ್ತಾರೆ, ಇದರಲ್ಲಿ ಯಾವುದೆ ಅನುಮಾನವಿಲ್ಲ ಎಂದು ಭವಿಷ್ಯ ನುಡಿದರು.
ನಮ್ಮ ನಾಯಕರಾದ ಶಾಸಕ ಬಿ.ಎನ್.ರವಿಕುಮಾರ್ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಲಿದ್ದು ನಮಗೆ ಪೂರಕವಾದ ವಾತಾವರಣವಿದೆ. ನಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.
