ವಿಜಯ ದರ್ಪಣ ನ್ಯೂಸ್…..
ಶಾಸನಗಳು ಮತ್ತು ಸಂಸ್ಕೃತಿಯ ರಕ್ಷಣೆ ಅತ್ಯಂತ ಅವಶ್ಯಕ: ತಹಸಿಲ್ದಾರ್ ಗಗನ ಸಿಂಧು

ಶಿಡ್ಲಘಟ್ಟ : ಶಾಸನಗಳು ನಮ್ಮ ಸಂಸ್ಕೃತಿಯ ಜೀವಂತ ದಾಖಲೆಗಳಾಗಿದ್ದು, ಇವುಗಳ ರಕ್ಷಣೆ ಅತ್ಯಂತ ಅವಶ್ಯಕ ,ರಕ್ಷಣೆಗೆ ತಾಲೂಕಾಡಳಿತದಿಂದ ಅಗತ್ಯವಿರುವ ಎಲ್ಲ ಸಹಕಾರ ನೀಡಲಾಗುವುದು ಎಂದು
ತಹಸೀಲ್ದಾರ್ ಎನ್.ಗಗನಸಿಂಧು ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ತಹಸೀಲ್ದಾರ್ ಅವರನ್ನು ಭೇಟಿಯಾದ ತಜ್ಞರ ತಂಡ ತಾಲ್ಲೂಕಿನ ಐತಿಹಾಸಿಕ ಶಾಸನಗಳು, ವೀರಗಲ್ಲುಗಳ ಸಂರಕ್ಷಣೆಗೆ ತಾಲ್ಲೂಕಾಡಳಿತ ಕ್ರಮವಹಿಸಬೇಕೆಂದು ಒತ್ತಾಯಿಸಿ ಮನವಿಯನ್ನು ನೀಡಿದ ನಂತರ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಬಹಳಷ್ಟು ಶಾಸನಗಳು, ವೀರಗಲ್ಲುಗಳನ್ನು ಗುರುತಿಸಿರುವ ತಜ್ಞರ ತಂಡ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಿಗೆ
ಉಪನ್ಯಾಸದ ಜತೆಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯ ಮಹತ್ವ ತಿಳಿಸಿಕೊಡಬೇಕು ಎಂದರು.
ಇದೇ ವೇಳೆ ಶಾಸನಗಳು ನಮ್ಮ ಸಂಸ್ಕೃತಿಯ ಜೀವಂತ ಕೈಗೊಂಡಿದ್ದ ಶಾಸನಗಳ ಅಧ್ಯಯನದ ವೇಳೆ ದೊರೆತ ಶಾಸನಗಳು, ವೀರಗಲ್ಲುಗಳ ದುಸ್ಥಿತಿ ಗಮನಿಸಿದ ತಜ್ಞರು, ಅಮೂಲ್ಯ ಕುರುಹುಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ರಕ್ಷಣೆಗೆ ಮುಂದಾಗುವಂತೆ ತಹಸೀಲ್ದಾರ್ ಎನ್.ಗಗನಸಿಂಧು ಅವರಿಗೆ ಶಾಸನಗಳ ತಜ್ಞರ ತಂಡ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸನ ತಜ್ಞರಾದ ಕೆ.ಧನಪಾಲ್, ಅಪ್ಪೇಗೌಡನಹಳ್ಳಿ ಎಂ.ತ್ಯಾಗರಾಜು, ಗ್ರಾಮ ಪಂಚಾಯತಿ ಪಿಡಿಒ ಮಧು, ಕಾರ್ಯದರ್ಶಿ ಶ್ರೀನಿವಾಸ್,ಗ್ರಾಮ ಲೆಕ್ಕಾಧಿಕಾರಿ ನಯನಾ, ಸಂಶೋಧನಾ ವಿದ್ಯಾರ್ಥಿನಿಯರಾದ ಅಶ್ವಿನಿ , ಜ್ಞಾನೇಶ್ವರಿ ಹಾಜರಿದ್ದರು.










